• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಛತ್ತೀಸ್ ಗಢದಲ್ಲಿ ಕಾಂಗ್ರೆಸ್ಸಿಗೆ ಪುಕ ಪುಕ, ಕುದುರೆ ವ್ಯಾಪಾರದ ಭೀತಿ

|

ರಾಯ್ ಪುರ್, ಡಿಸೆಂಬರ್ 11: ಛತ್ತೀಸ್‌ಗಡ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಬಹು ಗೊಂದಲದಿಂದ ಕೂಡಿದೆ. ಆದರೆ, ಕಾಂಗ್ರೆಸ್ ಮಾತ್ರ ಅಧಿಕಾರಕ್ಕೇರುವ ಉತ್ಸಾಹದಲ್ಲಿದೆ. ಆದರೆ, ಕಾಂಗ್ರೆಸ್ಸಿಗೆ ಕುದುರೆ ವ್ಯಾಪಾರದ ಭೀತಿ ಎದುರಾಗಿದ್ದು, ತನ್ನ ಅಭ್ಯರ್ಥಿಗಳನ್ನು ಕಾಯಲು ಸಕತ್ ಯೋಜನೆ ಹಾಕಿಕೊಂಡಿದೆ.

ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಸುರಕ್ಷಿತವಾಗಿರಿಸಲು ಕಾಂಗ್ರೆಸ್ ಹೈಕಮಾಂಡ್ ಯೋಜನೆ ಹಾಕಿಕೊಂಡಿದ್ದು, ಈ ಕುರಿತಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೀಡಿದ ಸೂಚನೆಯಂತೆ ನಡೆದುಕೊಳ್ಳಲಾಗಿದೆ.

15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ: ಸೋಲಿಗೆ 5 ಕಾರಣಗಳು

ಹೈಕಮಾಂಡ್ ಆದೇಶದಂತೆ ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಅಭ್ಯರ್ಥಿಗಳನ್ನು ಹೇಗೆಲ್ಲ ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆ ಸೂಚನೆಗಳನ್ನು ಪಡೆದುಕೊಳ್ಳಲಾಗುತ್ತಿದೆ.

ಛತ್ತೀಸ್‌ಗಡ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಬಹು ಗೊಂದಲದಿಂದ ಕೂಡಿದೆ. ಕೆಲವು ಸಂಸ್ಥೆಗಳು, ಮಾಧ್ಯಮಗಳು ಕಾಂಗ್ರೆಸ್‌ಗೆ ಬಹುಮತ ನೀಡಿದ್ದರೆ ಇನ್ನು ಕೆಲವು ಬಿಜೆಪಿ ನೀಡಿದೆ, ಮತ್ತೆ ಕೆಲವು ಎರಡಕ್ಕೂ ಸಮಬಲ ಬರುತ್ತದೆಂದು ಹೇಳಿವೆ.

ಪೋಲ್ಸ್‌ ಆಫ್ ಪೋಲ್ಸ್‌ ಅಥವಾ ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಛತ್ತೀಸ್‌ಘಡ್‌ನಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುತ್ತಿಲ್ಲ. ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ 43 ಸ್ಥಾನ ಗಳಿಸಿದರೆ, ಬಿಜೆಪಿ 40 ಸ್ಥಾನಗಳಲ್ಲಿ ವಿಜಯ ಸಾಧಿಸುತ್ತಿದೆ. ಇತರೆ ಪಕ್ಷಗಳು 6 ಸ್ಥಾನ ಗೆಲ್ಲಲಿವೆ. ಅಲ್ಲಿಗೆ ಛತ್ತೀಸ್‌ಘಡ್‌ನಲ್ಲಿ ಮೈತ್ರಿ ಸರ್ಕಾರ ರಚಿತವಾಗಲಿದೆ.

ಛತ್ತೀಸ್ ಗಢದಲ್ಲಿ ಡಿ.11ರ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ಸಿಗೆ ಭಾರೀ ಆಘಾತ!

ಡಿ.11ರ ಈ ಸಮಯ 10 ಗಂಟೆ ಟ್ರೆಂಡಿಂಗ್ ಛತ್ತೀಸ್ ಗಡದಲ್ಲಿ ಕಾಂಗ್ರೆಸ್ 54, ಬಿಜೆಪಿ 24 ಹಾಗೂ ಇತರೆ 8 ಪೂರ್ಣ ಟ್ರೆಂಡಿಂಗ್ ತಿಳಿಯಲು ಈ ಲಿಂಕ್ ಫಾಲೋ ಮಾಡಿ

ಕಾಂಗ್ರೆಸ್ಸಿಗೆ ಆತಂಕ ಏಕೆ?

ಕಾಂಗ್ರೆಸ್ಸಿಗೆ ಆತಂಕ ಏಕೆ?

ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಪಕ್ಷವು ಆತಂಕದ ಸ್ಥಿತಿಯಲ್ಲಿದೆ. ಪಕ್ಷದ ಶಾಸಕರನ್ನು ಇತರೆ ಪಕ್ಷದವರು ತಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದು ಎಂಬ ಸಂಶಯ ಬಲವಾಗಿ ಕಾಡುತ್ತಿದೆ. ಕುದುರೆ ವ್ಯಾಪಾರದ ಬಗ್ಗೆ ಕಾಂಗ್ರೆಸ್ ಹಾಗೂ ಚುನಾವಣಾ ಆಯೋಗ ನಿಗಾ ವಹಿಸಿದೆ.

ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಗೆಲುವು ಸಾಧಿಸಿದ ಅಭ್ಯರ್ಥಿಗಳು ರಾಯ್ ಪುರಕ್ಕೆ ತೆರಳುವಂತೆ ಸೂಚಿಸಲಾಗಿದೆ. ಅಪ್ತರನ್ನು ಬಿಟ್ಟು ಉಳಿದವರ ಸಂಪರ್ಕ ಸಾಧಿಸದಂತೆ ಎಚ್ಚರಿಕೆ ನೀಡಲಾಗಿದೆ. ರಾಯ್ ಪುರ್ ತಲುಪಿದ ಬಳಿಕ ಅವರನ್ನು ಗೌಪ್ಯ ಸ್ಥಳಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ.

ಅಜಿತ್ ಸಿಂಗ್ ಪರಿಸ್ಥಿತಿಯ ಭೀತಿ

ಅಜಿತ್ ಸಿಂಗ್ ಪರಿಸ್ಥಿತಿಯ ಭೀತಿ

2003ರಲ್ಲಿ ಆಗಿನ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿತ್ತು. ಆಗ ನಡೆದ ಶಾಸಕರ ಕುದುರೆ ವ್ಯಾಪಾರ ನಂತರ ದೊಡ್ಡ ಹಗರಣವಾಗಿ ಸಿಬಿಐ ತನಿಖೆಗೊಳಪಟ್ಟಿದೆ.

ನಂತರ ಕಾಂಗ್ರೆಸ್ ಜತೆ ವೈಮನಸ್ಸು ಉಂಟಾಗಿ 2016ರಲ್ಲಿ ಪಕ್ಷ ತೊರೆದರು. ಕಳೆದ ಕೆಲವು ದಿನಗಳ ಹಿಂದೆ ಜನತಾ ಕಾಂಗ್ರೆಸ್ ಛತ್ತೀಸಗಢ್ (ಜೆಸಿಸಿ) ಪಕ್ಷ ಕಟ್ಟಿದರು. ಮಯಾವತಿ ಅವರನ್ನು ಪ್ರಧಾನಿ ಮಾಡಲು ಬಿಎಸ್ಪಿಗೆ ಬೆಂಬಲ ಘೋಷಿಸುವುದಾಗಿ ಹೇಳಿದ್ದಾರೆ. ಈಗ ಸದ್ಯ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಿದ್ದಾರೆ.

ಸಮೀಕ್ಷೆಗಳಲ್ಲಿ ಸಮಬಲ

ಸಮೀಕ್ಷೆಗಳಲ್ಲಿ ಸಮಬಲ

2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39, ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದರು.

ಆದರೆ, 2018ರ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 2, ಕಾಂಗ್ರೆಸ್ 6 ಸ್ಥಾನ ಕಡಿಮೆಗಳಿಸಲಿದ್ದಾರೆ. ಇತರರು 8 ಸ್ಥಾನ ಹೆಚ್ಚುಗಳಿಸಲಿದ್ದಾರೆ.

ಆದರೆ, 2018ರ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 2, ಕಾಂಗ್ರೆಸ್ 6 ಸ್ಥಾನ ಕಡಿಮೆಗಳಿಸಲಿದ್ದಾರೆ. ಇತರರು 8 ಸ್ಥಾನ ಹೆಚ್ಚುಗಳಿಸಲಿದ್ದಾರೆ.

ಆದರೆ, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗೆ ಬಲ ಸಿಗುವಂತೆ ಕಾಣಿಸಿದರೂ ಯಾವ ಪಕ್ಷಕ್ಕೂ ಮ್ಯಾಜಿಕ್ ನಂಬರ್ ದಾಟುವ ಸ್ಥಿತಿ ಬರುವುದಿಲ್ಲ ಎಂಬ ಸ್ಥಿತಿಯಿದೆ.

ಮಾಯಾವತಿ ಮೇಲೆ ಕಣ್ಣು

ಮಾಯಾವತಿ ಮೇಲೆ ಕಣ್ಣು

ಕಳೆದ 15 ವರ್ಷಗಳಿಂದ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿಯು ಅಧಿಕಾರ ನಡೆಸುತ್ತಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 39 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿಯು 49 ಸ್ಥಾನ ಪಡೆದಿತ್ತು. ಬಿಎಸ್ ಪಿ ಹಾಗೂ ಪಕ್ಷೇತರರು ತಲಾ 1 ಸ್ಥಾನದಲ್ಲಿ ಗೆದ್ದಿದ್ದರು.

ಬಹುಜನ ಸಮಾಜ ಪಕ್ಷವು 35 ಸ್ಥಾನಗಳಲ್ಲಿ ಹಾಗೂ ಜನತಾ ಕಾಂಗ್ರೆಸ್ ಛತ್ತೀಸ್ ಗಢ 55 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಹೀಗಾಗಿ, ಕಾಂಗ್ರೆಸ್ ಈ ಬಾರಿ ಗೆದ್ದ ಸ್ಥಾನಗಳನ್ನು ಉಳಿಸಿಕೊಂಡು, ಬೇರೆ ಪಕ್ಷಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲು ಯತ್ನಿಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chhattisgarh Election results 2018 : Congress plan to prevent poaching, MLAs to be kept at hotel. Congress seems to be confident of winning in the state but appears more worried about poaching of their MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more