ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್‌ಘಡ: 15 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹಾದಿಯಲ್ಲಿ ಕಾಂಗ್ರೆಸ್

|
Google Oneindia Kannada News

ರಾಯಪುರ (ಛತ್ತೀಸ್‌ಘಡ್‌), ಡಿಸೆಂಬರ್ 11: ಛತ್ತೀಸ್‌ಘಡ್‌ ರಾಜ್ಯದಲ್ಲಿ ಹದಿನೈದು ವರ್ಷದ ಬಳಿಕ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

ಛತ್ತೀಸ್‌ಘಡ್‌ನ ವಿಧಾನಸಭಾ ಚುನಾವಣೆ ಫಲಿತಾಂಶ ಬರುತ್ತಿದ್ದು, ಕಾಂಗ್ರೆಸ್‌ ಪಕ್ಷವು ಸ್ಪಷ್ಟ ಮುನ್ನಡೆ ಪಡೆದುಕೊಂಡು ಮ್ಯಾಜಿಕ್ ನಂ 46 ಅನ್ನು ದಾಟಿ ಮುಂದೆ ಹೋಗಿದೆ. ಹಾಗಾಗಿ ಮುನ್ನಡೆಯೆಲ್ಲವೂ ಗೆಲುವಾಗಿ ಪರಿಣಮಿಸುವ ಸಾಧ್ಯತೆ ಸಹ ದಟ್ಟವಾಗಿದೆ.

ಪಂಚರಾಜ್ಯ ಚುನಾವಣೆ ಫಲಿತಾಂಶ LIVE: ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆಪಂಚರಾಜ್ಯ ಚುನಾವಣೆ ಫಲಿತಾಂಶ LIVE: ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ

ಛತ್ತೀಸ್‌ಘಡ್‌ ವಿಧಾನಸಭಾ ಚುನಾವಣೆ ಮತೆಣಿಕೆಯಲ್ಲಿ ಕಾಂಗ್ರೆಸ್‌ ಪಕ್ಷ ಈಗಾಗಲೇ 50 ಸ್ಥಾನದಲ್ಲಿ ಮುನ್ನಡೆ ಗಳಿಸಿದೆ. ಬಹುಮತಕ್ಕೆ ಬೇಕಿರುವುದು 46 ಸ್ಥಾನಗಳು. ಕಾಂಗ್ರೆಸ್‌ ಈಗಿರುವ ಮುನ್ನಡೆಯೇ ಗೆಲುವಾಗಿಯೂ ಪರಿಣಮಿಸಲಿದೆ ಎಂದು ಸ್ಪಷ್ಟಪಡಿಸುತ್ತಿವೆ ಮಾಧ್ಯಮಗಳ ವರದಿಗಳು.

Chattisgarh election result: Congress will win after 15 years

ಬಿಜೆಪಿಯು ಛತ್ತೀಸ್‌ಘಡದಲ್ಲಿ ಮೂರು ಬಾರಿ ಅಧಿಕಾರ ಹಿಡಿದಿತ್ತು. ಆದರೆ ಈ ಬಾರಿ ಮತದಾರ ಕಾಂಗ್ರೆಸ್‌ಗೆ ಅವಕಾಶ ನೀಡುವ ಮನಸ್ಸು ಮಾಡಿದ್ದಾನೆ. ಛತ್ತೀಸ್‌ಘಡದ ಸಿಎಂ ರಮಣಸಿಂಗ್‌ ಸಹ ಕೆಲವು ಕಾಲ ಹಿನ್ನಡೆ ಅನುಭವಿಸಿದ್ದರು. ಆದರೆ ಆ ನಂತರ ಸುಧಾರಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷವು 15 ವರ್ಷದಿಂದಲೂ ಛತ್ತೀಸ್‌ಘಡ್‌ನಲ್ಲಿ ಅಧಿಕಾರದಿಂದ ದೂರವೇ ಉಳಿದಿತ್ತು. ಆದರೆ ಈಗ ಅಧಿಕಾರದ ಗದ್ದುಗೆಯ ಅತ್ಯಂತ ಸನಿಹದಲ್ಲಿದೆ. ಇನ್ನು ಕೇವಲ ಮೂರು-ನಾಲ್ಕು ಗಂಟೆಗಳಲ್ಲಿ ಪೂರ್ಣ ಫಲಿತಾಂಶ ಗೊತ್ತಾಗಲಿದೆ. ಆದರೆ ಈಗಾಗಲೇ ಅದು ಮ್ಯಾಜಿಕ್ ನಂ ಅನ್ನು ಮುನ್ನಡೆಯಲ್ಲಿ ದಾಟಿದೆ.

English summary
Congress leading in Chattisgarh election. It will form government in Chattisgarh after 15 years. Congress leading by 50 seats. majority here is 46 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X