ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ: ಇಂದು ಭಾರತಕ್ಕೆ ಸಿಹಿ ಸುದ್ದಿಯ ನಿರೀಕ್ಷೆ

|
Google Oneindia Kannada News

Recommended Video

ಅಮೆರಿಕಾ ಭಾರತದ ಬೆಂಬಲಕ್ಕೆ ನಿಂತಿರುವುದು ಏಕೆ ಗೊತ್ತಾ..? | chandrayaan 2

ಬೆಂಗಳೂರು, ಸೆಪ್ಟೆಂಬರ್ 16: ಚಂದ್ರಲೋಕಕ್ಕೆ ಪ್ರಯಾಣ ಮಾಡಿರುವ 'ಚಂದ್ರಯಾನ-2' ನಿಲ್ದಾಣಕ್ಕೆ ತಲುಪಿ ಇಂದಿಗೆ ಹತ್ತು ದಿನ. ಆದರೆ ಕೊನೆಯ ಕ್ಷಣದಲ್ಲಿ ಭೂಮಿಯ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿರುವ ವಿಕ್ರಂ ಲ್ಯಾಂಡರ್ ಕಥೆ ಏನಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ವಿಕ್ರಂ ಲ್ಯಾಂಡರ್ ಮತ್ತು ಅದರ ಜತೆಗಿರುವ ಪ್ರಜ್ಞಾನ್ ರೋವರ್ ಇನ್ನು ನಾಲ್ಕು ದಿನ ಮಾತ್ರ ಬದುಕಿರಲಿವೆ. ಅವುಗಳಲ್ಲಿ ಕೊನೆಯ ಎರಡು ದಿನಗಳಲ್ಲಿ ಸಂಪರ್ಕಕ್ಕೆ ಸಿಕ್ಕರೂ ಮಹತ್ವದ ಮಾಹಿತಿ ಸಿಗಬಹುದು.

ಈ ನಡುವೆ ಇಸ್ರೋದ ಹಿಡಿತದಿಂದ ತಪ್ಪಿಸಿಕೊಂಡಿರುವ ವಿಕ್ರಮನನ್ನು ಹುಡುಕಲು ನಾಸಾ ಮುಂದಾಗಿದೆ. ಇಸ್ರೋಕ್ಕೆ ನೆರವಾಗಲು ಬಂದಿರುವ ನಾಸಾ ಮಂಗಳವಾರ ವಿಕ್ರಮ ಇಳಿದಿರುವ ಸ್ಥಳದತ್ತ ತನ್ನ ಅರ್ಬಿಟರ್‌ಅನ್ನು ರವಾನಿಸುತ್ತಿದೆ. ಆರ್ಬಿಟರ್ ಅಲ್ಲಿ ಹಾರಾಟ ನಡೆಸುವುದರಿಂದ ವಿಕ್ರಮನ ಕುರಿತು ಹೊಸ ಮಾಹಿತಿಗಳು ಸಿಕ್ಕರೂ ಸಿಗಬಹುದು ಎಂಬ ನಿರೀಕ್ಷೆಯಿದೆ. ವಿಕ್ರಂ ಜತೆ ಸಂಪರ್ಕ ಸಾಧಿಸುವ ಕೊನೆಯ ಹಂತದ ಪ್ರಯತ್ನಗಳಿಗೆ ಇದು ನೆರವಾಗಬಹುದು.

ಚಂದ್ರನ ಮೇಲಿಳಿಯಲು ಇಷ್ಟು ಸಾಹಸವೇಕೆ? ಅಲ್ಲಿ ಏನಿದೆ ಗೊತ್ತೇ?ಚಂದ್ರನ ಮೇಲಿಳಿಯಲು ಇಷ್ಟು ಸಾಹಸವೇಕೆ? ಅಲ್ಲಿ ಏನಿದೆ ಗೊತ್ತೇ?

ಇಸ್ರೋ ತನ್ನ ಸಾಧನದೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಸತತವಾಗಿ ಮುಂದುವರಿಸುತ್ತಲೇ ಇದೆ. ಸೆ. 7ರಂದು ಚಂದ್ರನ ಮೇಲೆ ಇಳಿಯುವ ವಿಕ್ರಂ ಲ್ಯಾಂಡರ್ ಪ್ರಯತ್ನ ಕೊನೆಯ ಕ್ಷಣದಲ್ಲಿ ಕೈಕೊಟ್ಟಿತ್ತು. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಬಲವಾಗಿ ಇಳಿದಿದೆಯಾದರೂ ಅದಕ್ಕೆ ಹಾನಿಯಾಗಿಲ್ಲ ಎನ್ನುವುದನ್ನು ಚಂದ್ರಯಾನದ ಆರ್ಬಿಟರ್ ಕಳುಹಿಸಿದ್ದ ಚಿತ್ರವನ್ನು ವಿಶ್ಲೇಷಿಸಿ ಇಸ್ರೋ ಹೇಳಿತ್ತು.

ಲ್ಯಾಂಡರ್ ಪ್ರದೇಶದಲ್ಲಿ ಎಲ್‌ಆರ್‌ಓ ಸುತ್ತಾಟ

ಲ್ಯಾಂಡರ್ ಪ್ರದೇಶದಲ್ಲಿ ಎಲ್‌ಆರ್‌ಓ ಸುತ್ತಾಟ

ನಾಸಾದ ಲೂನಾರ್ ರಿಕನೈಸಾನ್ಸ್ ಆರ್ಬಿಟರ್ (ಎಲ್‌ಆರ್‌ಓ) ವಿಕ್ರಂ ಲ್ಯಾಂಡರ್‌ನ ಚಿತ್ರಗಳನ್ನು ಕೂಡ ತೆಗೆದು ರವಾನಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. 'ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಇಳಿದ ಸ್ಥಳದ ಸುತ್ತಲಿನ ಪ್ರದೇಶದ ಮುಂಚಿನ ಮತ್ತು ನಂತರದ ಚಿತ್ರಗಳನ್ನು ನಾಸಾ ಹಂಚಿಕೊಳ್ಳಲಿದ್ದು, ಇದರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ನೆರವಾಗಲಿದೆ' ಎಂದು ಎಲ್ಆರ್ಓ ಯೋಜನೆಯ ವಿಜ್ಞಾನಿ ನೋಹ್ ಪೆಟ್ರೋ ತಿಳಿಸಿದ್ದಾರೆ.

'ಹೋಗುವ ದಿನ' ಬಂದರೂ 'ವಿಕ್ರಂ' ಮಾತಿಲ್ಲ! ಇಸ್ರೋ ಜೊತೆ ಕೈಜೋಡಿಸಿದ ನಾಸಾ'ಹೋಗುವ ದಿನ' ಬಂದರೂ 'ವಿಕ್ರಂ' ಮಾತಿಲ್ಲ! ಇಸ್ರೋ ಜೊತೆ ಕೈಜೋಡಿಸಿದ ನಾಸಾ

ಸಫಲವಾಗದ ನಾಸಾ ಪ್ರಯತ್ನ

ಸಫಲವಾಗದ ನಾಸಾ ಪ್ರಯತ್ನ

ಇದಕ್ಕೂ ಮುನ್ನ ಚಂದ್ರನ ಮೇಲೆ ಇಳಿದಿರುವ ವಿಕ್ರಂ ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ನಾಸಾ ಪ್ರಯತ್ನಿಸಿತ್ತು. ಸಂಸ್ಥೆಯ ಜೆಟ್ ಪ್ರಾಪುಲ್ಷನ್ ಪ್ರಯೋಗಾಲಯವು ಚಂದ್ರಯಾನ-2 ಯೋಜನೆಯ ಮಹತ್ವದ ಭಾಗವಾಗಿರುವ ಲ್ಯಾಂಡರ್‌ನಿಂದ ಪ್ರತಿಕ್ರಿಯೆ ಪಡೆಯಲು ರೇಡಿಯೋ ತರಂಗಾಂತರಗಳನ್ನು ಹರಿಸಿತ್ತು. ಆದರೆ ಅದು ಸಫಲವಾಗಿರಲಿಲ್ಲ. ಇಸ್ರೋದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ನಾಸಾ, ವಿಕ್ರಂ ಜತೆ ಸಂಪರ್ಕ ಹೊಂದಲು ಡೀಪ್ ಸ್ಪೇಸ್ ನೆಟ್‌ವರ್ಕ್ (ಡಿಎಸ್‌ಎನ್) ಮೂಲಕ ಪ್ರಯತ್ನಿಸುತ್ತಿದೆ ಎಂದು ಹೇಳಿತ್ತು.

ಉಳಿಯುವುದು ನಾಲ್ಕೇ ದಿನ

ಉಳಿಯುವುದು ನಾಲ್ಕೇ ದಿನ

ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ 14 ದಿನಗಳ ಬಾಳಿಕೆ ಅವಧಿ ಮಾತ್ರ ಹೊಂದಿವೆ. ಸೆ. 7ರಿಂದ 14 ದಿನಗಳವರೆಗೆ ಇವು ಚಂದ್ರನ ಮೇಲ್ಮೈನಲ್ಲಿ ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಸಂಪರ್ಕ ಸಾಧಿಸಲು ಸಾಧ್ಯವಾಗದ ಕಾರಣ ಹತ್ತು ದಿನಗಳು ಈಗಾಗಲೇ ಉರುಳಿಹೋಗಿವೆ. ಇಲ್ಲಿ ಸೂರ್ಯನ ಕಿರಣಗಳು ಬೀಳುವವರೆಗೆ ಮಾತ್ರವೇ ಸೋಲಾರ್ ಪ್ಯಾನಲ್ ಹೊಂದಿರುವ ಲ್ಯಾಂಡರ್ ಶಕ್ತಿ ಪಡೆದು ಕಾರ್ಯನಿರ್ವಹಿಸಲು ಸಾಧ್ಯ. ಉಳಿದ 14 ದಿನ ಸೂರ್ಯ ಕಿರಣಗಳು ಈ ಪ್ರದೇಶದ ಮೇಲೆ ಬೀಳುವುದಿಲ್ಲ. ಹೀಗಾಗಿ ಇಲ್ಲಿ -180 ಡಿಗ್ರಿ ಸೆಲ್ಸಿಯಸ್ ವಾತಾವರಣ ಇರಲಿದ್ದು, ಶೀತದ ಕಾರಣ ಲ್ಯಾಂಡರ್ ಸ್ಥಗಿತಗೊಳ್ಳುತ್ತದೆ.

ವಿಕ್ರಂ ಲ್ಯಾಂಡರ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ ಇಸ್ರೋವಿಕ್ರಂ ಲ್ಯಾಂಡರ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ ಇಸ್ರೋ

ನಾಸಾದ ಪ್ರಯತ್ನ ಏಕೆ?

ನಾಸಾದ ಪ್ರಯತ್ನ ಏಕೆ?

ಚಂದ್ರನ ಕುರಿತು ಮಹತ್ವದ ಅಧ್ಯಯನ ನಡೆಸುವುದು ಇಸ್ರೋ ಉದ್ದೇಶ. ಈ ಯೋಜನೆ ನಾಸಾಕ್ಕೂ ಅಷ್ಟೇ ಮುಖ್ಯವಾಗಿತ್ತು. ಏಕೆಂದರೆ ಚಂದ್ರಯಾನ-2 ಯೋಜನೆಯ ಭಾಗವಾಗಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಮಹಿಳೆ ಸೇರಿದಂತೆ ಮನುಷ್ಯರನ್ನು ಇಳಿಸುವ 'ಅಪೋಲೋ' ಯೋಜನೆಯನ್ನು 2024ರಲ್ಲ ನಡೆಸಲು ನಾಸಾ ಸಿದ್ಧತೆ ನಡೆಸಿದೆ. ದಕ್ಷಿಣ ಧ್ರುವದಲ್ಲಿ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ದೊರೆತರೆ ಅದು ನೆರವಾಗಲಿದೆ ಎನ್ನುವುದು ಅದರ ಬಯಕೆ. ಅದಕ್ಕಾಗಿ ಇಸ್ರೋ ನೆರವಿಗೆ ಧಾವಿಸಿದೆ.

English summary
NASA's LRO orbiter will fly over the landing site of Chandrayaan-2 Vikram lander's landing site on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X