ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 2ರ ಲ್ಯಾಂಡರ್ ವೈಫಲ್ಯ: ಕಾರಣ ವಿವರಿಸಿದ ಸರ್ಕಾರ

|
Google Oneindia Kannada News

ನವದೆಹಲಿ, ನವೆಂಬರ್ 21: ಚಂದ್ರಯಾನ 2ರ ವಿಕ್ರಂ ಲ್ಯಾಂಡರ್ ವೇಗದ ನಿಯಂತ್ರಣವು ಪೂರ್ವ ನಿಯೋಜಿತ ಮಾನದಂಡಗಳಿಗೆ ಅನುಗುಣವಾಗಿ ನಡೆಯದ ಕಾರಣ ಚಂದ್ರನ ನೆಲಕ್ಕೆ ಅಪ್ಪಳಿಸಿತ್ತು ಎಂದು ಸರ್ಕಾರ ತಿಳಿಸಿದೆ. ಮಹತ್ವಾಕಾಂಕ್ಷೆಯ ಚಂದ್ರಯಾನ ಯೋಜನೆಯ ಲ್ಯಾಂಡರ್ ವಿಕ್ರಂ ಸಂಪರ್ಕ ಕಳೆದುಕೊಂಡಿದ್ದರೂ ಚಂದ್ರನ ಮೇಲೆ ನಿರೀಕ್ಷೆಯಂತೆ ಸುಗಮವಾಗಿ ಇಳಿದು ಕಾರ್ಯಾಚರಣೆ ನಡೆಸಿರಬಹುದು ಎಂಬ ಭರವಸೆ ಇದರಿಂದ ನುಚ್ಚುನೂರಾಗಿದೆ.

Recommended Video

Chandrayaan 2 : ಚಂದ್ರಯಾನ-2ದ ಆರ್ಬಿಟರ್ ಯಶಸ್ವಿ ಕಾರ್ಯಾಚರಣೆ | Oneindia Kannada

ಲೋಕಸಭೆಯಲ್ಲಿ ಬುಧವಾರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಪ್ರಧಾನ ಮಂತ್ರಿಗಳ ಕಚೇರಿಯ ರಾಜ್ಯಖಾತೆ ಸಚಿವ ಜಿತೇಂದ್ರ ಸಿಂಗ್, ಯೋಜನೆಯ ಇಳಿಯುವಿಕೆಯ ಮೊದಲ ಹಂತವು ಚಂದ್ರನ ಮೇಲ್ಮೈನ 34 ಕಿ.ಮೀ.ಯಿಂದ 7.4 ಕಿ.ಮೀವರೆಗಿನ ವೇಗದಲ್ಲಿ ಅಂದುಕೊಂಡಂತೆ ಸಾಗಿತ್ತು. ಅದರ ನಿಯೋಜಿತ ವೇಗವನ್ನು ಸೆಕೆಂಡ್‌ಗೆ 1,683 ಮೀಟರ್‌ನಿಂದ 146 ಮೀಟರ್‌ಗೆ ತಗ್ಗಿಸಲಾಗಿತ್ತು ಎಂದು ತಿಳಿಸಿದರು.

ಚಂದ್ರಯಾನದ ಬಳಿಕ ರಕ್ಷಣಾ ಕ್ಷೇತ್ರಕ್ಕಾಗಿ ಹೊಸ ಹೆಜ್ಜೆ ಇರಿಸಿದ ಇಸ್ರೋಚಂದ್ರಯಾನದ ಬಳಿಕ ರಕ್ಷಣಾ ಕ್ಷೇತ್ರಕ್ಕಾಗಿ ಹೊಸ ಹೆಜ್ಜೆ ಇರಿಸಿದ ಇಸ್ರೋ

ಲ್ಯಾಂಡರ್ ಮತ್ತು ರೋವರ್ ವಿಫಲವಾದರೂ, ಉಡಾವಣೆ, ಕಕ್ಷೆಗೆ ಸೇರ್ಪಡೆ ಮಾಡುವ ಮಹತ್ವದ ಚಟುವಟಿಕೆಗಳು, ಲ್ಯಾಂಡರ್ ಪ್ರತ್ಯೇಕಗೊಳಿಸುವಿಕೆ ಮತ್ತು ಕಠಿಣವಾದ ಪಥ ಬದಲಾವಣೆಯಂತಹ ಹೆಚ್ಚಿನ ತಾಂತ್ರಿಕ ಕ್ರಿಯೆಗಳು ಯಶಸ್ವಿಯಾಗಿ ನಡೆದಿವೆ ಎಂದು ತಿಳಿಸಿದರು. ಇದರಿಂದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುಗಮವಾಗಿ ಇಳಿದಿರಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ.

500 ಮೀಟರ್ ದೂರದಲ್ಲಿ ಇಳಿಕೆ

500 ಮೀಟರ್ ದೂರದಲ್ಲಿ ಇಳಿಕೆ

ಲ್ಯಾಂಡರ್ ಇಳಿಯುವಿಕೆಯ ಎರಡನೆಯ ಹಂತದಲ್ಲಿ ನಿಯೋಜಿತ ವೇಗವು ಉದ್ದೇಶಿತ ಪ್ರಮಾಣಕ್ಕಿಂತಲೂ ಕಡಿಮೆಯಾಗಿತ್ತು. ಈ ವಿಚಲನದಿಂದಾಗಿ ವೇಗ ನಿಯಂತ್ರಿಸುವ ಆರಂಭದ ಸ್ಥಿತಿಯು ನಿರ್ದಿಷ್ಟ ಮಾನದಂಡಗಳನ್ನು ಮೀರಿತ್ತು. ಇದರ ಪರಿಣಾಮವಾಗಿ ವಿಕ್ರಂ ಲ್ಯಾಂಡರ್ ಉದ್ದೇಶಿತ ಸ್ಥಳದ ಸುಮಾರು 500 ಮೀಟರ್ ದೂರದಲ್ಲಿ ಜೋರಾಗಿ ಅಪ್ಪಳಿಸಿದೆ ಎಂದು ವಿವರಿಸಿದರು.

ಆರ್ಬಿಟರ್ ಜೀವಿತಾವಧಿ ಹೆಚ್ಚಳ

ಆರ್ಬಿಟರ್ ಜೀವಿತಾವಧಿ ಹೆಚ್ಚಳ

ಆರ್ಬಿಟರ್ ಒಳಗಿರುವ ಎಲ್ಲ ಎಂಟು ವೈಜ್ಞಾನಿಕ ಉಪಕರಣಗಳು (ಪೇಲೋಡ್ಸ್) ಅವುಗಳ ವಿನ್ಯಾಸಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಾ ಮಹತ್ವದ ವೈಜ್ಞಾನಿಕ ಮಾಹಿತಿಗಳನ್ನು ರವಾನಿಸುತ್ತಿವೆ. ಉಡಾವಣೆ ಹಾಗೂ ಆರ್ಬಿಟರ್ ಮ್ಯಾನೆಯುವರ್‌ಗಳ ಸುಗಮ ಕಾರ್ಯಾಚರಣೆಗಳಿಂದಾಗಿ ಆರ್ಬಿಟರ್‌ನ ಜೀವಿತಾವಧಿ ಏಳು ವರ್ಷಗಳವರೆಗೂ ಹೆಚ್ಚಾಗಿದೆ ಎಂದು ತಿಳಿಸಿದರು.

ಚಂದ್ರಯಾನ-2 ವೈಫಲ್ಯದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಇಸ್ರೋಚಂದ್ರಯಾನ-2 ವೈಫಲ್ಯದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಇಸ್ರೋ

ಚಂದ್ರಯಾನಕ್ಕೆ ಒಟ್ಟು 970 ಕೋಟಿ

ಚಂದ್ರಯಾನಕ್ಕೆ ಒಟ್ಟು 970 ಕೋಟಿ

ಚಂದ್ರಯಾನ 2ರ ಯೋಜನೆ ನಿರ್ಮಾಣಕ್ಕೆ 603 ಕೋಟಿ ರೂ. ವೆಚ್ಚ ತಗುಲಿತ್ತು. ಅದರ ಉಡಾವಣೆಗೆ 367 ಕೋಟಿ ರೂ. ವೆಚ್ಚವಾಗಿದೆ ಎಂದು ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. ಚಂದ್ರಯಾನ 2 ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದ್ದು, ಸ್ವದೇಶಿ ನಿರ್ಮಿತ ಜಿಎಸ್‌ಎಲ್‌ವಿ ಎಂಕೆ III-ಎಂ1 ರಾಕೆಟ್ ಮೂಲಕ ಜುಲೈ 22ರಂದು ಉಡಾವಣೆ ಮಾಡಲಾಗಿತ್ತು ಎಂದು ತಿಳಿಸಿದರು.

ಕೊನೆಯ ಹಂತದಲ್ಲಿ ವಿಫಲ

ಕೊನೆಯ ಹಂತದಲ್ಲಿ ವಿಫಲ

ಚಂದ್ರನನ್ನು ಗುರಿಯನ್ನಾಗಿರಿಸಿಕೊಂಡು ಹೊರಟಿದ್ದ ನೌಕೆಯನ್ನು ಕಕ್ಷೆಗೆ ಸೇರ್ಪಡಿಸುವ ಕಾರ್ಯವು 119*127 ಕಿ.ಮೀಯಲ್ಲಿ ಯಶಸ್ವಿಯಾಗಿ ನಡೆದಿತ್ತು. ಉದ್ದೇಶದಂತೆಯೇ ಲ್ಯಾಂಡರ್ ಸೆ. 2ರಂದು ಆರ್ಬಿಟರ್‌ನಿಂದ ಬೇರ್ಪಟ್ಟಿತು. ಎರಡು ಯಶಸ್ವಿ ಡಿ-ಮ್ಯಾನೆಯುವರ್‌ಗಳ ಬಳಿಕ ಸೆ. 7ರಂದು ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ಗಾಗಿ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಈ ಪ್ರಯತ್ನ ವಿಫಲವಾಯಿತು ಎಂದು ಹೇಳಿದರು.

ಚಂದ್ರಯಾನ 3ಕ್ಕೆ ಸಿದ್ಧತೆ: ಚಂದ್ರನತ್ತ ಇಸ್ರೋ ಮತ್ತೊಂದು ಹೆಜ್ಜೆಚಂದ್ರಯಾನ 3ಕ್ಕೆ ಸಿದ್ಧತೆ: ಚಂದ್ರನತ್ತ ಇಸ್ರೋ ಮತ್ತೊಂದು ಹೆಜ್ಜೆ

English summary
Government has explained in the Lok Sabha that, Chandrayaan 2 Vikram lander hard landed on Lunars within the 500 metre of the designated landing site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X