ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Important Report: ಮಾ.1ರಿಂದ ಸಿಲಿಂಡರ್, ಬ್ಯಾಂಕ್, ಡಿಜಿಟಲ್ ಪಾವತಿಯಲ್ಲಿ ಏನೆಲ್ಲ ಬದಲಾವಣೆ?

|
Google Oneindia Kannada News

ನವದೆಹಲಿ, ಫೆಬ್ರವರಿ 28: ಭಾರತದಲ್ಲಿ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುವಂತಹ ವಹಿವಾಟುಗಳ ಬೆಲೆಯಲ್ಲಿ ನಿತ್ಯ ಬದಲಾವಣೆಗಳು ನಡೆಯುವುದು ಸರ್ವೇ ಸಾಮಾನ್ಯ. ಆದರೆ ಇದರ ಮಧ್ಯೆ ಪ್ರತಿ ತಿಂಗಳು ಬ್ಯಾಂಕಿಂಗ್, ಎಲ್‌ಪಿಜಿ ಗ್ಯಾಸ್, ಪೋಸ್ಟ್ ಸೇರಿದಂತೆ ಹಲವು ವಲಯಗಳಲ್ಲಿ ಬದಲಾವಣೆಗಳು ನಡೆಯುತ್ತವೆ.

ಮಾರ್ಚ್ ತಿಂಗಳಿನಿಂದ ಅದೇ ರೀತಿ ಯಾವ ವಲಯಗಳಲ್ಲಿ ಏನೆಲ್ಲ ನಿಯಮಗಳು ಬದಲಾವಣೆ ಆಗುತ್ತವೆ ಎಂಬ ಕುತೂಹಲ ಪ್ರತಿಯೊಬ್ಬರನ್ನೂ ಕಾಡುತ್ತಿರಬಹುದು. ಅಲ್ಲದೇ ಹೀಗೆ ಬದಲಾಗುವ ನಿಮಯಗಳು ನಮ್ಮ ಜೀವನದ ಮೇಲೆ ಹೇಗೆಲ್ಲ ಪರಿಣಾಮ ಬೀರಬಲ್ಲದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.

ಒಳ್ಳೆಯ ಸುದ್ದಿ: LPG ಸಂಪರ್ಕವು ಕೇವಲ ಒಂದು ಮಿಸ್ಡ್ ಕಾಲ್‌ನೊಂದಿಗೆ ಲಭ್ಯಒಳ್ಳೆಯ ಸುದ್ದಿ: LPG ಸಂಪರ್ಕವು ಕೇವಲ ಒಂದು ಮಿಸ್ಡ್ ಕಾಲ್‌ನೊಂದಿಗೆ ಲಭ್ಯ

ರಷ್ಯಾ-ಉಕ್ರೇನ್ ನಡುವಿನ ಯುದ್ಧವು ನೆರೆಹೊರೆಯ ರಾಷ್ಟ್ರಗಳಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಗೆ ಕಾರಣವಾಗಬಲ್ಲದು ಎಂದು ಈಗಾಗಲೇ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಇದರ ಮಧ್ಯೆ ಮಾರ್ಚ್ ತಿಂಗಳಿನಿಂದ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಬದಲಾವಣೆ ಆಗುವ ಸಾಧ್ಯತೆಯಿದೆ. ಮಾರ್ಚ್ 1ರಿಂದ ನಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಬಲ್ಲ ಯಾವೆಲ್ಲ ವಲಯಗಳಲ್ಲಿ ಏನೆಲ್ಲ ಬದಲಾವಣೆ ಆಗಬಹುದು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಎಲ್‌ಪಿಜಿ ಗ್ಯಾಸ್ ಬೆಲೆ

ಎಲ್‌ಪಿಜಿ ಗ್ಯಾಸ್ ಬೆಲೆ

ದೇಶದಲ್ಲಿ ಜನರ ಬದುಕಿಗೆ ತೀರಾ ಅತ್ಯಗತ್ಯ ಎನಿಸಿರುವ ದೈನಂದಿನ ವಸ್ತುಗಳಲ್ಲಿ ಸಿಲಿಂಡರ್ ಕೂಡ ಒಂದಾಗಿದೆ. ಇತ್ತೀಚಿನ ಹಲವು ತಿಂಗಳುಗಳಿಂದ LPG ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಆದ್ದರಿಂದ ಅದರ ಬೆಲೆಯಲ್ಲಿ ಮಾರ್ಚ್ 1, 2022ರಂದು ಬದಲಾಗಬಹುದು ಎಂದು ನಿರೀಕ್ಷಿಸಲಾಗಿದೆ. ಮಾರ್ಚ್ 1 ರಂದು ಸಿಲಿಂಡರ್ ಬೆಲೆ ಹೆಚ್ಚಾಗುತ್ತವೆಯೇ ಅಥವಾ ಸ್ಥಿರವಾಗಿರುತ್ತವೆಯೇ ಎಂಬುದು ತೀವ್ರ ಕುತೂಹಲಕಾರಿಯಾಗಿದೆ.

IPPB ಖಾತೆ ಕ್ಲೋಸ್ ಮಾಡುವುದಕ್ಕೂ ಶುಲ್ಕ

IPPB ಖಾತೆ ಕ್ಲೋಸ್ ಮಾಡುವುದಕ್ಕೂ ಶುಲ್ಕ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ತನ್ನ ಡಿಜಿಟಲ್ ಉಳಿತಾಯ ಖಾತೆಯನ್ನು ಕ್ಲೋಸ್ ಮಾಡುವುದಕ್ಕೂ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ. ನೀವು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ನೀವು ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕ 150 ರೂಪಾಯಿ ಆಗಿರುತ್ತದೆ. ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಬ್ಯಾಂಕ್‌ನಿಂದ ಈ ಹೊಸ ನಿಯಮವನ್ನು ಮಾರ್ಚ್ 5, 2022ರಿಂದ ಜಾರಿಗೆ ತರಲಾಗುವುದು ಎಂದು ತಿಳಿದು ಬಂದಿದೆ.

ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತದಲ್ಲಿ ಈ ಅಗತ್ಯ ವಸ್ತುಗಳು ಬಲುದುಬಾರಿ!ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತದಲ್ಲಿ ಈ ಅಗತ್ಯ ವಸ್ತುಗಳು ಬಲುದುಬಾರಿ!

ಫೆ.28ರಂದು ಪಿಂಚಣಿದಾರರಿಗೆ ನೀಡಿದ ವಿನಾಯಿತಿ ಅಂತ್ಯ

ಫೆ.28ರಂದು ಪಿಂಚಣಿದಾರರಿಗೆ ನೀಡಿದ ವಿನಾಯಿತಿ ಅಂತ್ಯ

ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ. ಮಾರ್ಚ್ ತಿಂಗಳಿನಿಂದ ಸರ್ಕಾರ ನೀಡಿರುವ ವಿನಾಯಿತಿ ಅವಧಿ ಮುಕ್ತಾಯವಾಗುತ್ತದೆ. ನಿರಂತರವಾಗಿ ಪಿಂಚಣಿ ಪಡೆಯುವುದನ್ನು ಮುಂದುವರಿಸಲು, ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಮಾರ್ಚ್ 1ಕ್ಕಿಂತ ಮೊದಲೇ ಸಲ್ಲಿಸಿರಬೇಕು. ಸಾಮಾನ್ಯವಾಗಿ ಪ್ರತಿ ವರ್ಷ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಆಗಿರುತ್ತದೆ. ಆದರೆ 2022ನೇ ಸಾಲಿನಲ್ಲಿ ಸರ್ಕಾರಿ ಪಿಂಚಣಿದಾರರಿಗೆ ಎರಡು ಬಾರಿ ದಿನಾಂಕ ವಿಸ್ತರಣೆ ಮೂಲಕ ಅವಕಾಶ ನೀಡಲಾಗಿದೆ. ಒಂದು ವೇಳೆ ಜೀವಿತ ಪ್ರಮಾಣ ಪತ್ರವನ್ನು ನಿಗದಿತ ಗಡುವಿನ ಮೊದಲು ಸಲ್ಲಿಸದಿದ್ದರೆ ಪಿಂಚಣಿಯನ್ನು ನಿಲ್ಲಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮನೆಯಲ್ಲಿ ಕುಳಿತು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಇದಕ್ಕಾಗಿ ನೀವು ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ.

ದೇಶದ ಡಿಜಿಟಲ್ ಪಾವತಿಯಲ್ಲಿ ಬದಲಾವಣೆ

ದೇಶದ ಡಿಜಿಟಲ್ ಪಾವತಿಯಲ್ಲಿ ಬದಲಾವಣೆ

ಡಿಜಿಟಲ್ ಪಾವತಿಯಲ್ಲಿ ಪ್ರಮುಖ ಬದಲಾವಣೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿದ್ಧತೆ ನಡೆಸಿದೆ. QR ಕೋಡ್ ಬಳಕೆದಾರರು ಒಂದು ಅಥವಾ ಹೆಚ್ಚಿನ ಇಂಟರ್‌ಆಪರೇಬಲ್ QR ಕೋಡ್‌ಗಳಿಗೆ ಬದಲಾಗುತ್ತಾರೆ. ಈ ವರ್ಗಾವಣೆ ಪ್ರಕ್ರಿಯೆಯನ್ನು ಮಾರ್ಚ್ 31, 2022 ರೊಳಗೆ ಪೂರ್ಣಗೊಳಿಸಬೇಕು. ಇದರೊಂದಿಗೆ, ಯಾವುದೇ ಪಾವತಿ ವಹಿವಾಟಿಗೆ ಯಾವುದೇ PSO ಹಾಗೂ ಯಾವುದೇ ಹೊಸ ಕೋಡ್ ಅನ್ನು ಪರಿಚಯಿಸುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಎಟಿಎಂಗಳಲ್ಲಿ ಹಣ ತುಂಬುವ ನಿಯಮದಲ್ಲಿ ಬದಲಾವಣೆ

ಎಟಿಎಂಗಳಲ್ಲಿ ಹಣ ತುಂಬುವ ನಿಯಮದಲ್ಲಿ ಬದಲಾವಣೆ

ಬ್ಯಾಂಕ್‌ಗಳ ಎಟಿಎಂಗಳಲ್ಲಿ ಹಣ ತುಂಬುವ ನಿಯಮಗಳು ಮಾರ್ಚ್‌ನಲ್ಲಿ ಬದಲಾಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಟಿಎಂಗಳಲ್ಲಿ ನಗದು ತುಂಬಲು ಮಾತ್ರ ಲಾಕ್ ಮಾಡಬಹುದಾದ ಕ್ಯಾಸೆಟ್‌ಗಳ ಬಳಕೆಯನ್ನು ಜಾರಿಗೆ ತರಲು ಬ್ಯಾಂಕ್‌ಗಳಿಗೆ ಮಾರ್ಚ್ 2022ರವರೆಗೆ ಅವಕಾಶ ನೀಡಿದೆ. ಪ್ರಸ್ತುತ, ಹೆಚ್ಚಿನ ಎಟಿಎಂಗಳು (ಸ್ವಯಂಚಾಲಿತ ಟೆಲ್ಲರ್ ಯಂತ್ರಗಳು) ತೆರೆದ ನಗದು ಟಾಪ್-ಅಪ್ ಅಥವಾ ಸ್ಥಳದಲ್ಲೇ ಹಣವನ್ನು ಯಂತ್ರಕ್ಕೆ ಹಾಕುವ ಮೂಲಕ ಹಣವನ್ನು ತುಂಬಿಸಲಾಗುತ್ತದೆ.

ಎಟಿಎಂಗಳಲ್ಲಿ ನಗದು ವಿತರಿಸುವ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ತೆಗೆದುಹಾಕುವ ಸಲುವಾಗಿ, ಎಟಿಎಂಗಳಲ್ಲಿ ನಗದು ಮರುಪೂರಣದ ಸಮಯದಲ್ಲಿ ಲಾಕ್ ಮಾಡಬಹುದಾದ ಕ್ಯಾಸೆಟ್‌ಗಳನ್ನು ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ.


English summary
Changes from 1st March 2022: Changes can be seen in many rules related to your everyday life from 1 March 2022. These have changed the rules related to the price of LPG gas cylinders to bank charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X