ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢ: ಎರಡನೆಯ ಹಂತದಲ್ಲಿ ಸುಮಾರು ಶೇ 72ರಷ್ಟು ಮತದಾನ

|
Google Oneindia Kannada News

ರಾಯಪುರ, ನವೆಂಬರ್ 20: ಛತ್ತೀಸ್ ಗಢ ವಿಧಾನಸಭೆಗೆ ಮಂಗಳವಾರ ನಡೆದ ಎರಡನೆಯ ಮತ್ತು ಕೊನೆಯ ಹಂತದ ಮತದಾನದಲ್ಲಿ ಸುಮಾರು ಶೇ 72ರಷ್ಟು ಮಂದಿ ಮತ ಚಲಾಯಿಸಿದ್ದಾರೆ.

ಛತ್ತೀಸ್ ಗಢ ಚುನಾವಣೆ : ಇಂದು ಎರಡನೇ ಹಂತದ ಮತದಾನಛತ್ತೀಸ್ ಗಢ ಚುನಾವಣೆ : ಇಂದು ಎರಡನೇ ಹಂತದ ಮತದಾನ

2013 ಚುನಾವಣೆಯಲ್ಲಿ ಶೇ 77.8ರಷ್ಟು ಮತದಾನ ನಡೆದಿತ್ತು. ಅಂತಿಮ ಮಾಹಿತಿ ಲಭ್ಯವಾದ ಬಳಿಕ ಇಂದು ನಡೆದಿರುವ ಮತದಾನದ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಹನುಮಂತ ಬಹುದೊಡ್ಡ ಬುಡಕಟ್ಟು ವ್ಯಕ್ತಿ: ಯೋಗಿ ಆದಿತ್ಯನಾಥಹನುಮಂತ ಬಹುದೊಡ್ಡ ಬುಡಕಟ್ಟು ವ್ಯಕ್ತಿ: ಯೋಗಿ ಆದಿತ್ಯನಾಥ

ಮತದಾನ ಪ್ರಕ್ರಿಯೆ ಸರಾಗವಾಗಿ ನಡೆಯಲಿ ಎಂಬ ಉದ್ದೇಶದಿಂದ ಒಂದು ಲಕ್ಷಕ್ಕೂ ಹೆಚ್ಚಿನ ಪೊಲೀಸರು, ಸೈನಿಕರನ್ನು, ಹೆಲಿಕಾಪ್ಟರ್, ಡ್ರೋನ್‌ಗಳನ್ನು ನಿಯೋಜಿಸಲಾಗಿತ್ತು.

Chhattisgarh elections: nearly 72 per cent voting in second phase

ನಕ್ಸಲ್ ಪೀಡಿತ ಪ್ರದೇಶಗಳ 18 ಕ್ಷೇತ್ರಗಳಲ್ಲಿ ನ.12ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 76.28ರಷ್ಟು ಮಂದಿ ಮತ ಚಲಾಯಿಸಿದ್ದರು.

'ಹಾವುಗಳ' ಸಹವಾಸಕ್ಕಿಂತ ವಿರೋಧ ಪಕ್ಷದಲ್ಲಿ ಕೂರುವುದೇ ವಾಸಿ: ಮಾಯಾವತಿ'ಹಾವುಗಳ' ಸಹವಾಸಕ್ಕಿಂತ ವಿರೋಧ ಪಕ್ಷದಲ್ಲಿ ಕೂರುವುದೇ ವಾಸಿ: ಮಾಯಾವತಿ

ಎರಡನೆಯ ಹಂತದಲ್ಲಿ 19 ಜಿಲ್ಲೆಗಳಲ್ಲಿನ 72 ಸೀಟುಗಳಿಗಾಗಿ ಮತದಾನ ನಡೆದಿತ್ತು. 19,000 ಸಾವಿರ ಮತಗಟ್ಟೆಗಳಲ್ಲಿ 1.5 ಕೋಟಿ ಮಂದಿ ಅರ್ಹ ಮತದಾರರಿದ್ದರು.

ಸಂಜೆ ಐದು ಗಂಟೆಗೆ ಮತದಾನ ಕೊನೆಗೊಳ್ಳುತ್ತಿದ್ದರೂ, ಕೆಲವು ಮತಗಟ್ಟೆಗಳಲ್ಲಿ ಆ ವೇಳೆಗೇ ಸಾಕಷ್ಟು ಮಂದಿ ಸರದಿಯಲ್ಲಿ ನಿಂತಿದ್ದರು.

ಯೋಗಿಯನ್ನು 'ಯೋಗಿ' ಎಂದು ಕರೆಯುವಂತಿಲ್ಲ: ವೀರಪ್ಪ ಮೊಯಿಲಿಯೋಗಿಯನ್ನು 'ಯೋಗಿ' ಎಂದು ಕರೆಯುವಂತಿಲ್ಲ: ವೀರಪ್ಪ ಮೊಯಿಲಿ

72 ಕ್ಷೇತ್ರಗಳಲ್ಲಿ 119 ಮಹಿಳೆಯರು ಸೇರಿದಂತೆ 1,079 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕಳೆದ 15 ವರ್ಷಗಳಿಂದ ಬಿಜೆಪಿ ಇಲ್ಲಿ ಅಧಿಕಾರದಲ್ಲಿದೆ.

English summary
Nearly 72 per cent voting was recorded in the second phase of Chhattisgarh assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X