• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರಯಾನ-3 ಉಡಾವಣೆ: ಈ ಬಾರಿ ಆರ್ಬಿಟರ್ ಇರುವುದಿಲ್ಲ

|

ನವದೆಹಲಿ, ಸೆಪ್ಟೆಂಬರ್ 07: ಚಂದ್ರಯಾನ-2 ರೀತಿ ಚಂದ್ರಯಾನ-3ರಲ್ಲಿ ಆರ್ಬಿಟರ್ ಇರುವುದಿಲ್ಲ ಎಂದು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.

ಇದರಂತೆ 2021ರ ಆರಂಭದಲ್ಲಿ ಯೋಜನೆ ಆರಂಭಗಳ್ಳಲಿದೆ. ಈ ಬಾರಿ ಚಂದ್ರಯಾನ-2'ರಂತೆ ಆರ್ಬಿಟರ್ ಇರುವುದಿಲ್ಲ. ಆರ್ಬಿಟರ್ ರಹಿತ, ಲ್ಯಾಂಡರ್ ಮತ್ತು ರೋವರ್‌ಗಳ ಸಹಿತ ಚಂದ್ರಯಾನ-3 ಯೋಜನೆ ಮುಕ್ತಾಯಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಚಂದ್ರನ ಅಂಗಳಕ್ಕೆ ಕಾಲಿಟ್ಟು ಒಂದು ವರ್ಷ ಕಳೆದ ಚಂದ್ರಯಾನ-2ರ ಆರ್ಬಿಟರ್ಚಂದ್ರನ ಅಂಗಳಕ್ಕೆ ಕಾಲಿಟ್ಟು ಒಂದು ವರ್ಷ ಕಳೆದ ಚಂದ್ರಯಾನ-2ರ ಆರ್ಬಿಟರ್

ಕೊರೊನಾ ವೈರಸ್ ಕಾರಣದಿಂದಾಗಿ ಈ ವರ್ಷ ಅಂತ್ಯದಲ್ಲಿ ಉಡಾವಣೆಯಾಗಬೇಕಿದ್ದ ಚಂದ್ರಯಾನ-3 ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. 2021ರ ಆರಂಭದಲ್ಲಿ ಚಂದ್ರಯಾನ-3 ನೌಕೆ ಚಂದ್ರನತ್ತ ಹಾರಲಿದೆ ಎಂದು ಹೇಳಿದ್ದಾರೆ.

2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಚಂದ್ರಯಾನ-2 ಯೋಜನೆ ಸಾಕಾರಗೊಂಡಿತ್ತಾದರೂ, ಅದರ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ವರ್ಷದ ಅಂತ್ಯದ ವೇಳೆಗೆ ಚಂದ್ರಯಾನ-3 ಉಪಗ್ರಹ ಉಡಾವಣೆ ಮಾಡುವ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾಹಿತಿ ನೀಡಿತ್ತು.

ಇಸ್ರೋದ ಮೊದಲ ಚಂದ್ರಯಾನ ಯೋಜನೆ ಶಶಿಯ ಅಂಗಳದಲ್ಲಿ ನೀರಿನ ಅಂಶವಿರುವುದನ್ನು ಪತ್ತೆಹಚ್ಚಿತ್ತು. ಅದಲ್ಲದೆ ಚಂದ್ರನ ಧ್ರುವಗಳ ಉದ್ದಕ್ಕೂ ತುಕ್ಕು ಹಿಡಿಯಬಹುದೆಂದು ಸೂಚಿಸುವ ಚಿತ್ರಗಳನ್ನು ಭೂಮಿಗೆ ಕಳುಹಿಸಿತ್ತು.

ಈಗ ಭಾರತದ ಚಂದ್ರಯಾನ-3 ಯೋಜನೆ ಬಗ್ಗೆ ಜಗತ್ತಿನ ಹಲವು ವಿಜ್ಞಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

English summary
Chandrayaan-3, India's mission to Moon, is likely to be launched in early 2021, Union Minister Jitendra Singh said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X