• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

By Staff
|

ಬೆಂಗಳೂರು, ಜೂನ್ 30: ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಪ್ಯಾನ್ ಸಂಖ್ಯೆಗಳನ್ನು ಪರಸ್ಪರ ಲಿಂಕ್ ಮಾಡಲು ಜೂನ್ 30 ಕೊನೆಯ ದಿನವಾಗಿದೆ.

ಹಾಗಾಗಿ, ಹಲವಾರು ಸುದ್ದಿ ಜಾಲತಾಣಗಳಲ್ಲಿ ಆಧಾರ್ ಹಾಗೂ ಪ್ಯಾನ್ ಸಂಖ್ಯೆ ಲಿಂಕ್ ಮಾಡುವ ವಿಧಾನಗಳನ್ನು ಅಥವಾ ಕ್ರಮಗಳನ್ನು ನೀಡಲಾಗುತ್ತಿದೆ. ಇದು ಹಲವಾರು ಓದುಗರಿಗೆ ಉಪಯುಕ್ತವಾಗಿದೆ.

ನೆನಪಿಡಿ, ಆಧಾರ್ - ಪ್ಯಾನ್ ಜೋಡಣೆಗೆ ಕೊನೆಯ ದಿನಾಂಕ ಜೂನ್ 30

ಆದರೆ, ಈಗಾಗಲೇ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿರುವವರು ಅದನ್ನು ಮತ್ತೊಮ್ಮೆ ದೃಢಕರಣಗೊಳಿಸಿಕೊಳ್ಳಲು ಇಚ್ಛಿಸುತ್ತಿದ್ದಾರೆ. ಅಂಥವರು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.

1. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.

2. ಅಲ್ಲಿ ನಿಮ್ಮ ಯೂಸರ್ ಐಡಿ, ಪಾಸ್ ವರ್ಡ್, ಪಾಸ್ ವರ್ಡ್, ಜನ್ಮ ದಿನಾಂಕ ನಮೂದಿಸಿ. ಅದರ ಕೆಳಗೆ ವೆಬ್ ಸೈಟ್ ನಲ್ಲಿ ಸ್ವಯಂ ಆಗಿ ಮೂಡಿಬಂದಿರುವ ಕ್ಯಾಪ್ಚವನ್ನು ಅರ್ಥ ಮಾಡಿಕೊಂಡು ಅದರ ಸಂಕೇತಗಳನ್ನು ಅಲ್ಲೇ ಕೆಳಗೆ ಕೊಟ್ಟಿರುವ ಜಾಗದಲ್ಲಿ ತುಂಬಿರಿ.

3. ಆನಂತರ, ಪ್ರೊಫೈಲ್ ಸೆಟ್ಟಿಂಗ್ ಗೆ ಹೋಗಿ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ.

ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಸಂಖ್ಯೆಗಳು ಲಿಂಕ್ ಆಗಿರುವುದನ್ನು ಅದು ಖಾತ್ರಿಪಡಿಸುತ್ತದೆ.

- ನೀವು ಈ ಮೊದಲೇ ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಆಗಿರದಿದ್ದರೆ,

1. ವೆಬ್ ಸೈಟ್ ಗೆ ಭೇಟಿ ಕೊಡಿ.

2. ಅಲ್ಲಿ ಆಧಾರ್ - ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಐಕಾನ್ ಕ್ಲಿಕ್ಕಿಸಿರಿ.

3. ಆಗ ಓಪನ್ ಆಗುವ ಡಯಲಾಗ್ ಬಾಕ್ಸ್ ನಲ್ಲಿ ನಿಮ್ಮ ಪ್ಯಾನ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ನಲ್ಲಿರುವ ಮಾದರಿಯಲ್ಲಿ ನಿಮ್ಮ ಹೆಸರನ್ನು ಅಲ್ಲಿ ಕೊಟ್ಟಿರುವ ಜಾಗಗಳಲ್ಲಿ ಭರ್ತಿ ಮಾಡಿರಿ. ಕ್ಯಾಪ್ಚಾ ಮಾಹಿತಿ ಎಂಟರ್ ಮಾಡಿ.

4. ನಂತರ, ಸಬ್ ಮಿಟ್ ಬಟನ್ ಕ್ಲಿಕ್ಕಿಸಿದರೆ, ಈ ಕಾರ್ಡ್ ಆಗಲೇ ಆಧಾರ್ ಗೆ ಲಿಂಕ್ ಆಗಿದೆಯೆಂಬ ಸಂದೇಶ ಬರುತ್ತದೆ.

English summary
If anybody who wants to check the status of Aadhaar and Pan card numbers already linked can vist and offcial wesite of Income Tax department of India and follow the instruction displaying on the screen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X