ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾತ್ರೆ ಶುರು ಆದ್ರೆ ಯಾತ್ರಿಕರನ್ನ ಕೇದಾರನೇ ಕಾಪಾಡ್ಬೇಕು

By Srinath
|
Google Oneindia Kannada News

ಡೆಹ್ರಾಡೂನ್, ಮೇ 3: ಹಿಂದೂಗಳ ಪುಣ್ಯಕ್ಷೇತ್ರಗಳಾದ ಹಿಮಾಲಯ ತಪ್ಪಲಿನ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ಚಾರ್ ಧಾಮ್ ಯಾತ್ರೆ ಶುಕ್ರವಾದಿಂದ ಆರಂಭವಾಗಿದೆ. ಆದರೆ ಕಳೆದ ವರ್ಷ ಇದೇ ಋತುವಿನಲ್ಲಿ ಕಂಡುಬಂದ ಪ್ರಕೃತಿಯ ಅಟ್ಟಹಾಸ ನೆನೆಪಿಸಿಕೊಂಡರೆ ಇಂದಿಗೂ ಕರಾಳ ಸ್ವಪ್ನದಂತೆ ಕಾಡುತ್ತದೆ.

ಹಾಗಂತ ಈ ಬಾರಿ ಮಳೆರಾಯ ಮತ್ತೆ ವಿಕಟಹಾಸ ಮೆರೆಯುತ್ತಾನಾ? ಗೊತ್ತಿಲ್ಲ. ಆದರೆ ಯಾತ್ರೆ ಸುಗಮವಾಗಿರುತ್ತದೆ ಎಂಬ ಯಾವುದೇ ಆಶಾಭಾವ ಇಲ್ಲ. ಚಾರ್ ಧಾಮ್ ಯಾತ್ರೆ ಅದರಲ್ಲೂ ಕೇದಾರನಾಥ ಮಾರ್ಗವಂತೂ ಕಳೆದ ವರ್ಷದ ಹಿಮಾಲಯ ಸುನಾಮಿಯಿಂದ ರಸ್ತೆಗಳು ಹಾಗಿರಲಿ ಭೂಮಿಯೇ ಕಣ್ಮರೆಯಾಗಿದ್ದು ರಸ್ತೆ ಪುನರ್ ನಿರ್ಮಾಣ ಕಾರ್ಯ ನಡೆದಿಲ್ಲ.

ಉತ್ತರಕಾಶಿಯಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳು ನಿನ್ನೆಯಿಂದ ಯಾತ್ರಿಕರಿಗೆ ಮುಕ್ತವಾಗಿದೆ. ಆದರೆ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು ಅನುಕ್ರಮವಾಗಿ ಮೇ 4 ಮತ್ತು ಮೇ 5ರಂದು ಬಾಗಿಲು ತೆರೆದುಕೊಳ್ಳುತ್ತದೆ. ಇನ್ನು 6 ತಿಂಗಳ ಕಾಲ ಅಂದರೆ ಚಳಿಗಾಲ ಕಾಲಿಡುವವರೆಗೂ ಯಾತ್ರಿಕರು ಇಲ್ಲಿ ಸ್ವಚ್ಚಂದವಾಗಿ ದೇವರ ಧ್ಯಾನದಲ್ಲಿ ತೊಡಗಬಹುದಾಗಿದೆ. (ಮೇಲಿನ ಚಿತ್ರ ಕೃಪೆ)

ಆದರೆ 2013 ಜೂನ್ ಮಹಾ ಪ್ರಳಯದ ನಂತರ 10 ತಿಂಗಳು ಕಳೆದರೂ ರುದ್ರಪ್ರಯಾಗ ಜಿಲ್ಲೆಯಲ್ಲಿನ ಕೇದರಾನಾಥ ಧಾಮದಲ್ಲಿ ಜೀರ್ಣೋದ್ಧಾರ ಕಾರ್ಯ ಪೂರ್ತಿಯಾಗಿಲ್ಲ. ವಾಸ್ತವವಾಗಿ ನಾಲ್ಕು ಧಾಮಗಳ ಪೈಕಿ ಕೇದಾರನಾಥದ ಹಾದಿ ಅತ್ಯಂತ ದುರ್ಗಮವಾಗಿದೆ. ಕಳೆದ ವರ್ಷ ಮಂದಾಕಿನಿ ನದಿ ರುದ್ರ ಭೀಕರವಾಗಿ ಉಕ್ಕಿಹರಿದಾಗ ದೇವರು ದಿಂಡಿರು ಅನ್ನದೆ ಹಾದಿಯಲ್ಲಿ ಸಿಕ್ಕಿದ್ದೆಲ್ಲಾ ಕೊಚ್ಚಿಹೋಗಿ, ಅದಿನ್ನೂ ಭೀಕರವಾಗಿದೆ.

ಸೋನಾಪ್ರಯಾಗದಲ್ಲಿಯೇ ಪ್ರಯಾಣಿಕರ ವಾಹನಗಳು ನಿಂತುಬಿಡುತ್ತವೆ. ಅಲ್ಲಿಂದ ಮುಂದಕ್ಕೆ ಮೂರು ಕಿಮೀ ಚಲಿಸಲು ಸ್ಥಳೀಯ ವಾಹನಗಳು ಲಭಿಸುತ್ತವೆ. ಅದರಾಚೆಗೆ 18 ಕಿಮೀ ಮೇಲಕ್ಕೇರಿ ಹೋಗಬೇಕಾಗುತ್ತದೆ. ಅದುವೇ ಅತ್ಯಂತ ದುರ್ಗಮ ದಾರಿ.

ಗೌರಿಕುಂಡದಿಂದ ಕೇದಾರನಾಥವರೆಗಿನ ಟ್ರೆಕ್ಕಿಂಗ್ ಮಾರ್ಗ ಇನ್ನೂ ದುರ್ಗಮ:


ಗೌರಿಕುಂಡದಿಂದ ಆರಂಭವಾಗಿ 15 ಕಿಮೀ ದೂರದ ಕೇದಾರನಾಥ ಮಾರ್ಗವನ್ನು ದುರಸ್ಥಿಗೊಳಿಸುವ ಕಾರ್ಯಕ್ಕೆ ವಿಶೇಷ ಕಾರ್ಯ ಪಡೆ ಯತ್ನಿಸುತ್ತಿದೆ. ಆದರೆ ಕಾರ್ಯ ಪ್ರಗತಿ ಹೆಚ್ಚಾಗಿ ಕಾಣುತ್ತಿಲ್ಲ. ಈ ಹಿಂದೆ ಅಂದರೆ 10 ತಿಂಗಳ ಹಿಂದೆ ಅಲ್ಲಲ್ಲಿ ಮಾರ್ಗ ಮಧ್ಯೆ ಹೋಟೆಲುಗಳು/ ಢಾಬಾಗಳು ಕೈಗೆಟುಕುತ್ತಿದ್ದವು. ಆದರೆ ಈ ಬಾರಿ ಒಂದು ಗೂಡಂಗಡಿಯೂ ತೆರೆದಿಲ್ಲ.

ರಾಜ್ಯಾಡಳಿತವೇ ಒಂದಷ್ಟು ಫುಡ್ಡು, ವಸತಿ ಸೌಲಭ್ಯ ಒದಗಿಸುತ್ತಿದೆ. ಆದರೆ ಅದು ಸಾಲದಾಗಿದೆ. ಅಬ್ಬಬ್ಬಾ ಅಂದರೆ 750 ಜನಕ್ಕೆ ಆಗುವಷ್ಟು ವ್ಯವಸ್ಥೆಯನ್ನು ಸರಕಾರ ಕಲ್ಪಿಸುತ್ತದೆ. ಇದೂ ಕೇದಾರನಾಥ ದೇವಸ್ಥಾನವು ತಲೆಯ ಮೇಲೆ ಇನ್ನೂ ಐದು ಕಿಮೀ ದೂರದಲ್ಲಿದೆ ಅನ್ನುವಾಗಲೇ ಬಂದ್ ಆಗಿಬಿಡುತ್ತವೆ. ಹಾಗಾಗಿ ಅಲ್ಲಿಂದ ಮುಂದಕ್ಕೆ 5 ಕಿಮೀ ಮಾರ್ಗ ಹತ್ತುಪಟ್ಟು ಹೆಚ್ಚು ದುರ್ಗಮವಾಗಿಬಿಡುತ್ತದೆ.

ಆದರೆ ಈ ಜಾಗದವರೆಗೂ ತಲುಪಲು (ಲಾಮಚುಲಿ) ಹೆಲಿಕಾಪ್ಟರಿನಲ್ಲಿಯೂ ಹೋಗಬಹುದು. ಕೇದಾರನಾಥ ಸುತ್ತಮುತ್ತ ಈಗ ಒಟ್ಟು ನಾಲ್ಕು ಹೆಲಿಪ್ಯಾಡ್ ಗಳು ನಿರ್ಮಾಣವಾಗಿವೆ. ಅಂದರೆ ಕಾಸಿದ್ದವರು ಪ್ರಯಾಸಪಡದೆ ಕೈಲಾಸ ನೋಡಿಬರಬಹುದು.

English summary
Char Dham Yatra 2014 begins but Kedarnath pilgrimage even now tough. Pilgrims must negotiate the new, and rather challenging, 18-km route to reach the Kedarnath shrine. Even after more than 10 months since the 2013 June disaster, the restoration work of the Kedarnath shrine, in Ruderprayag district, is yet to be completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X