ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಪಾಕ್' ಸಿನಿಮಾಕ್ಕೆ ಮಧ್ಯ ಪ್ರದೇಶ, ಚತ್ತೀಸ್‌ಘಡದಲ್ಲಿ ತೆರಿಗೆ ವಿನಾಯಿತಿ

|
Google Oneindia Kannada News

ನವದೆಹಲಿ, ಜನವರಿ 09: ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಸಿನಿಮಾಕ್ಕೆ ಚತ್ತೀಸ್‌ಘಡ ಮತ್ತು ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.

ಚಪಾಕ್ ಚಿತ್ರವು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಚಿತ್ರವಾಗಿದ್ದು, ಆಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಕುರಿತ ಸಿನಿಮಾ ಇದಾಗಿದೆ.

Chhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆ

ಚಪಾಕ್ ಸಿನಿಮಾ ಬಿಡುಗಡೆಗೆ ಮುನ್ನಾ ದೀಪಿಕಾ ಪಡುಕೋಣೆ ಜೆಎನ್‌ಯು ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದರಿಂದ ಬಿಜೆಪಿ ಬೆಂಬಲಿಗರು ದೀಪಿಕಾ ಪಡುಕೋಣೆ ಮೇಲೆ ಅಸಮಾಧಾನಗೊಂಡು ಚಪಾಕ್ ಸಿನಿಮಾವನ್ನು ತಿರಸ್ಕರಿಸಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದರು.

Chhappak Movie Tax Free In Madhya Pradesh And Chhattisgarh

ಚಪಾಕ್ ಸಿನಿಮಾದ ಟಿಕೆಟ್ ರದ್ದು ಮಾಡುವ, ದೀಪಿಕಾ ಪಡುಕೋಣೆ ಅವರನ್ನು ಟ್ವಿಟ್ಟರ್‌ ನಲ್ಲಿ ಅನ್‌ಫಾಲೋ ಮಾಡುವ ಕಾರ್ಯಗಳನ್ನು ಮಾಡಲಾಗಿತ್ತು. ಚಿತ್ರದ ಬಗ್ಗೆ ಸುಳ್ಳು ಸುದ್ದಿಗಳನ್ನೂ ಹರಡಲಾಗಿತ್ತು. ಆದರೆ ಅದೆಲ್ಲದನ್ನೂ ಮೀರಿ ಉತ್ತಮ ಯಶಸ್ಸಿನತ್ತ ಸಾಗಿದೆ.

ಕಾಂಗ್ರೆಸ್ ಆಡಳಿತವಿರುವ ಮಧ್ಯ ಪ್ರದೇಶ ಮತ್ತು ಚತ್ತೀಸ್‌ಘಡ ರಾಜ್ಯಗಳು ಚಪಾಕ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಮಧ್ಯ ಪ್ರದೇಶ ಸಿಎಂ ಕಮಲನಾಥ ಟ್ವಿಟ್ಟರ್‌ನಲ್ಲಿ ಸಂದೇಶ ಪ್ರಕಟಿಸಿ ಚಪಾಕ್ ಸಾಮಾಜಿಕ ಕಳಕಳಿಯ ಚಿತ್ರ ಹಾಗಾಗಿ ಅದಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ.

English summary
Chhapaak movie will be tax free in Madhya Pradesh and Chhattisgarh. Madhya Pradesh CM said Chhapaak is having positive message to society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X