ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢ:ಬಿಜೆಪಿ ಶಾಸಕನ ಕೊಲೆಗೈದ ಇಬ್ಬರು ನಕ್ಸಲರ ಹತ್ಯೆ

|
Google Oneindia Kannada News

ರಾಯ್ಪುರ, ಏಪ್ರಿಲ್ 18: ಛತ್ತೀಸ್ ಗಢದಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡೆವಿ ಎಂಬುವವರನ್ನು ಏಪ್ರಿಲ್ 09 ರಂದು ಕೊಲೆಗೈದಿದ್ದ ಇಬ್ಬರು ನಕ್ಸಲರನ್ನು ಬುಧವಾರ ಹತ್ಯೆಗೈಯ್ಯಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಬಲಿಯಾದರೆ, ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದಂತೇವಾಡ: ನಕ್ಸಲರ ಅಟ್ಟಹಾಸ, ಬಿಜೆಪಿ ಶಾಸಕನ ಹತ್ಯೆದಂತೇವಾಡ: ನಕ್ಸಲರ ಅಟ್ಟಹಾಸ, ಬಿಜೆಪಿ ಶಾಸಕನ ಹತ್ಯೆ

ಘಟನೆ ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯಲ್ಲಿ ನಡೆದಿದೆ.

ಏಪ್ರಿಲ್ 9 ರಂದು ಬಿಜೆಪಿ ಶಾಸಕ ಭೀಮಾ ಮಾಂಡೆವಿ ಅವರ ವಾಹನದ ಮೇಲೆ ನಕ್ಸಲರು ಏಕಾ ಏಕಿ ದಾಳಿ ನಡೆಸಿದ್ದರು. ವಾಹನದೊಳಗಿದ್ದ ಮಾಂಡೆವಿ, ಡ್ರೈವರ್ ಮತ್ತು ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.

Chhattisgarh: 2 Naxals who involved in BJP MLAs murder gunned down

ಛತ್ತೀಸ್ ಗಢ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಿದ್ದದ್ದ ಮಾಂಡೆವಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಶಾಸಕ ಮಹೇಂದ್ರ ಕರ್ಮಾರನ್ನು ಸೋಲಿಸಿದ್ದರು.

ಏಪ್ರಿಲ್ ನಾಲ್ಕರಂದು ಛತ್ತೀಸ್ ಗಢದ ಕಾಂಕೇರ್ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತು ಬಿಎಸ್ ಎಫ್ ಜವಾನರ ನಡುವೆ ನಡೆದ ಎನ್ ಕೌಂಟರ್ ದಾಳಿಯಲ್ಲಿ ನಾಲ್ವರು ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದರು.

ಲೋಕಸಭೆ ಚುನಾವಣೆ LIVE:ಇದುವರೆಗೆ ಕರ್ನಾಟಕದಲ್ಲಿ ಕಡಿಮೆ ಮತದಾನಲೋಕಸಭೆ ಚುನಾವಣೆ LIVE:ಇದುವರೆಗೆ ಕರ್ನಾಟಕದಲ್ಲಿ ಕಡಿಮೆ ಮತದಾನ

ಇದಕ್ಕೂ ಮುನ್ನ ಮಾರ್ಚ್ 26 ರಂದು ಛತ್ತೀಸ್ ಗಢ ರಾಜಧಾನಿ ರಾಯ್‍ಪುರದಿಂದ 800 ಕಿ.ಮೀ. ದೂರದಲ್ಲಿರುವ ಕರ್ಕನ್ ಗುಡ ಗ್ರಾಮದ ಬಳಿ ಕಾಡಿನಲ್ಲಿ ನಕ್ಸಲರು ಅಡಗಿರುವ ಖಚಿತ ಮಾಹಿತಿ ಲಭ್ಯವಾದ ಕಾರಣ ಸಿಆರ್ ಪಿಎಫ್ ಯೋಧರು ಕಾರ್ಯಾಚರಣೆ ನಡೆಸಿ, ನಾಲ್ವರು ನಕ್ಸಲರನ್ನು ಬಲಿತೆಗೆದುಕೊಂಡಿದ್ದರು.

English summary
2 Naxals who involved in BJP MLA's murder in Chhattisgarh's Dantewada district were gunned down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X