ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತಿಸ್‌ಘಡ್‌ ಚುನಾವಣೆ: ಸಮೀಕ್ಷೆಗಳ ಸಮೀಕ್ಷೆಯ ಫಲಿತಾಂಶ

|
Google Oneindia Kannada News

ರಾಯಪುರ(ಛತ್ತೀಸ್‌ಘಡ್‌), ಡಿಸೆಂಬರ್ 07: ಛತ್ತೀಸ್‌ಘಡ್‌ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಬಹು ಗೊಂದಲದಿಂದ ಕೂಡಿದೆ.

ಕೆಲವು ಸಂಸ್ಥೆಗಳು, ಮಾಧ್ಯಮಗಳು ಕಾಂಗ್ರೆಸ್‌ಗೆ ಬಹುಮತ ನೀಡಿದ್ದರೆ ಇನ್ನು ಕೆಲವು ಬಿಜೆಪಿ ನೀಡಿದೆ, ಮತ್ತೆ ಕೆಲವು ಎರಡಕ್ಕೂ ಸಮಬಲ ಬರುತ್ತದೆಂದು ಹೇಳಿವೆ.

ಮತದಾನೋತ್ತರ ಸಮೀಕ್ಷೆ: ಛತ್ತೀಸ್‌ಘಡ್‌ನಲ್ಲಿ ಅಧಿಕಾರಕ್ಕೇರಲಿದೆ ಕಾಂಗ್ರೆಸ್‌ಮತದಾನೋತ್ತರ ಸಮೀಕ್ಷೆ: ಛತ್ತೀಸ್‌ಘಡ್‌ನಲ್ಲಿ ಅಧಿಕಾರಕ್ಕೇರಲಿದೆ ಕಾಂಗ್ರೆಸ್‌

ಟೈಮ್ಸ್‌ ನೌ ಪ್ರಕಾರ ಛತ್ತೀಸ್‌ಘಡ್‌ನಲ್ಲಿ ಬಿಜೆಪಿಗೆ ಬಹುಮತ ಬರುತ್ತದೆ, ಸಿ-ಓಟರ್ ಪ್ರಕಾರ ಕಾಂಗ್ರೆಸ್‌ ಸರ್ಕಾರ ರಚಿಸುತ್ತದೆ, ಇಂಡಿಯಾ ಟಿವಿ ಪ್ರಕಾರ ಬಿಜೆಪಿ ಅಧಿಕಾರ ಹಿಡಿಯುತ್ತದೆ, ನ್ಯೂಸ್‌ ಎಕ್ಸ್‌ ಪ್ರಕಾರ ಕಾಂಗ್ರೆಸ್ ದೊಡ್ಡ ಪಕ್ಷವಾಗುತ್ತದೆ, ನ್ಯೂಸ್‌ ಎಕ್ಸ್‌ ಪ್ರಕಾರ ಯಾರಿಗೂ ಬಹುಮತ ದೊರಕುವುದಿಲ್ಲ, ಜನ್‌ ಕಿ ಬಾತ್ ಪ್ರಕಾರ ಬಿಜೆಪಿ ಗೆಲ್ಲುತ್ತದೆ, ಇಂಡಿಯಾ ಟುಡೆ ಹೇಳುವಂತೆ ಕಾಂಗ್ರೆಸ್ ಭಾರಿ ಗೆಲುವು ಸಾಧಿಸುತ್ತದೆ.

ಭಿನ್ನ-ಭಿನ್ನ ಸಮೀಕ್ಷೆ ಫಲಿತಾಂಶ

ಭಿನ್ನ-ಭಿನ್ನ ಸಮೀಕ್ಷೆ ಫಲಿತಾಂಶ

ಹೀಗೆ ಒಂದೊಂದು ಸಂಸ್ಥೆಗಳು ಒಂದೊಂದು ಸಮೀಕ್ಷೆ ನೀಡಿರುವಾಗ, ಈ ಸಮೀಕ್ಷೆಗಳನ್ನೆಲ್ಲಾ ಒಟ್ಟುದ ಮಾಡಿ ಸರಾಸರಿ ಮಾಡಿ 'ಸಮೀಕ್ಷೆಗಳ ಸಮೀಕ್ಷೆ' (ಪೋಲ್‌ ಆಫ್ ಪೋಲ್ಸ್‌) ಮಾಡುವುದು ವಾಡಿಕೆ.

ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ : ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ?ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ : ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ?

ಸಮೀಕ್ಷೆಗಳ ಸಮೀಕ್ಷೆ

ಸಮೀಕ್ಷೆಗಳ ಸಮೀಕ್ಷೆ

ಅದರಂತೆ ಟೈಮ್ಸ್‌ ನೌ, ಸಿ-ಓಟರ್, ನ್ಯೂಸ್‌ ನೇಶನ್, ಜನ್‌-ಕಿ-ಬಾತ್, ಆಕ್ಸಿಸ್ ಮೈ ಇಂಡಿಯಾ, ಎಬಿಪಿ-ಸಿಎಸ್‌ಡಿಎಸ್‌ ಮಾಧ್ಯಮಗಳು ಛತ್ತೀಸ್‌ಘಡ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಸೇರಿಸಿ ಹೊಸದೊಂದು ಸಮೀಕ್ಷೆಗಳ ಸಮೀಕ್ಷೆ ತಯಾರಿಸಲಾಗಿದೆ.

ರಾಜಸ್ಥಾನ ಚುನಾವಣೆ : ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ?ರಾಜಸ್ಥಾನ ಚುನಾವಣೆ : ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ?

ಯಾರಿಗೂ ಬಹುಮತ ಇಲ್ಲ

ಯಾರಿಗೂ ಬಹುಮತ ಇಲ್ಲ

ಪೋಲ್ಸ್‌ ಆಫ್ ಪೋಲ್ಸ್‌ ಅಥವಾ ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಛತ್ತೀಸ್‌ಘಡ್‌ನಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುತ್ತಿಲ್ಲ. ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ 43 ಸ್ಥಾನ ಗಳಿಸಿದರೆ, ಬಿಜೆಪಿ 40 ಸ್ಥಾನಗಳಲ್ಲಿ ವಿಜಯ ಸಾಧಿಸುತ್ತಿದೆ. ಇತರೆ ಪಕ್ಷಗಳು 6 ಸ್ಥಾನ ಗೆಲ್ಲಲಿವೆ. ಅಲ್ಲಿಗೆ ಛತ್ತೀಸ್‌ಘಡ್‌ನಲ್ಲಿ ಮೈತ್ರಿ ಸರ್ಕಾರ ರಚಿತವಾಗಲಿದೆ.

ಕಳೆದ ಚುನಾವಣೆಯಲ್ಲಿ ಏನಾಗಿತ್ತು?

ಕಳೆದ ಚುನಾವಣೆಯಲ್ಲಿ ಏನಾಗಿತ್ತು?

ಛತ್ತೀಸ್‌ಘಡ್‌ನಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿಯೇ ಬಹುಮತ ಸಾಧಿಸುತ್ತಾ ಬಂದಿದೆ. ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 49 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಕಾಂಗ್ರೆಸ್ ಪಕ್ಷ 39 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬಿಎಸ್‌ಪಿ 1 ಹಾಗೂ ಪಕ್ಷೇತರ ಒಂದು ಸ್ಥಾನಗಳಲ್ಲಿ ಚುನಾವಣೆ ಗೆದ್ದಿದ್ದರು.

English summary
Chattishgarh assembly elelctions poll of polls is out. As per the poll of polls no party is getting the mejority. Congress being the largest party by winning 43 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X