ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢದಲ್ಲಿ ಚುನಾವಣೆ ಬಿಸಿ: ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್

|
Google Oneindia Kannada News

ರಾಯ್ಪುರ, ನವೆಂಬರ್ 12: ಬಹಳ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ಚುನಾವಣೆ ಇಂದಿನಿಂದ ಆರಂಭವಾಗಲಿದ್ದು, ಮೊದಲಿಗೆ ಛತ್ತೀಸ್ ಗಢ ವಿಧಾನಸಭೆಯ ಮೊದಲ ಹಂತದ ಮತದಾನ ನಡೆಯಲಿದೆ.

ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. ಛತ್ತೀಸ್ ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತ ನವೆಂಬರ್ 20 ರಂದು ನಡೆಯಲಿದ್ದು, 72 ಸ್ಥಾನಗಳಿಗೆ ಮತದಾನ ನಡೆಯಲಿದೆ.

Chhattisgarh assemly elections 2018, First phase: Live updates

ಪ್ರಸ್ತುತ ಛತ್ತೀಸ್ ಗಢದಲ್ಲಿ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಛತ್ತೀಸ್ ಗಢ ಚುನಾವಣೆಗೆ ಸಂಬಂಧಿಸಿದಂತೆ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
3:06 PM, 12 Nov

ಉಗುರಿನಲ್ಲಿ ಶಾಯಿಯ ಗುರುತು ಕಂಡರೆ ಕೈಕತ್ತರಿಸುತ್ತೇವೆ ಎಂಬ ನಕ್ಸಲ್ ಬೆದರಿಕೆಯನ್ನೂ ನಿರ್ಲಕ್ಷ್ಯಿಸಿ ದಾಂತೇವಾಡಲ್ಲಿ ಜನರು ಮತಚಲಾಯಿಸುತ್ತಿರುವುದು ಕಂಡುಬರುತ್ತಿದೆ.
1:17 PM, 12 Nov

1 ಗಂಟೆ ಹೊತ್ತಿಗೆ 25.15% ಪ್ರತಿಶತ ಮತದಾನ
10:17 AM, 12 Nov

10 ಗಂಟೆಯವರೆಗೆ 10.7 % ಮತದಾನ
9:38 AM, 12 Nov

ದಾಂತೇವಾಡದಲ್ಲಿ ಮತ ಚಲಾಯಿಸಿದ ಅಂಧ ಮತದಾರ
8:55 AM, 12 Nov

ಎರಡನೇ ಹಂತದ ಮತದಾನ ನವೆಂಬರ್ 20 ರಂದು 72 ಕ್ಷೇತ್ರಗಳಿಗೆ ನಡೆಯಲಿದೆ.
8:54 AM, 12 Nov

2013 ರ ಚುನಾವಣೆಯಲ್ಲಿ ಬಿಜೆಪಿ 49 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 39, ಬಿಎಸ್ಪಿ ಮತ್ತು ಪಕ್ಷೇತರ ತಲಾ 1 ಸ್ಥಾನಗಳಲ್ಲಿ ಜಯಗಳಿಸಿದ್ದರು.
7:00 AM, 12 Nov

ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 1291 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Advertisement
6:59 AM, 12 Nov

ಮೊದಲ ಹಂತದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಾದ ಬಸ್ಟಾರ್, ಕಾಂಕೇರ್, ಸುಕ್ಮಾ, ಬಿಜಾಪುರ, ದಾಂತೇವಾಡ, ನಾರಾಯಣಪುರ, ಕೊಂಡಗಾಂವ್, ರಾಜ್ನಂದಗಾಂವ್ ಸೇರಿದಂತೆ 18 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

English summary
Chhattisgarh assembly elections 2018: State will be facing its crucial 1st phase of elections today(November 12). Results will be out on December 11. Here are LIVE updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X