ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಗಾ 2030 ಯೋಜನೆ: ರೈಲ್ವೆಯಲ್ಲಿ 'ನೋ ವೈಟಿಂಗ್ ಲಿಸ್ಟ್', ಎಲ್ಲಾ ಟಿಕೆಟ್ ಕನ್ಫರ್ಮ್

|
Google Oneindia Kannada News

ನವದೆಹಲಿ, ಡಿಸೆಂಬರ್ 18: ಭಾರತೀಯ ರೈಲ್ವೆಯು ಮೆಗಾ ನ್ಯಾಷನಲ್ ರೈಲು ಪ್ಲ್ಯಾನ್ 2030 ಸಿದ್ಧಪಡಿಸುತ್ತಿದ್ದು, ಅದರ ಪ್ರಕಾರ ಇನ್ನುಮುಂದೆ ರೈಲ್ವೆಯಲ್ಲಿ ವೈಟಿಂಗ್ ಲಿಸ್ಟ್ ಇರುವುದಿಲ್ಲ, ಬದಲಾಗಿ ಎಲ್ಲರ ಟಿಕೆಟ್ ಕನ್ಫರ್ಮ್ ಆಗುವ ವ್ಯವಸ್ಥೆ ಕಲ್ಪಿಸಿಕೊಡಲಿದೆ.

ಹೀಗಾಗಿ ರೈಲ್ವೆ ಟಿಕೆಟ್ ಸಿಗುತ್ತೋ ಇಲ್ಲವೋ ಎನ್ನುವ ಅನುಮಾನ ಬೇಡ ಎಂದು ರೈಲ್ವೆ ಇಲಾಖೆ ಹೇಳಿದೆ.

ಮೈಸೂರಿನಿಂದ ರೈಲುಗಳು ಮತ್ತೆ ಆರಂಭ; ರೈಲುಗಳ ವಿವರ ಇಂತಿದೆ...ಮೈಸೂರಿನಿಂದ ರೈಲುಗಳು ಮತ್ತೆ ಆರಂಭ; ರೈಲುಗಳ ವಿವರ ಇಂತಿದೆ...

ಭಾರತೀಯ ರೈಲ್ವೆಯು ರಾಷ್ಟ್ರೀಯ ರೈಲ್ವೆ ಯೋಜನೆ 2030ನ್ನು ಸಿದ್ಧಪಡಿಸುತ್ತಿದೆ. ಇದು ಸಾರ್ವಜನಿಕರ ಸಮಾಲೋಚನೆ ಹಾಗೂ ವಿವಿಧ ಸಚಿವಾಲಯಗಳಿಂದ ಪ್ರತಿಕ್ರಿಯೆ ಪಡೆಯಲಿದೆ. ಪ್ರತಿ ಪ್ರಯಾಣಿಕರ ದೃಢಪಡಿಸಿರುವ ರೈಲ್ವೆ ಟಿಕೆಟ್‌ ನೀಡುವ ಗುರಿ ಹೊಂದಿದ್ದು, ಯಾವುದೇ ವೈಟಿಂಗ್ ಲಿಸ್ಟ್ ಇರುವುದಿಲ್ಲ.

ಹೆಚ್ಚಿನ ಆದಾಯ ಗಳಿಸುವತ್ತ ಗಮನ

ಹೆಚ್ಚಿನ ಆದಾಯ ಗಳಿಸುವತ್ತ ಗಮನ

ರಾಷ್ಟ್ರೀಯ ರೈಲ್ವೆ ಯೋಜನೆ 2030 ಇನ್ಫ್ರಾವನ್ನು ನಿರ್ಮಿಸಲು ಭಾರತೀಯ ರೈಲ್ವೆಯು ಹೆಚ್ಚಿನ ಆದಾಯ ಗಳಿಸುವತ್ತ ಗಮನಹರಿಸುತ್ತದೆ, ಅಂದರೆ ಸಾಮರ್ಥ್ಯವು ಬೇಡಿಕೆಯನ್ನು ಮೀರಿದೆ.

ರೈಲ್ವೆ ಸರಕು, ಸಾಗಾಣಿಕೆ ಆದಾಯ ಹೆಚ್ಚಳ

ರೈಲ್ವೆ ಸರಕು, ಸಾಗಾಣಿಕೆ ಆದಾಯ ಹೆಚ್ಚಳ

ಎನ್‌ಆರ್‌ಪಿ 2030 ಅನುಷ್ಠಾನವು ರೈಲ್ವೆ ಸರಕು ಸಾಗಣೆ ಮತ್ತು ಆದಾಯವನ್ನು ಹೆಚ್ಚಿಸಲು ಕಾರಣವಾಗುತ್ತದೆ. ದೇಶದ ಒಟ್ಟು ಸರಕು ಸಾಗಣೆಯ ಪೈಕಿ ಶೇ.47 ರೈಲ್ವೆ ಸಾಗಣೆಯ ಗುರಿ ಹೊಂದಿದೆ. 2030ರ ವೇಳೆಗೆ ಇನ್ನೂ ನಾಲ್ಕು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಿರ್ಮಿಸಲು ಚಿಂತಿಸಲಾಗಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವ

ಸಾರ್ವಜನಿಕ ಖಾಸಗಿ ಸಹಭಾಗಿತ್ವ

ಕಾರಿಡಾರ್ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು, ರೈಲ್ವೆ ಸರಕು ಸಾಗಣೆ ಸಮಯದ ಸುಂಕವನ್ನು ತರ್ಕಬದ್ಧಗೊಳಿಸಲು ರೈಲ್ವೆಗೆ ಸಹಾಯ ಮಾಡುತ್ತದೆ.

ಫ್ರೈಟ್ ಕಾರಿಡಾರ್‌ ಬಗ್ಗೆ ಮಾಹಿತಿ

ಫ್ರೈಟ್ ಕಾರಿಡಾರ್‌ ಬಗ್ಗೆ ಮಾಹಿತಿ

ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಲ್ಲಿ ಖಾಸಗಿ ಸರಕು ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ವಿವರವಾದ ನೀತಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ. ಸ್ಟೀಲ್, ಕಬ್ಬಿಣದ ಅದಿರು, ಜವಳಿ ವಲಯಗಳನ್ನು ಆಕರ್ಷಿಸಲು ರೈಲ್ವೆ ಪ್ರಯತ್ನಿಸುತ್ತಿದೆ. 11 ಕಿ.ಮೀ ಟಿಎಫ್‌ಸಿ ಕಾರಿಡಾರ್ 2021ರ ಮಾರ್ಚ್ ವೇಳೆಗೆ ನಿರ್ಮಾಣವಾಗಲಿದೆ. 2800 ಕಿ.ಮೀ ದೂರದ ಕಾರಿಡಾರ್ 2022ರಲ್ಲಿ ನಿರ್ಮಾಣವಾಗಲಿದೆ.

English summary
When the Indian Railway's mega National Rail Plan (NRP) 2030 is put in place, passengers will have the most peaceful time as they will not have to worry about confirmed tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X