ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಅಂಗಳಕ್ಕೆ ಕಾಲಿಟ್ಟು ಒಂದು ವರ್ಷ ಕಳೆದ ಚಂದ್ರಯಾನ-2ರ ಆರ್ಬಿಟರ್

|
Google Oneindia Kannada News

ಬೆಂಗಳೂರು, ಆಗಸ್ಟ್ 21: ಭಾರತದ ಎರಡನೆಯ ಚಂದ್ರಯಾನ ಯೋಜನೆ ಚಂದ್ರಯಾನ-2 ಚಂದ್ರನ ಕಕ್ಷೆಯ ಸುತ್ತಲೂ ಓಡಾಟ ಆರಂಭಿಸಿ ಆಗಸ್ಟ್ 20ಕ್ಕೆ ಒಂದು ವರ್ಷ ಪೂರೈಸಿದೆ. 2019ರ ಜುಲೈ 22ರಂದು ಉಡಾವಣೆಗೊಂಡಿದ್ದ ನೌಕೆ, ಆಗಸ್ಟ್ 20ರಂದು ಚಂದ್ರನ ಕಕ್ಷೆಯನ್ನು ಸೇರಿಕೊಂಡಿತ್ತು. ನಂತರ ಸೆ. 7ರಂದು ರೋವರ್‌ಅನ್ನು ಚಂದ್ರನ ಮೇಲೆ ನಿಧಾನವಾಗಿ ಇಳಿಸುವ ಪ್ರಯತ್ನ ವಿಫಲವಾಗಿತ್ತು.

ಚಂದ್ರನ ಕಕ್ಷೆಯಲ್ಲಿ ಒಂದು ವರ್ಷದ ಸುತ್ತಾಟ ಪೂರ್ಣಗೊಳಿಸಿರುವ ನೌಕೆಯು ಪ್ರಸ್ತುತ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಏಳು ವರ್ಷಗಳವರೆಗೆ ಅಲ್ಲಿ ಕಾರ್ಯಾಚರಣೆ ನಡೆಸಲು ಸಾಕಾಗುವಷ್ಟು ಇಂಧನ ಹೊಂದಿದೆ ಎಂದು ಇಸ್ರೋ ತಿಳಿಸಿದೆ.

ಇಸ್ರೋ ಖಾಸಗೀಕರಣ ವಿವಾದ: ಅಧ್ಯಕ್ಷ ಕೆ. ಶಿವನ್ ಹೇಳಿದ್ದೇನು?ಇಸ್ರೋ ಖಾಸಗೀಕರಣ ವಿವಾದ: ಅಧ್ಯಕ್ಷ ಕೆ. ಶಿವನ್ ಹೇಳಿದ್ದೇನು?

ಲ್ಯಾಂಡರ್ ಸಾಗಿಸಿದ್ದ ರೋವರ್‌ಅನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಸುವ ಪ್ರಯತ್ನ ಕೈಗೂಡದೇ ಹೋದರೂ ಎಂಟು ವೈಜ್ಞಾನಿಕ ಉಪಕರಣಗಳನ್ನು ಹೊಂದಿದ್ದ ಆರ್ಬಿಟರ್, ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರ್ಪಡೆಯಾಗಿತ್ತು. ಈ ಒಂದು ವರ್ಷದಲ್ಲಿ ಆರ್ಬಿಟರ್, ಚಂದ್ರನ ಸುತ್ತಲೂ 4,400ಕ್ಕೂ ಅಧಿಕ ಸುತ್ತಾಟಗಳನ್ನು ನಡೆಸಿದೆ. ಆರ್ಬಿಟರ್‌ನಲ್ಲಿನ ಎಲ್ಲ ಉಪಕರಣಗಳು ಕೂಡ ಸಮರ್ಥವಾಗಿ ಕೆಲಸ ಮಾಡುತ್ತಿವೆ ಎಂದು ಇಸ್ರೋ ಹೇಳಿದೆ.

 Chandrayaan-2 Orbiter Completes Year Around Moon

ಚಂದ್ರಯಾನ ನೌಕೆಯು ಆರೋಗ್ಯಯುತವಾಗಿದ್ದು, ಅದರ ಉಪ ವ್ಯವಸ್ಥೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿವೆ. ಆವರ್ತಕ ಕಕ್ಷೆ ನಿರ್ವಹಣೆಯ (ಒಎಂ) ಕೌಶಲದೊಂದಿಗೆ ಆರ್ಬಿಟರ್ 100+/-25 ಕಿಮೀ ಧ್ರುವ ಕಕ್ಷೆಯಲ್ಲಿಯೇ ಸುತ್ತಾಟ ನಡೆಸುತ್ತಿದೆ. 2019ರ ಸೆ. 24ರಂದು 100 ಕಿ.ಮೀ. ಲೂನಾರ್ ಆರ್ಬಿಟ್ ತಲುಪಿದ ಬಳಿಕ ಇದುವರೆಗೂ ಒಟ್ಟು 17 ಒಎಂಗಳನ್ನು ಪೂರ್ಣಗೊಳಿಸಿದೆ. ಇನ್ನೂ ಸುಮಾರು ಏಳು ವರ್ಷಗಳವರೆಗೆ ಸುತ್ತಾಟ ನಡೆಸಲು ಬೇಕಾದಷ್ಟು ಇಂಧನ ಅದರಲ್ಲಿದೆ ಎಂದು ಹೇಳಿದೆ.

English summary
Chandrayaan-2's orbiter has completes one year on August 20, 2020 and has adequate fuel for 7 more years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X