ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 2 ಜಸ್ಟ್ ಮಿಸ್ ಆಗಿದ್ದನ್ನು ಸಂಭ್ರಮಿಸಿದ 'ವಿಘ್ನ ಸಂತೋಷಿಗಳು'

|
Google Oneindia Kannada News

Recommended Video

ಪಾಪ ಭಾರತ ಬಡ ದೇಶ ಎಂದ ಪಾಕಿಸ್ತಾನ..? | Chandrayaan 2 | Oneindia Kannada

ಸೋಲೇ ಗೆಲುವಿನ ಮೆಟ್ಟಲು ಎಂದು ಪ್ರಧಾನಿ ಮೋದಿ ಆದಿಯಾಗಿ, ಇಡೀ ಭಾರತ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಬೆನ್ನು ತಟ್ಟುತ್ತಿದ್ದಾರೆ.

ಆದರೆ, ಪಕ್ಕದ ಉಗ್ರರ ನೆಲೆಬೀಡಾಗಿರುವ ಪಾಕಿಸ್ತಾನದಲ್ಲಿ, ಚಂದ್ರಯಾನ 2 ಸ್ವಲ್ಪದರಲ್ಲೇ ವಿಫಲವಾಗಿದ್ದಕ್ಕೆ, ಸಂಭ್ರಮಿಸಲಾಗುತ್ತಿದೆ. ಭಾರತದ ವಿಜ್ಞಾನಿಗಳನ್ನು ಕೆಣಕುವ/ಅಣಕವಾಡುವ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ.

#IndiaFailed ಎನ್ನುವ ಟ್ವಿಟ್ಟರ್ ಹ್ಯಾಷ್ ಟ್ಯಾಗ್, ಪಾಕಿಸ್ತಾನದ ನಗರಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ವಿಷಾದದ ಸಂಗತಿ ಏನಂದರೆ, ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೇ, ಚಂದ್ರಯಾನದ ಬಗ್ಗೆ ತಮಾಷೆಯಾಡುತ್ತಿದ್ದಾರೆ.

ಕೊನೆಯ ಕ್ಷಣದಲ್ಲಿ ಎದುರಾದ ನಿರಾಶೆ: ಸಂವಹನ ಕಳೆದುಕೊಂಡ ಚಂದ್ರಯಾನ 2 ನೌಕೆಕೊನೆಯ ಕ್ಷಣದಲ್ಲಿ ಎದುರಾದ ನಿರಾಶೆ: ಸಂವಹನ ಕಳೆದುಕೊಂಡ ಚಂದ್ರಯಾನ 2 ನೌಕೆ

ಸಚಿವ, ಫವದ್ ಹುಸೇನ್, ಹಲವು ರೀತಿಯ ಟ್ವೀಟ್ ಗಳನ್ನು ಚಂದ್ರಯಾನ ಮತ್ತು ಕಾಶ್ಮೀರದ ವಿಚಾರದಲ್ಲಿ ಪೋಸ್ಟ್ ಮಾಡಿ, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೆಲವೊಂದು ಟ್ವೀಟ್ ಗಳು ಹೀಗಿವೆ:

ಪಾಕ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವನ ಟ್ವೀಟ್

ಪಾಕ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವನ ಟ್ವೀಟ್

ಮೊದಲ ಹೆಜ್ಜೆ: ಆಪ್ ಡೌನ್ಲೋಡ್ ಮಾಡಿಕೊಳ್ಳಿ
ಎರಡನೇ ಹೆಜ್ಜೆ : ನಗರ ಮತ್ತು ತಿಂಗಳನ್ನು ಆಯ್ಕೆಮಾಡಿ
ಮೂರನೇ ಹೆಜ್ಜೆ: ನೇವಿಗೇಶನ್ ಗೆ ಹೋಗಿ, ಸರ್ಜ್ ಆಯ್ಕೆಮಾಡಿ
ನಾಲ್ಕನೇ ಹೆಜ್ಜೆ: ಚಂದ್ರ (ಮೂನ್) ಎಂದು ಬರೆಯಿರಿ
ಐದನೇ ಹೆಜ್ಜೆ: ಆಪ್ ನಲ್ಲಿ ಚಂದ್ರನಿಗೆ ಮುಖವಾಗಿ ಮೊಬೈಲ್ ಫೋನ್ ಇಡಿ
ಆರನೇ ಹೆಜ್ಜೆ: ಚಂದ್ರ ಅಲ್ಲಿ ಕಾಣಿಸುತ್ತಾನೆ.

ಬಡರಾಷ್ಟ್ರ ಭಾರತದ 900 ಕೋಟಿ ವೇಸ್ಟ್ ಮಾಡಿದ್ದಕ್ಕಾಗಿ ಪ್ರಶ್ನೆ ಕೇಳಬೇಕು

ಬಡರಾಷ್ಟ್ರ ಭಾರತದ 900 ಕೋಟಿ ವೇಸ್ಟ್ ಮಾಡಿದ್ದಕ್ಕಾಗಿ ಪ್ರಶ್ನೆ ಕೇಳಬೇಕು

ಭಾರತದ ಪ್ರಧಾನಿ ಮೋದಿ ಒಬ್ಬ ಗಗನಯಾತ್ರಿ. ಅವರು ರಾಜಕಾರಣಿಯಲ್ಲ, ಹಾಗಾಗಿ, ಸೆಟಿಲೈಟ್ ಬಗ್ಗೆ ಭಾಷಣವನ್ನು ಮಾಡುತ್ತಿದ್ದಾರೆ. ಚಂದ್ರಯಾನದ ಬಗ್ಗೆ, ಬಡರಾಷ್ಟ್ರ ಭಾರತದ 900 ಕೋಟಿ ವೇಸ್ಟ್ ಮಾಡಿದ್ದಕ್ಕಾಗಿ, ಲೋಕಸಭೆಯಲ್ಲಿ ಇವರನ್ನು ಪ್ರಶ್ನಿಸಬೇಕಿದೆ - ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವದ್ ಹುಸೇನ್ ಮಾಡಿರುವ ಟ್ವೀಟ್.

ಧೃತಿಗೆಡಬೇಡಿ, ದೇಶವೇ ನಿಮ್ಮೊಂದಿಗಿದೆ: ಇಸ್ರೋಗೆ ಧೈರ್ಯ ಹೇಳಿದ ಮೋದಿಧೃತಿಗೆಡಬೇಡಿ, ದೇಶವೇ ನಿಮ್ಮೊಂದಿಗಿದೆ: ಇಸ್ರೋಗೆ ಧೈರ್ಯ ಹೇಳಿದ ಮೋದಿ

ಮೋದಿ, ಕಂಟ್ರೋಲ್ ರೂಂನಿಂದ ಹೋಗಿದ್ದನ್ನು ನೋಡಬೇಕಾಗಿತ್ತು

ಮೋದಿ, ಕಂಟ್ರೋಲ್ ರೂಂನಿಂದ ಹೋಗಿದ್ದನ್ನು ನೋಡಬೇಕಾಗಿತ್ತು

" ಮೋದಿ, ಕಂಟ್ರೋಲ್ ರೂಂನಿಂದ ಹೋಗಿದ್ದನ್ನು ನೋಡಬೇಕಾಗಿತ್ತು" ಎನ್ನುವ ಟ್ವೀಟಿಗೆ ಪ್ರತಿಕ್ರಿಯಿಸಿರುವ ಅಲ್ಲಿನ ಸಚಿವ, " ಉಫ್.. ಆ ಅದ್ಭುತ ಕ್ಷಣವನ್ನು ನಾನ್ ಮಿಸ್ ಮಾಡಿಕೊಂಡೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ, "ಭಾರತದ ಟ್ರೋಲ್ ನನ್ನ ವಿರುದ್ದ ಕಿಡಿಕಾರುತ್ತಿದೆ. ಅವರ ಚಂದ್ರಯಾನ ಫೇಲ್ ಆಗಿದ್ದು ನನ್ನಿಂದಾನಾ? ಸುಮ್ಮನೆ 900 ಕೋಟಿ ಖರ್ಚಾಯಿತಲ್ಲ ಎಂದು ನಾನು ಹೇಳಿದ್ದು" ಎಂದು ಫವದ್ ಹುಸೇನ್ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.

ಮನುಷ್ಯರಾಗಿರುವ ನಾವು, ಮಾನವ ಪ್ರಯತ್ನದ ಬಗ್ಗೆ ಹೆಮ್ಮೆ ಪಡಬೇಕು

"#IndiaFailed ಅವರು ಕನಿಷ್ಠ ಪ್ರಯತ್ನಿಸಿದರು, ನಾವು (ಪಾಕ್) ಚಂದ್ರನ ಬಳಿಗೆ ಹೋಗಲು ಎಷ್ಟು ಬಾರಿ ಪ್ರಯತ್ನಿಸಿದ್ದೇವೆ? ಅಪಹಾಸ್ಯ ಮಾಡಬೇಡಿ. ಮನುಷ್ಯರಾಗಿರುವ ನಾವು, ಮಾನವ ಪ್ರಯತ್ನದ ಬಗ್ಗೆ ಹೆಮ್ಮೆ ಪಡಬೇಕು. #ISRO ಅದ್ಭುತ ಕೆಲಸ. ಒಂದು ದಿನ ನೀವು ಯಶಸ್ವಿಯಾಗುತ್ತೀರಿ" ಎಂದು ಪಾಕ್ ಮೂಲದ ಫಿಯಾತ್ ಎನ್ನುವವರು ಮಾಡಿರುವ ಟ್ವೀಟ್.

ಟಾಟಾ ಬಾಯ್ ಬಾಯ್, ಇಲ್ಲಿ ಶೌಚಾಲಯ

ಟಾಟಾ ಬಾಯ್ ಬಾಯ್, ಇಲ್ಲಿ ಶೌಚಾಲಯ

ವಿಕ್ರಂ ಲ್ಯಾಂಡರ್ ನಿಂದ ಇಸ್ರೋಗೆ ಈಗತಾನೇ ಸಂದೇಶವೊಂದು ಬಂತು, ಅದು "ಟಾಟಾ ಬಾಯ್ ಬಾಯ್, ಇಲ್ಲಿ ಶೌಚಾಲಯ ಇದೆ" ಎನ್ನುವ ಟ್ವೀಟ್. ಇನ್ನೊಂದು ಟ್ವೀಟ್ ನಲ್ಲಿ Excellence of Endian Technology ಎಂದು ಇಂಡಿಯಾವಾನ್ನು ಎಂಡಿಯಾ ಎಂದು ಬರೆದು, ನಮ್ಮ ವಿಜ್ಞಾನಿಗಳ ಫೋಟೋ ಹಾಕಿ ಲೇವಡಿ ಮಾಡಲಾಗಿದೆ.

English summary
Chandrayan 2: India Failed Twitter Hashtag Trending In Pakistan. Science and Technology Minsiter of Pakistan, himself tweeting against ISRO and India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X