• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020ರಲ್ಲಿ ಮತ್ತೆ ಚಂದ್ರನತ್ತ ಇಸ್ರೋ ಪಯಣ

|

ನವದೆಹಲಿ, ಜನವರಿ 1: ದೇಶದ ಪ್ರತಿಷ್ಠೆ ಹಾಗೂ ಹೆಗ್ಗಳಿಕೆಯ ಪ್ರತೀಕವಾಗಿರುವ ಚಂದ್ರಯಾನ-3 2020ರಲ್ಲಿ ಅನುಷ್ಠಾನಕ್ಕೆ ಬರಲಿದೆ.

ಹಾಗೂ ಈ ಯೋಜನೆಯ ಒಟ್ಟಾರೆ ವೆಚ್ಚವು ಚಂದ್ರಯಾನ-2ಕ್ಕಿಂತಲೂ ಕಡಿಮೆ ಇರಲಿದೆ. ಚಂದ್ರಯಾನ 2ರ ಭಾಗಶಃ ವೈಫಲ್ಯ ಬಳಿಕ ಚಂದ್ರಯಾನ-3ರ ಚರ್ಚೆ ಆರಂಭವಾಗಿದ್ದು, ಚಂದ್ರಯಾನ-2ರಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಆಗುವುದು ಉಳಿದೆಲ್ಲಾ ಪ್ರಕ್ರಿಯೆಗಳು ಯಶಸ್ವಿಯಾಗಿ ನಡೆದಿದ್ದವು.

ಈ ಸಂಬಂಧ ಮಾಹಿತಿ ನೀಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಚಂದ್ರಯಾನ-2 ವಿಫಲ ಬಾಹ್ಯಾಕಾಶ ಯೋಜನೆ ಎಂದು ಹೇಳಲು ಸಾಧ್ಯವಿಲ್ಲ.

ಕೇಂದ್ರ ಸರ್ಕಾರ ಮತ್ತು ದೇಶದ ಪ್ರತಿಯೊಬ್ಬರು ಈ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಇಸ್ರೋ ವಿಜ್ಞಾನಿಗಳ ಬಗ್ಗೆ ಗೌರವ ಬೆಳೆಸಿಕೊಂಡಿದ್ದಾರೆ.

ಚಂದ್ರಯಾನ-2 ವೈಫಲ್ಯದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಇಸ್ರೋ

ಆದರೆ ವಿಕ್ರಮ್ ಲ್ಯಾಂಡರ್‌ನ ಸಾಫ್ಟ್‌ ಲ್ಯಾಂಡರ್‌ಗೆ ಸಂಬಂಧಿಸಿ ಇಸ್ರೋ ಸಾಕಷ್ಟು ಪಾಠ ಕಲಿತಿದೆ.ಈ ಅನುಭವ ಆಧರಿಸಿ ಚಂದ್ರಯಾನ 3ನ್ನು 2020ರಲ್ಲಿ ಅನುಷ್ಠಾನಗೊಳಿಸಲು ಇಸ್ರೋ ಮುಂದಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಆದರೆ2020ರ ಯಾವ ತಿಂಗಳಲ್ಲಿ ಚಂದ್ರಯಾನ-3ರ ಉಡಾವಣೆಯಾಗಲಿದೆ ಎನ್ನುವುದು ಸ್ಪಷ್ಟವಿಲ್ಲ ಎಂದಿದ್ದಾರೆ.

ಆದರೆ ಚಂದ್ರಯಾನ-3 ಅನುಷ್ಠಾನಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಚಂದ್ರಯಾನ 2ಕ್ಕೆ ಇಸ್ರೋ ಒಟ್ಟು 978 ಕೋಟಿ ರೂ. ವ್ಯಯಿಸಿತ್ತು.

ಮೊದಲ ಪ್ರಯತ್ನದಲ್ಲೇ ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಮ್ ಲ್ಯಾಂಡರ್‌ನ್ನು ಸ್ಮೂತ್ ಲ್ಯಾಂಡಿಂಗ್ ಮಾಡುವ ಪ್ರಯತ್ನದಲ್ಲಿ ಇಸ್ರೋ ಕಾರ್ಯನಿರತವಾಗತ್ತು. ಆದರೆ ಕೊನೆಯ ಹಂತದ ವೈಫಲ್ಯ ಇಸ್ರೋ ಸೇರಿದಂತೆ ದೇಶದ ಪ್ರತಿಯೊಬ್ಬರನ್ನು ಆಘಾತಕ್ಕೆ ಈಡು ಮಾಡಿತ್ತು.

ಆದರೆ ಈಗ ಇಸ್ರೋ ವಿಜ್ಞಾನಿಗಳು ಛಲ ಬಿಡದೆ ಚಂದ್ರಯಾನ-3ಕ್ಕೆ ಸಜ್ಜಾಗಿದ್ದಾರೆ. ಅಂದು ಪ್ರಧಾನಿ ಕೂಡ ಇಸ್ರೋ ವಿಜ್ಞಾನಿಗಳ ಬೆನ್ನುತಟ್ಟಿ, ವಿಜ್ಞಾನದಲ್ಲಿ ವೈಫಲ್ಯ ಎನ್ನುವುದಿಲ್ಲ, ಇಂದಿನ ಪ್ರಯೋಗಗಳ ಲಾಭ ಪಡೆಯುವುದೇ ವಿಜ್ಞಾನ ಎಂದಿದ್ದರು.

English summary
Union Minister Jitendra Singh clarified that Chandrayaan-3 will be launch in 2020 and cost will be lesser than chandrayaan 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X