ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್‌ಧಾಮ್ ಯಾತ್ರೆ: 20 ಯಾತ್ರಿಗಳ ಸಾವು - ದರ್ಶನಕ್ಕಿಲ್ಲ ಮಿತಿ

|
Google Oneindia Kannada News

ಡೆಹ್ರಾಡೂನ್ ಮೇ 11: ಚಾರ್‌ಧಾಮ್ ಯಾತ್ರೆ ಆರಂಭಗೊಂಡು ಒಂದು ವಾರದಲ್ಲಿ 20 ಯಾತ್ರಿಗಳು ಸಾವನ್ನಪ್ಪಿರುವುದು ಆತಂಕಕ್ಕೆ ದೂಡಿದೆ. ಚಾರ್‌ಧಾಮ್ ಯಾತ್ರೆಗೆ ಲಕ್ಷಾಂತರ ಯಾತ್ರಿಗಳು ಉತ್ತರಖಂಡ ಭೇಟಿ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ. ಸರ್ಕಾರ ಯಾತ್ರಿಗಳಿಗೆ ಮಿತಿ ನಿಗದಿ ಪಡಿಸಿದರೂ ಪ್ರಯಾಣಿಕರ ಸಂಖ್ಯೆ ಕೈ ಮೀರಿ ಹೋಗಿದೆ. ಇದು ಮತ್ತಷ್ಟು ನಿಯಂತ್ರಣ ಕಳೆದುಕೊಂಡಿದೆ.

ಚಾರ್‌ಧಾಮ್ ಯಾತ್ರೆಯ ಮೊದಲ ವಾರದಲ್ಲಿ ಉತ್ತರಾಖಂಡದಲ್ಲಿ 20 ಯಾತ್ರಾರ್ಥಿಗಳು ಸಾವನ್ನಪ್ಪಿರುವ ಬಗ್ಗೆ ಪಿಎಂಒ ಗಮನಹರಿಸಿದೆ. ಅಲ್ಲದೆ ಈ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ. ಜೊತೆಗೆ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಮೊದಲನೆಯದಾಗಿ, ಚಾರ್‌ಧಾಮ್ ಯಾತ್ರೆಗೆ ಬರುವ ಯಾತ್ರಿಕರ ಸಂಖ್ಯೆಯನ್ನು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಆರೋಗ್ಯ ಸಂಬಂಧಿ ಸಲಹೆಗಳನ್ನು ನೀಡಲಾಗಿದೆ. ಇಲ್ಲಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನೋಂದಣಿಯನ್ನು ಕಡ್ಡಾಯವಾಗಿ ಮಾಡಲು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಮೂಲಕ ಕೇದಾರನಾಥಕ್ಕೆ ಪ್ರಯಾಣ: ಟಿಕೆಟ್‌ ಬುಕ್ ಮಾಡುವುದು ಹೇಗೆ?ಹೆಲಿಕಾಪ್ಟರ್ ಮೂಲಕ ಕೇದಾರನಾಥಕ್ಕೆ ಪ್ರಯಾಣ: ಟಿಕೆಟ್‌ ಬುಕ್ ಮಾಡುವುದು ಹೇಗೆ?

ಚಾರ್‌ಧಾಮಿ ದರ್ಶನಕ್ಕಿಲ್ಲ ಮಿತಿ

ಚಾರ್‌ಧಾಮಿ ದರ್ಶನಕ್ಕಿಲ್ಲ ಮಿತಿ

ಕೋವಿಡ್‌ನಿಂದಾಗಿ 2 ವರ್ಷಗಳ ಕಾಲ ಪ್ರಯಾಣದ ಮೇಲಿನ ನಿಷೇಧದ ಪರಿಣಾಮ ಈ ಬಾರಿ ಚಾರ್‌ಧಾಮ್ ಯಾತ್ರೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಚಾರ್‌ಧಾಮ್‌ನ ಬಾಗಿಲು ತೆರೆಯಲಾಗಿದ್ದು ಪ್ರಯಾಣಿಕರು ಪ್ರಯಾಣದಲ್ಲಿ ಅಪಾರ ಉತ್ಸಾಹ ಹೊಂದಿದ್ದಾರೆ. ಇದುವರೆಗೆ ಒಂಬತ್ತೂವರೆ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಕೇದಾರನಾಥ ಧಾಮದ ನೋಂದಣಿ ಸಂಖ್ಯೆ 3.35 ಲಕ್ಷಕ್ಕೂ ಹೆಚ್ಚು ತಲುಪಿದೆ. ಇದರಿಂದಾಗಿ ಧಾಮಗಳಲ್ಲೂ ಅವ್ಯವಸ್ಥೆ ತಾಂಡವವಾಡುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಪ್ರಯಾಣಿಕರು ಆಗಮಿಸುತ್ತಿರುವುದರಿಂದ ಸರಕಾರದ ಆಡಳಿತದ ಕೈಗಳನ್ನು ಕಟ್ಟಿಹಾಕುವಂತ ಪರಿಸ್ಥಿತಿ ಉಂಟಾಗಿದೆ. ಈ ರೀತಿ ಪ್ರಯಾಣಿಕರು ಮಿತಿಯಿಲ್ಲದೇ ಹೆಚ್ಚಾಗುತ್ತಿರುವುದು ಸ್ಥಳೀಯ ದುರಾಡಳಿತಕ್ಕೆ ಕಾರಣ ಎನ್ನಲಾಗುತ್ತಿದೆ.

ಪಿಎಂಒ ವರದಿ

ಪಿಎಂಒ ವರದಿ

ಒಂದು ವಾರದಲ್ಲಿ 20 ಯಾತ್ರಿಕರು ಪ್ರಯಾಣದ ಸಮಯದಲ್ಲಿ ಸಾವಿನ್ನಪ್ಪಿರುವುದು ಭಯ ಹುಟ್ಟಿಸಲು ಪ್ರಾರಂಭಿಸಿದೆ. ಕೇಂದ್ರವೂ ಈ ಬಗ್ಗೆ ಎಚ್ಚರಿಕೆ ವಹಿಸುತ್ತಿದೆ. ಈ ಕುರಿತು ಪಿಎಂಒ ವರದಿ ತರಿಸಿಕೊಳ್ಳುವ ಬಗ್ಗೆ ವರದಿಯಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯೂ ಎಚ್ಚೆತ್ತುಕೊಂಡಿದೆ. ಆರೋಗ್ಯ ಇಲಾಖೆಯು ಆರೋಗ್ಯ ಸಲಹೆಯನ್ನು ನೀಡಿದೆ. ಇದರೊಂದಿಗೆ ಚಾರ್‌ಧಾಮ್‌ನ ಮುಖ್ಯ ಹಂತಗಳಲ್ಲಿ ತಪಾಸಣೆ ಮತ್ತು ತನಿಖೆಗಾಗಿ ಆರೋಗ್ಯ ಇಲಾಖೆ ತಂಡಗಳನ್ನು ಎಚ್ಚರಿಸಲಾಗಿದೆ. ಜೊತೆಗೆ ಹೆಚ್ಚು ಹೆಚ್ಚು ತನಿಖೆಗಳನ್ನು ಮಾಡಲು ಸೂಚಿಸಲಾಗಿದೆ. ಆದರೆ, ಚಾರ್ಧಾಮ್ ತಲುಪುವ ಜನಸಂದಣಿಗೆ ತಕ್ಕಂತೆ ಆರೋಗ್ಯ ಇಲಾಖೆಯೊಂದಿಗೆ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಸುಲಭವಲ್ಲ. ಆದರೂ ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣ ಮಾಡಲು ಸೂಚಿಸಲಾಗಿದೆ.

ಭಕ್ತರಿಗೆ ನೋಂದಣಿ ಕಡ್ಡಾಯ

ಭಕ್ತರಿಗೆ ನೋಂದಣಿ ಕಡ್ಡಾಯ

ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕಂಡು ರಾಜ್ಯ ಸರ್ಕಾರ ಕೂಡ ಕ್ರಮಕ್ಕೆ ಮುಂದಾಗಿದೆ. ಕ್ರಮೇಣ ವ್ಯವಸ್ಥೆಗಳು ಹಳಿಗೆ ಬರುತ್ತಿವೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಯಾತ್ರೆಗೆ ಬರುವ ಎಲ್ಲ ಭಕ್ತರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಇದರೊಂದಿಗೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸೂಚನೆಯ ಮೇರೆಗೆ, ಯಾತ್ರಾ ಋತುವಿನ ಮೊದಲ 45 ದಿನಗಳವರೆಗೆ, ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ದೈನಂದಿನ ದರ್ಶನಕ್ಕಾಗಿ ಭೇಟಿ ನೀಡುವ ಗರಿಷ್ಠ ಯಾತ್ರಾರ್ಥಿಗಳು, ಯಾತ್ರಿಕರ ಸಂಖ್ಯೆಯನ್ನು ತಲಾ ಒಂದು ಸಾವಿರ ಹೆಚ್ಚಿಸಲಾಗಿದೆ.

ನಿಯಂತ್ರಣ ತಪ್ಪಿದ ಚಾರ್‌ಧಾಮ್ ಯಾತ್ರಿಕರ ಸಂಖ್ಯೆ

ನಿಯಂತ್ರಣ ತಪ್ಪಿದ ಚಾರ್‌ಧಾಮ್ ಯಾತ್ರಿಕರ ಸಂಖ್ಯೆ

ಪರಿಷ್ಕೃತ ಆದೇಶದ ಪ್ರಕಾರ ಪ್ರತಿದಿನ ಗಂಗೋತ್ರಿಗೆ 8 ಸಾವಿರ, ಯಮುನೋತ್ರಿಯಲ್ಲಿ 5 ಸಾವಿರ, ಕೇದಾರನಾಥದಲ್ಲಿ 13 ಸಾವಿರ ಮತ್ತು ಬದರಿನಾಥಕ್ಕೆ 16 ಸಾವಿರ ಯಾತ್ರಾರ್ಥಿಗಳು ಭೇಟಿ ನೀಡಬಹುದಾಗಿದೆ. ಆದರೆ, ಈ ಹಿಂದೆ ನೀಡಿದ ಸೂಚನೆಯಂತೆ ದರ್ಶನ ಆಗುತ್ತಿಲ್ಲ. ಧಾಮಗಳಲ್ಲಿ ಸೇರುವ ಜನಸಮೂಹದ ಪ್ರಕಾರ, ದರ್ಶನಕ್ಕೆ ಮಿತಿಯನ್ನು ನಿಗದಿಪಡಿಸುವುದು ಸುಲಭವಲ್ಲ. ಪೊಲೀಸರ ಪರವಾಗಿ ಸಂಖ್ಯೆ ಹೆಚ್ಚಾಗಿರುವುದರಿಂದ ನೋಂದಣಿ ಇಲ್ಲದೆ ಹೋಗುವ ಪ್ರಯಾಣಿಕರನ್ನು ಚೆಕ್‌ಪೋಸ್ಟ್‌ನಲ್ಲಿಯೇ ನಿಲ್ಲಿಸುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಜನಸಂದಣಿಯನ್ನು ಗಮನಿಸಿದರೆ, ಪ್ರಸ್ತುತ ಚಾರ್‌ಧಾಮ್‌ನಲ್ಲಿನ ಪ್ರಯಾಣವು ಆಡಳಿತ ಮತ್ತು ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ.

Recommended Video

Srilanka ಹಿಂಸಾಚಾರ: ರಾಜಕಾರಣಿಗಳನ್ನೇ ಕೊಂದ ರೊಚ್ಚಿಗೆದ್ದ ಪ್ರತಿಭಟನಾಕಾರರು | Oneindia Kannada

English summary
Chardhami Yatra: Sadly, 20 pilgrims have been killed in a week since the start of the Chardham Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X