ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರ ಮೂರನೇ ತ್ರೈಮಾಸಿಕದಲ್ಲಿ ಚಂದ್ರಯಾನ-3 ಉಡಾವಣೆ

|
Google Oneindia Kannada News

ನವದೆಹಲಿ, ಜುಲೈ 28: ಎಲ್ಲವೂ ಮಾಮೂಲಿಯಂತೆ ಕೆಲಸ ಕಾರ್ಯಗಳು ನಡೆದರೆ 2022ರ ಮೂರನೇ ತ್ರೈಮಾಸಿಕದ ವೇಳೆಗೆ ಚಂದ್ರಯಾನ-3 ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಹೊಣೆಗಾರಿಕೆ) ರಾಜ್ಯ ಸಚಿವ; ಭೂ ವಿಜ್ಞಾನ (ಸ್ವತಂತ್ರ ಹೊಣೆಗಾರಿಕೆ) ಪಿಎಂಒ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಆಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಲೋಕಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಸಚಿವ ಡಾ.ಜಿತೇಂದ್ರ ಚಂದ್ರಯಾನ-3 ಯೋಜನೆ ಸಾಕಾರದ ನಿಟ್ಟಿನಲ್ಲಿ ಪ್ರಗತಿ ಸಾಗಿದೆ ಎಂದು ತಿಳಿಸಿದ್ದಾರೆ.

ಚಂದ್ರಯಾನ-3 ಯೋಜನೆಯು ಸಂರಚನೆಯನ್ನು ಅಂತಿಮಗೊಳಿಸುವುದು, ಉಪವ್ಯವಸ್ಥೆಗಳನ್ನು ಸಾಕಾರಗೊಳಿಸುವುದು, ಜೋಡಿಸುವುದು, ಬಾಹ್ಯಾಕಾಶ ನೌಕಾ ಮಟ್ಟದ ವಿಸ್ತೃತ ಪರೀಕ್ಷೆ ಮತ್ತು ಭೂಮಿಯ ಮೇಲಿನ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುಲು ಹಲವು ವಿಶೇಷ ಪರೀಕ್ಷೆ ಒಳಗೊಂಡಂತೆ ವಿವಿಧ ಪ್ರಕ್ರಿಯೆಗಳು ಸೇರಿವೆ.

Chandrayaan-3 is likely to be launched during third quarter of 2022-Dr Jitendra Singh

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯೋಜನೆಯ ಸಾಕಾರದ ಪ್ರಗತಿಗೆ ಅಡ್ಡಿಯುಂಟಾಗಿದೆ. ಆದರೂ ಲಾಕ್‌ಡೌನ್ ಸಮಯದಲ್ಲೂ ಸಹ ಮನೆಯಿಂದಲೇ ಕೆಲಸ ಮಾಡುತ್ತಾ ಸಾಧ್ಯವಾದಷ್ಟೂ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅನ್‌ಲಾಕ್ ಅವಧಿ ಆರಂಭದ ನಂತರ ಚಂದ್ರಯಾನ-3 ಯೋಜನೆ ಸಾಕಾರದ ಕಾರ್ಯ ಆರಂಭವಾಗಿದೆ ಮತ್ತು ಅದು ಸಾಕಾರದ ಪ್ರಬುದ್ಧ ಹಂತದಲ್ಲಿದೆ ಎಂದರು.

''ಈ ಹಿಂದಿನ ಚಂದ್ರಯಾನಗಳಲ್ಲಿ ಆರ್ಬಿಟರ್ ಇತ್ತು. ಆದರೆ ಚಂದ್ರಯಾನ-3 ಆರ್ಬಿಟರ್ ರಹಿತವಾಗಿರಲಿದೆ. ಚಂದ್ರಯಾನ-3 ರೆಡೆಗೆ ನಾವು ಕೆಲಸ ಮಾಡುತ್ತಿದ್ದೇವೆ, ಚಂದ್ರಯಾನ-2 ಮಾದರಿಯಲ್ಲೇ ಚಂದ್ರಯಾನ-3 ರ ಸಂರಚನೆ ಇರಲಿದ್ದು, 2022 ಕ್ಕೆ ಉಡಾವಣೆಯಾಗುವ ನಿರೀಕ್ಷೆ ಇದೆ'' ಎಂದು ಇಸ್ರೋ ಮುಖ್ಯಸ್ಥ ಕೆ ಶಿವನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Union Minister of State (Independent Charge) Science & Technology Dr Jitendra Singh said that Chandrayaan-3 is likely to be launched during third quarter of 2022 assuming normal work flow henceforth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X