ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Changes from 1st April : ಉಳಿತಾಯಕ್ಕೂ ಮೊದಲು ಓದಿ: ದೇಶದಲ್ಲಿ ಏಪ್ರಿಲ್ 1ರಿಂದ ಏನೆಲ್ಲಾ ನಿಯಮಗಳ ಬದಲಾವಣೆ?

|
Google Oneindia Kannada News

ನವದೆಹಲಿ, ಮಾರ್ಚ್ 28: ಭಾರತದಲ್ಲಿ ಹಲವು ಆರ್ಥಿಕ ಬದಲಾವಣೆ ಮತ್ತು ಏರಿಳಿತಗಳಿಗೆ ಏಪ್ರಿಲ್ ತಿಂಗಳು ಸಾಕ್ಷಿ ಆಗಲಿದೆ. ಹೊಸ ಆರ್ಥಿಕ ವರ್ಷದ ಪ್ರಾರಂಭಿಕ ತಿಂಗಳಿನಲ್ಲಿ ಏನೆಲ್ಲಾ ನಿಯಮಗಳು ಬದಲಾಗುತ್ತದೆ ಎಂಬ ಕುತೂಹಲಕ್ಕೆ ಈ ವರದಿಯಲ್ಲಿ ಉತ್ತರ ತಿಳಿಯಿರಿ.

ದೇಶದಲ್ಲಿ ಮುಂಬರುವ ಏಪ್ರಿಲ್ 1ನೇ ತಾರೀಖಿನಿಂದಲೇ ಹೊಸ ನಿಯಮಗಳು ಬ್ಯಾಂಕಿಂಗ್, ಪಿಎಫ್, ಆಧಾರ್ ಕಾರ್ಡ್ ಜೋಡಣೆ ಹೀಗೆ ಹಲವು ವಿಷಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಜಿಎಸ್‌ಟಿ ನಿಯಮ ಬದಲಾವಣೆ: ಓಲಾ, ಊಬರ್‌ ಪ್ರಯಾಣ ದುಬಾರಿ!ಜಿಎಸ್‌ಟಿ ನಿಯಮ ಬದಲಾವಣೆ: ಓಲಾ, ಊಬರ್‌ ಪ್ರಯಾಣ ದುಬಾರಿ!

ರಷ್ಯಾ-ಉಕ್ರೇನ್ ಯುದ್ಧದ ಕಾರಣಕ್ಕಾಗಿ ಈಗಾಗಲೇ ಇಂಧನ ಬೆಲೆಗಳು ಗಗನಮುಖಿಯಾಗಿ ಏರಿಕೆ ಕಂಡಿವೆ. ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲೂ ಏರಿಳಿತ ಮುಂದುವರಿದಿದೆ. ಅಡುಗೆ ಎಣ್ಣೆಯಿಂದ ಹಿಡಿದು ಪ್ರಮುಖ ಅಗತ್ಯ ಸರಕು ಸೇವೆಗಳ ಬೆಲೆ ಏರಿಕೆಯಾಗುವ ನಿರೀಕ್ಷೆಗಳಿವೆ. ಈ ಎಲ್ಲ ಬೆಳವಣಿಗೆಗಳು ದೇಶದ ಬ್ಯಾಂಕಿಂಗ್ ವಲಯ ಸೇರಿದಂತೆ ಹಲವು ವಲಯಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿಯೋಣ.

ಪಿಎಫ್ ಹಣಕ್ಕೂ ಬಡ್ಡಿ

ಪಿಎಫ್ ಹಣಕ್ಕೂ ಬಡ್ಡಿ

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಆದಾಯ ತೆರಿಗೆ (25ನೇ ತಿದ್ದುಪಡಿ) ನಿಯಮ 2021 ಅನ್ನು ಏಪ್ರಿಲ್ 1 ರಿಂದ ಜಾರಿಗೆ ತರಲು ನಿರ್ಧರಿಸಿದೆ. ಇದರಿಂದ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ 2.5 ಲಕ್ಷ ರೂಪಾಯಿಗಳವರೆಗೆ ತೆರಿಗೆ-ಮುಕ್ತ ಕೊಡುಗೆಯ ಮಿತಿಯನ್ನು ವಿಧಿಸಲಾಗುತ್ತಿದೆ ( ಇಪಿಎಫ್) ಖಾತೆ. ಇದಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡಿದರೆ, ಆದಾಯಕ್ಕೆ ತೆರಿಗೆ ಬಡ್ಡಿ ವಿಧಿಸಲಾಗುತ್ತದೆ.

ಉಳಿತಾಯ ಖಾತೆಗೆ ನೇರವಾಗಿ ಬಡ್ಡಿ ಹಣ ಪಾವತಿ

ಉಳಿತಾಯ ಖಾತೆಗೆ ನೇರವಾಗಿ ಬಡ್ಡಿ ಹಣ ಪಾವತಿ

ಪೋಸ್ಟ್ ಆಫೀಸ್‌ನ ಮಾಸಿಕ ಆದಾಯ ಯೋಜನೆ (MIS), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಅಥವಾ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ (TD) ನಲ್ಲಿ ಹೂಡಿಕೆ ಮಾಡಲು ಸಂಬಂಧಿಸಿದ ನಿಯಮಗಳು ಸಹ ಬದಲಾಗಲಿವೆ. ಈ ಯೋಜನೆಗಳಲ್ಲಿನ ಬಡ್ಡಿ ಹಣವನ್ನು ಏಪ್ರಿಲ್ 1 ರಿಂದ ನಗದು ರೂಪದಲ್ಲಿ ನೀಡುವುದಿಲ್ಲ. ಅದರ ಬದಲಿಗೆ ನೀವು ಉಳಿತಾಯ ಖಾತೆಯನ್ನು ತೆರೆಯಬೇಕಾಗುತ್ತದೆ. ಅಂಚೆ ಇಲಾಖೆಯ ಪ್ರಕಾರ, ಅನೇಕ ಗ್ರಾಹಕರು ತಮ್ಮ ಅಂಚೆ ಕಚೇರಿಯ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಯನ್ನು ತಮ್ಮ MIS, SCSS, TD ಯೊಂದಿಗೆ ಲಿಂಕ್ ಮಾಡಿಲ್ಲ. ಇಂತಹ ಸಂದರ್ಭಗಳಲ್ಲಿ ಬಡ್ಡಿಯನ್ನು ಪಾವತಿ ಮಾಡಲಾಗುವುದಿಲ್ಲ.

ಜಿಎಸ್‌ಟಿ ನಿಮಯಗಳ ಸರಳಗೊಳಿಸುವಿಕೆ

ಜಿಎಸ್‌ಟಿ ನಿಮಯಗಳ ಸರಳಗೊಳಿಸುವಿಕೆ

ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC)ಯು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಇ-ಚಲನ್‌ಗಳ (ಎಲೆಕ್ಟ್ರಾನಿಕ್ ಚಲನ್‌ಗಳು) ವಿತರಣೆಯ ವಹಿವಾಟಿನ ಮಿತಿಯನ್ನು ಹಿಂದಿನ 50 ಕೋಟಿ ರೂಪಾಯಿ ನಿಗದಿತ ಮಿತಿಯಿಂದ 20 ಕೋಟಿಗೆ ಇಳಿಸಲಾಗಿದೆ.

ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ

ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ

ಮಾರ್ಚ್ 31ರೊಳಗೆ ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್ ಸಂಖ್ಯೆಯ ಜೊತೆ ಲಿಂಕ್ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ನಿಮಗೆ ದಂಡ ವಿಧಿಸಲಾಗುತ್ತದೆ. ಈ ದಂಡವನ್ನು ವಿಧಿಸಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234H ಅನ್ನು ಬಳಸಲಾಗುತ್ತದೆ. ಸರ್ಕಾರವು ಇನ್ನೂ ದಂಡದ ಮೊತ್ತವನ್ನು ಘೋಷಿಸದಿದ್ದರೂ, ನಿಗದಿತ ದಿನಾಂಕದ ನಂತರ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದಕ್ಕೆ ಗರಿಷ್ಠ 1000 ರೂಪಾಯಿವರೆಗೂ ಶುಲ್ಕ ವಿಧಿಸಲಾಗುತ್ತದೆ.

English summary
Changes From April 2022: What are the Rules Changing From 1st April 2022. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X