ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢ: ನಕ್ಸಲರು ಅಪಹರಿಸಿದ್ದ ಕೋಬ್ರಾ ಜವಾನ್ ಬಿಡುಗಡೆ

|
Google Oneindia Kannada News

ಬಿಜಾಪುರ, ಏಪ್ರಿಲ್ 08: ಛತ್ತೀಸ್ ಗಢದಲ್ಲಿ ನಕ್ಸಲರು ಅಪಹರಿಸಿದ್ದ ಕೋಬ್ರಾ ಜವಾನ್ ರಾಕೇಶ್ವರ್ ಸಿಂಗ್ ಮನ್ಹಸ್ ಅವರನ್ನು 100 ಗಂಟೆಗಳ ಬಳಿಕ ನಕ್ಸಲರು ಗುರುವಾರ ಬಿಡುಗಡೆಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Chhattisgarh Maoist attack : ಭಾರತೀಯ ಸೇನೆಯ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆ ಎಡವಿದ್ದೆಲ್ಲಿ?Chhattisgarh Maoist attack : ಭಾರತೀಯ ಸೇನೆಯ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆ ಎಡವಿದ್ದೆಲ್ಲಿ?

ಕಳೆದ ಏಪ್ರಿಲ್ 3ರಂದು ಸುಕ್ಮಾ ಮತ್ತು ಬಿಜಾಪುರ್ ಗಡಿಯಲ್ಲಿ ನಕ್ಸಲರು ಮತ್ತು ಭದ್ರತಾ ಪಡೆ ಸಿಬ್ಬಂದಿ ನಡುವೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗುಂಡಿನ ಚಕಮಕಿಯಲ್ಲಿ 22 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಕ್ಸಲರು ಭದ್ರತಾ ಪಡೆಯ 24ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಕದ್ದುಕೊಂಡು ಹೋಗಿದ್ದರು. ಇದರ ಬೆನ್ನಲ್ಲೇ ಸುಕ್ಮಾ ಮತ್ತು ಬಿಜಾಪುರ ಗಡಿ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಚುರುಕುಗೊಳಿಸಿತ್ತು.

Chhattisgarh: CoBRA Jawan Rakeshwar Singh Manhas Released By Naxal

ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ 31ಕ್ಕೂ ಹೆಚ್ಚು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದು, ಈ ಪೈಕಿ 16 ಸಿಆರ್ ಪಿಎಫ್ ಯೋಧರಾಗಿದ್ದಾರೆ. 21 ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದರು. ಹೀಗೆ ನಾಪತ್ತೆಯಾದ ಯೋಧರಲ್ಲಿ 7 ಮಂದಿ ಸಿಆರ್ ಪಿಎಫ್ ಯೋಧರೂ ಸೇರಿದ್ದರು.

Chhattisgarh: CoBRA Jawan Rakeshwar Singh Manhas Released By Naxal

ರಾಕೇಶ್ವರ್ ಸಿಂಗ್ ಬಿಡುಗಡೆಗೆ ಪತ್ನಿ ಸಂತಸ:

ಅವರು ಖಂಡಿತವಾಗಿಯೂ ವಾಪಸ್ ಬಂದೇ ಬರುತ್ತಾರೆ ಎಂದು ನಾನು ಬಹಳಷ್ಟು ಭರವಸೆಯನ್ನು ಇಟ್ಟುಕೊಂಡಿದ್ದೆನು. ಇಂದು ನನ್ನ ಪಾಲಿಗೆ ಅತೀವ ಸಂತೋಷದ ದಿನವಾಗಿದೆ. ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಕೋಬ್ರಾ ಜವಾನ್ ರಾಕೇಶ್ವರ್ ಸಿಂಗ್ ಮನ್ಹಸ್ ಅವರ ಪತ್ನಿ ಮೀನು ಅವರು ತಿಳಿಸಿದ್ದಾರೆ.

English summary
Chhattisgarh: CoBRA Jawan Rakeshwar Singh Manhas Released By Naxal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X