ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವೋವಾದಿಗಳ ಅಟ್ಟಹಾಸಕ್ಕೆ 17 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

|
Google Oneindia Kannada News

ಚತ್ತೀಸ್‌ಗಢ, ಮಾರ್ಚ್ 22: ಚತ್ತೀಸ್‌ಗಢದಲ್ಲಿ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 17 ಮಂದಿ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಚತ್ತೀಸ್‌ಗಢದ ಸುಕ್ಮಾದಲ್ಲಿ ಯೋಧರು ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಎನ್‌ಕೌಂಟರ್‌ ಬಳಿಕ 17 ಮಂದಿ ಯೋಧರು ಕಾಣೆಯಾಗಿದ್ದರು ಭಾನುವಾರ ಅವರ ದೇಹಗಳು ದೊರೆತಿವೆ.

ಮಿನ್ಪಾ ಹಳ್ಳಿಯಲ್ಲಿ ಗಸ್ತು ತಿರುಗುವಾಗ ಸುಮಾರು 250 ಮಂದಿ ಮಾವೋವಾದಿಗಳು ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಬಂದು ದಾಳಿ ನಡೆಸಿದ್ದರು.

17 Security Personnel Killed In Encounter With Maoists

ಗುಂಡಿನ ಚಕಮಕಿ ಸುಮಾರು 2 ಗಂಟೆಗಳ ಕಾಲ ನಡೆದಿತ್ತು. ಜಿಲ್ಲಾ ರರಿಸರ್ವ್ ಗಾರ್ಡ್, ಸ್ಪೆಷಲ್ ಟಾಸ್ಕ್‌ ಫೋರ್ಸ್, ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್, ಸಿಆರ್‌ಪಿಎಫ್ ನ ಸುಮಾರು 600 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಸಿಆರ್‌ಪಿಎಫ್ ಹಾಗೂ ಮಾವೋವಾದಿಗಳ ನಡುವೆ ಕಳೆದ ಎರಡು ತಿಂಗಳ ಹಿಂದೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಾವೋವಾದಿ ಸಾವನ್ನಪ್ಪಿದ್ದ. ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಗಂಭೀರ ಗಾಯಗಳಾಗಿದ್ದವು.

English summary
In Chhattisgarh, the bodies of all 17 security personnel, who were missing after an encounter with Maoists in Sukma district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X