IRCTC ಮೂಲಕ ರೈಲು ಟಿಕೆಟ್ ಕಾಯ್ದಿರಿಸುವ ಮುನ್ನ ಈ ಸುದ್ದಿ ಓದಿ
ನವದೆಹಲಿ, ಮೇ 12: ನೀವು ಆಗಾಗ್ಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ, ನಿಮ್ಮ ಟೆಕೆಟ್ ಕಾಯ್ದಿರಸಲು ಐಆರ್ಸಿಟಿಸಿ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಬಳಸುತ್ತಿದ್ದರೆ ನೀವು ಈ ಸುದ್ದಿ ಓದಲೇಬೇಕು. ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಭಾರತೀಯ ರೈಲ್ವೆಯ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ಸಂಸ್ಥೆ(IRCTC) ಟಿಕೆಟ್ ಕಾಯ್ದಿರಿಸಲು ಹಲವು ನಿಯಮಗಳನ್ನು ಬದಲಾಯಿಸಿದೆ. ಇನ್ನು ಮುಂದೆ ಭಾರತೀಯ ರೈಲ್ವೆಯ ಕೋಟ್ಯಂತರ ಪ್ರಯಾಣಿಕರು ಟಿಕೆಟ್ ಕಾಯ್ದಿರಸಲು ತಮ್ಮ ಖಾತೆಗಳನ್ನು ಪರಿಶೀಲಿಸಬೇಕಾಗಿದೆ.
ಐಆರ್ಸಿಟಿಸಿ ಪರಿಚಯಿಸಿರುವ ಹೊಸ ನಿಯಮದ ಪ್ರಕಾರ, ಬಳಕೆದಾರರು ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಟಿಕೆಟ್ ಕಾಯ್ದಿರಸಲು ಮೊಬೈಲ್ ನಂಬರ್, ಇ-ಮೇಲ್ ಐಡಿ ದಾಖಲಿಸುವುದು ಕಡ್ಡಾಯವಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣ ದಾಖಲಾದ ಮಾರ್ಚ್ 2020 ನಂತರ ವೆಬ್ಸೈಟ್, ಅಪ್ಲಿಕೇಶನ್ ಮೂಲಕ ಟಿಕೆಟ್ ಕಾಯ್ದಿರಸದ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗಲಿದೆ. ಬಹಳ ದಿನಗಳಿಂದ ನೀವು ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಟಿಕೆಟ್ ಕಾಯ್ದಿರಿಸಲ್ಲವಾದರೆ ಮೊದಲು ಪರಿಶೀಲನೆ ಪ್ರಕ್ರಿಯೆ ಮುಗಿಸುವುದು ಅನಿವಾರ್ಯ.
IRCTC: ರದ್ದುಗೊಳಿಸಿದ ರೈಲುಗಳ ಮಾಹಿತಿ ಪರಿಶೀಲನೆ ಹೇಗೆ?
ಮೊಬೈಲ್ ಸಂಖ್ಯೆ, ಇ-ಮೇಲ್ ಪರಿಶೀಲನೆ ಹೇಗೆ?
ಹಂತ 1: ಐಆರ್ಸಿಟಿಸಿ ಅಪ್ಲಿಕೇಶನ್ ಅಥವಾ ಜಾಲತಾಣಕ್ಕೆ ಭೇಟಿ ನೀಡಿ ವೆರಿಫಿಕೇಶನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 2: ಇಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿವರ ದಾಖಲಿಸಿ.
ಹಂತ 3: ವಿವರಗಳನ್ನು ದಾಖಲಿಸಿದ ನಂತರ ವೆರಿಫೈ ಆಯ್ಕೆ ಮೇಲೆ ಕ್ಲಿಕ್ ಮಾಡಿ .
ಚಾರ್ ಧಾಮ್ ಪ್ರವಾಸಕ್ಕೆ ಐಆರ್ಸಿಟಿಸಿ ಪ್ಯಾಕೇಜ್; ಅಗತ್ಯ ಮಾಹಿತಿ ಇಲ್ಲಿದೆ
ಭಾರತೀಯ ರೈಲ್ವೆಯ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ಸಂಸ್ಥೆ ಯಾತ್ರಾರ್ಥಿಗಳಿಗಾಗಿ ಉತ್ತರ ಭಾರತದ ಹಲವು ಪುಣ್ಯ ಕ್ಷೇತ್ರಗಳ ಭೇಟಿಗಾಗಿ ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಿಸಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಐಆರ್ಸಿಟಿಸಿ ಮಾಹಿತಿ ನೀಡಿದೆ. ವಿಶೇಷ ಪ್ಯಾಕೇಜ್ ಅಡಿಯ 12 ದಿನ 11 ರಾತ್ರಿಗಳ ಪ್ರವಾಸದಲ್ಲಿ ಕೇದಾರನಾಥ, ಬದ್ರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಕ್ಷೇತ್ರಗಳಿಗೆ ಭೇಟಿ ನೀಡಬಹುದಾಗಿದೆ. ಟಿಕೆಟ್ ಬುಕಿಂಗ್ ಆಧಾರದ ಮೇಲೆ ಟಿಕೆಟ್ನ ದರದಲ್ಲಿ ವ್ಯತ್ಯಾಸವಾಗಲಿದೆ.
ಮಕ್ಕಳಿಗಾಗಿ ವಿಶೇಷ ದರ ನಿಗದಿ
ಮಕ್ಕಳಿಗಾಗಿ ವಿಶೇಷ ದರ ನಿಗದಿಪಡಿಸಿದ್ದು, 5 ರಿಂದ 11 ವರ್ಷದ ಮಕ್ಕಳಿಗೆ 37,500 ರುಪಾಯಿ ದರ ನಿಗದಿಪಡಿಸಲಾಗಿದೆ. ಹಾಸಿಗೆ ಮತ್ತಿತರೆ ಸೌಲಭ್ಯಗಳನ್ನು ಈ ಪ್ಯಾಕೇಜ್ ಒಳಗೊಂಡಿರಲಿದೆ. ಒಂದು ವೇಳೆ ಹಾಸಿಗೆ ಸೌಲಭ್ಯ ಬೇಡ ಎನ್ನುವುದಾದರೆ 31,700 ರುಪಾಯಿಗೆ ಕಡಿಮೆಯಾಗಲಿದೆ. ಇನ್ನು 2 ರಿಂದ 4 ವರ್ಷದ ಶಿಶುಗಳಿಗಾಗಿ ಪ್ರತ್ಯೇಕ್ ಪ್ಯಾಕೇಜ್ ಇದೆ. ಮೂವರು ಒಟ್ಟಿಗೆ ಪ್ರವಾಸಕ್ಕಾಗಿ ಟಿಕೆಟ್ ಬುಕ್ ಮಾಡುವವರಿಗೆ ಒಂದು ಟಿಕೆಟ್ಗೆ 60,500 ರುಪಾಯಿ ದರ ನಿಗದಿಪಡಿಸಲಾಗಿದೆ. ಇಬ್ಬರು ಒಮ್ಮೆಲೆ ಟಿಕೆಟ್ ಬುಕ್ ಮಾಡಿದರೆ ಒಂದು ಟಿಕೆಟ್ಗೆ 63,000 ರುಪಾಯಿ ವೆಚ್ಚವಾಗಲಿದೆ. ಒಂದು ವೇಳೆ ನೀವೊಬ್ಬರೆ ಪ್ರವಾಸ ಯೋಚನೆ ಮಾಡುವ ಯೋಚನೆ ಇದ್ದರೆ ಒಂದು ಟಿಕೆಟ್ಗಾಗಿ 80,000 ರುಪಾಯಿ ಪಾವತಿಸಬೇಕಾಗುತ್ತದೆ.
ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ಟಿಕೆಟ್ ಕಾಯ್ದಿರಿಸುವುದು ಸುಲಭ
ಜೂನ್ 22, ಮತ್ತು ಸೆಪ್ಟಂಬರ್ 12 ರಂದು ಎರಡು ಪ್ರತ್ಯೇಕ ದಿನಾಂಕಗಳಲ್ಲಿ ಎರಡು ಹಂತದಲ್ಲಿ ಪ್ರವಾಸ ಆಯೋಜಿಸಲು ಐಎಸ್ಆರ್ಟಿಸಿ ನಿರ್ಧರಿಸಿದೆ. 25 ಸೀಟುಗಳಷ್ಟೇ ಮೀಸಲಿರಿಸಲು ಲಭ್ಯವಿದ್ದು, ಆಸಕ್ತಿ ಇರುವವರು ಕೂಡಲೇ ಕಾಯ್ದಿರಸಬಹುದಾಗಿದೆ.

ಜೂನ್ 22 ಮತ್ತು ಸೆಪ್ಟಂಬರ್ 12ರಂದು ಯುಕೆ-884 ಸಂಖ್ಯೆಯ ವಿಮಾನ ಕೊಚ್ಚಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9:15ಕ್ಕೆ ಹೊರಟು ಮಧ್ಯಾಹ್ನ 12:30ಕ್ಕೆ ದೆಹಲಿ ತಲುಪುತ್ತದೆ. ಅದೇ ವಿಮಾನ ಜುಲೈ 3 ಮತ್ತು ಸೆಪ್ಟಂಬರ್ 23ರಂದು ಮಧ್ಯಾಹ್ನ 3:55ಕ್ಕೆ ದೆಹಲಿಯಿಂದ ಹೊರಟು ಸಂಜೆ 7:10ಕ್ಕೆ ಕೊಚ್ಚಿ ತಲುಪಲಿದೆ.
8287931962 ಮತ್ತು 8287932082 ಈ ನಂಬರ್ಗೆ ಕರೆ ಮಾಡಿ ಟಿಕೆಟ್ ಕಾಯ್ದಿರಿಸಬಹುದಾಗಿದೆ. ನಿಮ್ಮ ಟಿಕೆಟ್ ಬುಕ್ ಮಾಡಲು irctctourism.com. ವೆಬ್ಸೈಟ್ ಗೆ ಭೇಟಿ ನೀಡಬಹುದು. ಐಆರ್ಸಿಟಿಸಿ ಪ್ರವಾಸ ಸೌಲಭ್ಯ ಕೇಂದ್ರ, ವಲಯ ಮತ್ತು ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ನಿಮ್ಮ ಟಿಕೆಟ್ ಕಾಯ್ದಿರಿಸಬಹುದು.