ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 2: ಕ್ಯಾಮರಾ ಕ್ಲಿಕ್ಕಿಸಿದ ಚಂದ್ರನ ಹೊಸ ಚಿತ್ರ

|
Google Oneindia Kannada News

ನವದೆಹಲಿ, ಆಗಸ್ಟ್ 26: ಚಂದ್ರಯಾನ -2 ನೌಕೆಯ ಟೆರಿಯನ್ ಮ್ಯಾಪಿಂಗ್ ಕ್ಯಾಮರಾ-2, 4375 ಕಿಮೀ. ಎತ್ತರದಿಂದ ಕ್ಲಿಕ್ಕಿಸಿದ ಚಂದ್ರನ ಮೇಲ್ಮೈ ಚಿತ್ರವನ್ನು ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಟ್ವೀಟ್ ಮಾಡಿದ್ದು, ಇದೀಗ ಸಾಕಷ್ಟು ಚರ್ಚೆಗೊಳಗಾಗಿದೆ.

ಜುಲೈ 22 ರಂದು ಉಡ್ಡಯನಗೊಂಡ ಚಂದ್ರಯಾನ 2 ಮೂನ್ ಮಿಶನ್ ಈಗ ಎರಡನೆಯ ಬಾರಿಗೆ ತಾನು ಕ್ಲಿಕ್ಕಿಸಿದ ಚಿತ್ರಗಳನ್ನು ಕಳಿಸಿದ್ದು, ಈ ಬಾರಿ ಅದು ಚಂದ್ರನ ಮೇಲಿರುವ ಕುಳಿಗಳನ್ನು ಕ್ಲಿಕ್ಕಿಸಿದೆ.

ಚಂದ್ರಯಾನ-2 ತೆಗೆದ ಚಂದ್ರನ ಮೊದಲ ಸುಂದರ ಚಿತ್ರ ಚಂದ್ರಯಾನ-2 ತೆಗೆದ ಚಂದ್ರನ ಮೊದಲ ಸುಂದರ ಚಿತ್ರ

ನೌಕೆಯಲ್ಲಿರುವ ವಿಕ್ರಮ್ ಲ್ಯಾಂಡರ್ ಸೆ.2ರಂದು ನೌಕೆಯಿಂದ ಬೇರ್ಪಡಲಿದ್ದು, ಸೆ 7ರಂದು ಮೊದಲು ಚಂದ್ರನ ಮೇಲೆ ಕಾಲಿಡಲಿದೆ.

Chandrayaan-2:new Images Of Moons Craters

ಆಗಸ್ಟ್ 23 ರಂದು ಚಂದ್ರನ ಮೇಲ್ಮೈ ಚಿತ್ರವನ್ನು ಕ್ಲಾಮರಾ ಕ್ಲಿಕ್ಕಿಸಿ ಕಳಿಸಿತ್ತು. ಇದೀಗ ಮತ್ತೆ ಕೆಲವು ಚಿತ್ರಗಳನ್ನು ಕಳಿಸಿದ್ದು, ಅದರಲ್ಲಿ ಚಂದ್ರನ ಕಿಳಿಗಳಾದ ಜಾಕ್ಸನ್, ಮಿತ್ರಾ, ಮ್ಯಾಕ್ ಮತ್ತು ಕೊರೊಲೆವ್ ಗಳು ಕಾಣಿಸಿವೆ.

ಚಂದ್ರನ ಕುಳಿಗಳಿಗೆ ವಿಜ್ಞಾನಿಗಳ ಹೆಸರನ್ನು ನಾಮಕರಣ ಮಾಡಲಾಗಿದ್ದು, ಮಿತ್ರಾ ಎಂಬುದು ಭಾರತೀಯ ಭೌತಶಾಸ್ತ್ರಜ್ಞರೊಬ್ಬರ ಹೆಸರಾಗಿದೆ. ಪ್ರೊ. ಶಿಶಿರ್ ಕುಮಾರ್ ಮಿತ್ರಾ ಅವರ ನೆನಪಿಗಾಗಿ ಚಂದ್ರನ 92 ಸುತ್ತಳತೆಯ ಕುಳಿಗೆ ಮಿತ್ರಾ ಎಂದು ಹೆಸರಿಡಲಾಗಿದೆ. ಚಂದ್ರಯಾನ 2 ಕಳಿಸಿರುವ ಚಿತ್ರದಲ್ಲಿ ಈ ಕುಳಿಯೂ ಪತ್ತೆಯಾಗಿದೆ.

English summary
Chandrayaan-2, India's 2nd moon mission clicked images of moon's craters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X