ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಂತ್ರಿಕ ದೋಷದಿಂದ ಚಂದ್ರಯಾನ-2 ರಾಕೆಟ್ ಉಡಾವಣೆ ರದ್ದು

|
Google Oneindia Kannada News

ಶ್ರೀಹರಿಕೋಟ, ಜುಲೈ 14: ತಾಂತ್ರಿಕ ಕಾರಣಗಳಿಂದ ಚಂದ್ರಯಾನ-2 ಉಡಾವಣೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಇಸ್ರೋ ಈ ನಿರ್ಧಾರ ಪ್ರಕಟಿಸಿದ್ದು ಸದ್ಯದಲ್ಲೇ ಉಡಾವಣೆಯ ಮುಂದಿನ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್‌ಎಲ್‌ವಿ ಮಾಕ್-3 ಬಾಹುಬಲಿ ಉಢಾವಣಾ ವಾಹನದಲ್ಲಿ ಗಗನನೌಕೆ ಸಾಗಬೇಕಾಗಿತ್ತು.

ಚಂದ್ರನೆಡೆಗೆ ವಿಶೇಷತೆ
ಚಂದ್ರಯಾನದಲ್ಲಿ ರೋವರ್ ಚಲನೆಗೆ ನೆರವಾಗಲು ಕಾನ್ಪುರ ಐಐಟಿ ವಿಜ್ಞಾನಿಗಳು ವಿಶೇಷ ತಂತ್ರಾಂಶ ರೂಪಿಸಿದ್ದಾರೆ. ಚಲನೆಗೆ ನೆರವಾಗಲು ವಿಶೇಷ ಮೋಷನ್ ಪ್ಲ್ಯಾನಿಂಗ್ ಹಾಗೂ ಮ್ಯಾಪಿಂಗ್‌ನ ತಂತ್ರಾಂಶ ಇದಾಗಿದೆ.

Chandrayaan-2 LIVE updates in Kannada

ಭಾರತದ ಅತಿ ಭಾರದ ರಾಕೆಟ್ 'ಬಾಹುಬಲಿ' ಎಂದು ಹೆಸರಿಸಲಾದ ಜಿಎಸ್​ಎಲ್​ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ. ಇದರಲ್ಲಿ ನಾಸಾದ ಒಂದು ಉಪಕರಣವೂ ಇದೆ.

ಈ ಹಿಂದೆ ಚಂದ್ರಯಾನ-1 ಮತ್ತು ಮಂಗಳಯಾನದ ಉಪಗ್ರಹ ವನ್ನು ಪಿಎಸ್​ಎಲ್​ವಿ ಕ್ಲಾಸ್​ನ ರಾಕೆಟ್​ನಿಂದ ಉಡಾವಣೆ ಮಾಡಲಾಗಿತ್ತು.
ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದೆ. ಮೊದಲ ಇಳಿಕೆಯ ಪ್ರಯತ್ನದಲ್ಲಿ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ. ಚಂದ್ರಯಾನ-2, ಚಂದ್ರ ಉಪಗ್ರಹದಲ್ಲಿ ಭಾರತದ ಎರಡನೆಯ ಅಧ್ಯಯನವಾಗಲಿದೆ.
ಯೋಜನಾ ವೆಚ್ಚ: 978 ಕೋಟಿ ರೂ
ಜಿಎಸ್‌ಎಲ್‌ವಿ: ಬಾಹುಬಲಿ
ಲ್ಯಾಂಡರ್: ವಿಕ್ರಮ
ರೋವರ್: ಪ್ರಜ್ಞಾನ್
ಉಡಾವಣೆ ಸಮಯ: ಜು.15 ಬೆಳಗಿನ ಜಾವ 2 ಗಂಟೆ 51 ನಿಮಿಷಕ್ಕೆ ನೌಕೆ ತೆರಳಬೇಕಿತ್ತು.

Newest FirstOldest First
2:34 AM, 15 Jul

ತಾಂತ್ರಿಕ ಕಾರಣಗಳಿಂದ ಚಂದ್ರಯಾನ-2 ಉಡಾವಣೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಇಸ್ರೋ ಈ ನಿರ್ಧಾರ ಪ್ರಕಟಿಸಿದ್ದು ಸದ್ಯದಲ್ಲೇ ಉಡಾವಣೆಯ ಮುಂದಿನ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.
2:21 AM, 15 Jul

ಚಂದ್ರಯಾನ-2 ಕೌಂಟ್‌ಡೌನ್‌ನ್ನು ಇಸ್ರೋ ನಿಲ್ಲಿಸಿದೆ. ಇದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಚಂದ್ರಯಾನ ಮುಂದೂಡಬಹುದೇನೋ ಎನ್ನುವ ಊಹಾಪೋಹಗಳು ಉದ್ಭವಿಸಿವೆ.
2:17 AM, 15 Jul

ಚಂದ್ರಯಾನ-2ಕ್ಕೆ ಇನ್ನೂ ಕೇವಲ 40 ನಿಮಿಷಗಳು ಬಾಕಿ
2:07 AM, 15 Jul

ಚಂದ್ರಯಾನ-2ರ ಕನಸನ್ನು ನನಸಾಗಿಸಲು ವಿಜ್ಞಾನಿಗಳು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕಾರ್ಯದಲ್ಲಿ ತೊಡಗಿದ್ದರು.
2:03 AM, 15 Jul

ಚಂದ್ರಯಾನ-2ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಸಾಕ್ಷಿಯಾಗಲಿದ್ದಾರೆ.
1:59 AM, 15 Jul

ಚಂದ್ರಯಾನ-2 ವೀಕ್ಷಣೆಗೆ ಹರಿದುಬರುತ್ತಿದೆ ಜನಸಾಗರ
1:51 AM, 15 Jul

ಚಂದ್ರಯಾನ 2 ಮೊದಲ ಬಾರಿಗೆ ಚಂದ್ರನ ಮತ್ತೊಂದು ಪಾರ್ಶ್ವವಾದ ದಕ್ಷಿಣ ಭಾಗದಲ್ಲಿ ಅಧ್ಯಯನ ನಡೆಸಲಿದೆ.
Advertisement
1:41 AM, 15 Jul

ಜಿಎಸ್‌ಎಲ್‌ವಿ ಮಾಕ್ 3ಗೆ ಲಿಕ್ವಿಡ್ ಹೈಡ್ರೋಜೆನ್ ತುಂಬುವ ಕಾರ್ಯ ಪೂರ್ಣಗೊಂಡಿದೆ
1:36 AM, 15 Jul

ಇಲ್ಲಿಯವರೆಗೆ ಚಂದ್ರನಲ್ಲಿಗೆ ಅಮೆರಿಕ, ರಷ್ಯಾ ಮತ್ತು ಚೀನಾ ಈ ಮೂರು ರಾಷ್ಟ್ರಗಳು ರೋವರ್ ಕಳುಹಿಸಿವೆ. ಈ ನಾಲ್ಕನೆಯ ರಾಷ್ಟ್ರವಾಗಿ ಭಾರತ ಸೇರಿಕೊಳ್ಳಲಿದೆ
1:17 AM, 15 Jul

ಕರಿಧಾಲ್ ಮತ್ತು ಎಂ.ವನಿತಾ ಎಂಬ ಮಹಿಳಾ ವಿಜ್ಞಾನಿಗಳು ಚಂದ್ರಯಾನ-2 ಯೋಜನೆ ಸಿದ್ಧಪಡಿಸಿದ್ದಾರೆ. ಮಂಗಳಯಾನದಲ್ಲೂ ಅವರ ಪಾತ್ರ ಮಹತ್ವದ್ದಾಗಿತ್ತು.
1:13 AM, 15 Jul

ಜುಲೈ 20ಕ್ಕೆ ಚಂದ್ರನ ಮೇಲೆ ಮೊದಲ ಬಾರಿಗೆ ಮಾನವ ಕಾಲಿಟ್ಟು 50 ವರ್ಷಗಳು ಕಳೆಯುತ್ತಿದೆ. ಇದಕ್ಕೂ ಐದು ದಿನ ಮೊದಲೇ ಮತ್ತೊಂದು ಚಂದ್ರಯಾನ
12:57 AM, 15 Jul

ಚಂದ್ರಯಾನ 2 ವೀಕ್ಷಿಸಲು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ವೀಕ್ಷಕರ ಆಗಮನ
Advertisement
12:46 AM, 15 Jul

ಐದು ಕಾಲುಗಳುಳ್ಳ ಗ್ರಹನೌಕೆ 'ವಿಕ್ರಂ' ಅಧ್ಯಯನ ನೌಕೆ ಚಂದಿರನ ಅಂಗಳದಲ್ಲಿ ಸೆಪ್ಟೆಂಬರ್ 6ರ ಸುಮಾರಿಗೆ ಇಳಿಯಲಿದೆ.
12:24 AM, 15 Jul

ಜಿಎಸ್‌ಎಲ್‌ವಿ ಮಾಕ್ 3ಗೆ ಲಿಕ್ವಿಡ್ ಆಕ್ಸಿಜನ್ ತುಂಬುವ ಕೆಲಸ ಪೂರ್ಣಗೊಂಡಿದ್ದು, ಹೈಡ್ರೋಜನ್ ತುಂಬುವ ಕೆಲಸ ಪ್ರಗತಿಯಲ್ಲಿದೆ ಎಂದು ಇಸ್ರೋ ತಿಳಿಸಿದೆ.
12:20 AM, 15 Jul

2008ರ ಅಕ್ಟೋಬರ್‌ನಲ್ಲಿ ಇಸ್ರೋ ತನ್ನ ಮೊದಲ ಯೋಜನೆ ಚಂದ್ರಯಾನ-1ಅನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಿತ್ತು.
12:07 AM, 15 Jul

ಕಾನ್ಪುರ ಐಐಟಿ ವಿಜ್ಞಾನಿಗಳ ತಂತ್ರಾಂಶ ಚಂದ್ರಯಾನದಲ್ಲಿ ರೋವರ್ ಚಲನೆಗೆ ನೆರವಾಗಲು ಕಾನ್ಪುರ ಐಐಟಿ ವಿಜ್ಞಾನಿಗಳು ವಿಶೇಷ ತಂತ್ರಾಂಶ ರೂಪಿಸಿದ್ದಾರೆ.
11:54 PM, 14 Jul

ನಿರೀಕ್ಷೆಗಳೇನು?

-ಚಂದ್ರನ ಮೇಲ್ಮೈನಲ್ಲಿ ನೀರಿನ ಮೂಲ ಪತ್ತೆ - ಅಮೆರಿಕ, ರಷ್ಯಾ ಹಾಗೂ ಚೀನಾ ಬಳಿಕ ಸ್‌ಟಾ ಲ್ಯಾಂಡಿಂಗ್ ಮಾಡಲಿರುವ ಇಸ್ರೋ ಬಾಹ್ಯಾಕಾಶ ನೌಕೆ - ಖನಿಜ ಮೂಲಗಳ ಪತ್ತೆ - ಚಂದ್ರನ ಮೇಲ್ಮೈ ಅಧ್ಯಯನ - ಪ್ರಜ್ಞಾನ್ ರೋವರ್‌ನಿಂದ ಒಂದು ಚಂದ್ರಮಾನ ದಿನಗಳ ಕಾಲ ಅಧ್ಯಯನ(1 ಚಂದ್ರಮಾನ ದಿನ 14 ಭೂಮಿಯ ದಿನಗಳು) - ಬಳಿಕ ಮುಂದಿನ 1 ವರ್ಷಗಳವರೆಗೆ ಚಂದ್ರನ ವಿವಿಧ ಪ್ರದೇಶಗಳಲ್ಲಿ ಪರ್ಯಟನೆ ಮಾಡಿ ಚಿತ್ರಗಳನ್ನು ಕಳುಹಿಸಲಿದೆ.
11:38 PM, 14 Jul

ಚಂದ್ರಯಾನ-2 ವಿಶೇಷತೆ

ಯೋಜನಾ ವೆಚ್ಚ: 1000 ಕೋಟಿ , ಜಿಎಸ್‌ಎಲ್‌ವಿ: ಬಾಹುಬಲಿ, ಜಿಎಸ್‌ಎಲ್‌ವಿ ಉದ್ದ: 44 ಮೀಟರ್, ಜಿಎಸ್‌ಎಲ್‌ವಿ ತೂಕ: 640 ಟನ್, ಲ್ಯಾಂಡರ್: ವಿಕ್ರಮ(ತೂಕ: 1471 ಕೆ.ಜಿ, ಪೆಲೋಡ್: 3), ರೋವರ್: ಪ್ರಜ್ಞಾನ್(ತೂಕ: 27 ಕೆ.ಜಿ, ಪೆಲೋಡ್: 2), ಆರ್ಬಿಟರ್: ತೂಕ: 2379 ಕೆ.ಜಿ, ಪೆಲೋಡ್: 8, ಉಡಾವಣೆ ಸಮಯ: ಜು.15 ಬೆಳಗಿನ ಜಾವ 2 ಗಂಟೆ 51 ನಿಮಿಷ
11:14 PM, 14 Jul

ಗ್ಯಾಲರಿಯಲ್ಲಿ 5000 ಮಂದಿ ಕುಳಿತುಕೊಂಡು ವೀಕ್ಷಿಸಬಹುದಾದ ಸಾಮರ್ಥ್ಯವಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಇಲ್ಲಿ ಕುಳಿತು ನೇರವಾಗಿ ಉಡಾವಣೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.
11:07 PM, 14 Jul

ಚಂದ್ರಯಾನ 2 ಇಡೀ ಜಗತ್ತಿಗೆ ಮಹತ್ತರ ಯೋಜನೆ, ಯಶಸ್ವಿಯಾದರೆ ಚಂದ್ರನ ಅಂಗಳದಲ್ಲಿ ನೌಕೆಯನ್ನು ಕಳುಹಿಸಿದ ನಾಲ್ಕನೇ ರಾಷ್ಟ್ರ ಭಾರತವಾಗುತ್ತದೆ. ನಮ್ಮ ಸಾಧನೆ ಹೆಮ್ಮೆ ತರುವಂತಹ ಸಾಧನೆಯಾಗದೆ. 978 ಕೋಟಿ ರೂ ವೆಚ್ಚವಾಗುತ್ತಿದೆ. ವಿಜ್ಞಾನಿ ವಿಕ್ರಂ ಸಾರಾಬಾಯಿ ಅವರ ನೆನಪಿನಲ್ಲಿ ಲ್ಯಾಂಡರ್‌ಗೆ ವಿಕ್ರಂ ಎಂದು ಹೆಸರಿಡಲಾಗಿದೆ- ಸುಧೀಂದ್ರ ಹಾಲ್ದೊಡ್ಡೇರಿ, ವಿಜ್ಞಾನಿ
10:55 PM, 14 Jul

ಕೊನೆಯ ಕ್ಷಣದ ಸಿದ್ಧತೆಗಳೇನೇನು?

ಕೊನೆಯ ಕ್ಷಣದ ಸಿದ್ಧತೆಗಳೇನೇನು?
ಚಂದ್ರಯಾನ-2 ಮಿಷನ್​ನ ಕೊನೆಕ್ಷಣದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಭಾನುವಾರ ಬೆಳಗ್ಗೆ 6.51ರಿಂದ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರ ಬೆಳಗ್ಗೆ 2.51ಕ್ಕೆ ಉಡಾವಣೆ ನಡೆಯಲಿದೆ. ಚಂದ್ರಯಾನ-2 ಗಗನನೌಕೆಯ ಫುಲ್ ಡ್ರೆಸ್ ರಿಹರ್ಸಲ್(ಎಫ್​ಡಿಆರ್) ಮತ್ತು ಉಡಾವಣಾ ರಿಹರ್ಸಲ್​ಮೊದಲಿಗೆ ನಡೆಸಲಾಯಿತು. ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್​ನ ವಿಜ್ಞಾನಿಗಳು ಎಫ್​ಡಿಆರ್​ನಲ್ಲಿ ಲ್ಯಾಂಡರ್ ಮತ್ತು ಆರ್ಬಿಟರ್ ನಡುವಿನ ಲಿಂಕ್, ಸಿಗ್ನಲ್ ಮತ್ತು ಸಂವಹನ ಲಿಂಕ್​ಗಳನ್ನು ಪರೀಕ್ಷಿಸಲಾಗಿದೆ. ರಾಕೆಟ್ ಜಿಎಸ್​ಎಲ್​ವಿ - ಎಂಕೆ3ಯ ವ್ಯವಸ್ಥೆಯನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.
10:35 PM, 14 Jul

ಜಿಎಸ್‌ಎಲ್‌ವಿ ಮಾಕ್-3 ನೌಕೆ ಚಂದ್ರಯಾನದತ್ತ ಸಾಗಲು ಇನ್ನು ಕೇವಲ 4 ಗಂಟೆಗಳು ಬಾಕಿ ಇವೆ
10:23 PM, 14 Jul

ಎಲ್ಲ ಪೂರ್ವ ಸಿದ್ಧತೆ ಪರೀಕ್ಷೆಗಳು ಸಮರ್ಪಕವಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಚಂದ್ರನ ಮೇಲ್ಮೈನಲ್ಲಿ ಗಗನನೌಕೆ ಲ್ಯಾಂಡಿಂಗ್ ಆಗಲಿದೆ ಎಂದು ಇಸ್ರೋ ತಿಳಿಸಿದೆ.
10:23 PM, 14 Jul

ಇಸ್ರೋ ವಿಜ್ಞಾನಿಗಳ ಮೇಲುಸ್ತುವಾರಿ ಹಾಗೂ 20 ಗಂಟೆಗಳ ಕ್ಷಣಗಣನೆ, ಪರೀಕ್ಷೆ ಬಳಿಕ ಸೋಮವಾರ ಬೆಳಗಿನ ಜಾವ 2 ಗಂಟೆ 51 ನಿಮಿಷಕ್ಕೆ ಸರಿಯಾಗಿ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಆರಂಭವಾಗಲಿದೆ.
10:23 PM, 14 Jul

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್‌ಎಲ್‌ವಿ ಮಾಕ್-3 ಬಾಹುಬಲಿ ಉಢಾವಣಾ ವಾಹನದಲ್ಲಿ ಗಗನನೌಕೆ ಸಾಗಲಿದೆ.
10:22 PM, 14 Jul

ಇಂದು ಮಧ್ಯರಾತ್ರಿ ಚಂದ್ರನತ್ತ ಹೊರಡಲಿರುವ ಇಸ್ರೋ ಬಾಹ್ಯಾಕಾಶ ನೌಕೆ ಯಾವುದೇ ದೇಶ ಹೋಗದ ಚಂದ್ರನ ಭಾಗದತ್ತ ಪಯಣ

English summary
Chandrayaan 2: The mission has entered its leg,July 15 early morning lift-off of India's heavy rocket nicknamed the 'Bahubali' carrying the Chandrayaan-2 spacecraft began on Sunday.After the full dress rehearsal of the spacecraft and launch rehearsal have been completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X