ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2 ನೌಕೆಯಿಂದ ಚಂದ್ರನ ಸುತ್ತ 9 ಸಾವಿರ ಪ್ರದಕ್ಷಿಣೆ

|
Google Oneindia Kannada News

ಚಂದ್ರನ ಅಧ್ಯಯನಕ್ಕೆಂದು 2019ರಲ್ಲಿ ಉಡಾವಣೆ ಮಾಡಲಾಗಿದ್ದ ಚಂದ್ರಯಾನ-2 ನೌಕೆಯು ಕಳೆದ 2 ವರ್ಷಗಳಲ್ಲಿ 9000ಕ್ಕೂ ಹೆಚ್ಚು ಬಾರಿ ಚಂದ್ರನನ್ನು ಸುತ್ತುಹಾಕಿದ್ದು, ಅತ್ಯದ್ಭುತವಾದ ಸಾವಿರಾರು ಫೋಟೊಗಳನ್ನು ರವಾನಿಸಿದೆ ಎಂದು ಇಸ್ರೋ ಹೇಳಿದೆ.

ಚಂದ್ರಯಾನ-2ಕ್ಕೆ 2 ವರ್ಷ ತುಂಬಿದ ಕಾರಣ ನಡೆದ 2 ದಿನಗಳ ಲೂನಾರ್ ಸೈನ್ಸ್ ವರ್ಕ್ ಶಾಪ್ 2021ರಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್ , ಚಂದ್ರಯಾನ-2ನೌಕೆಯೊಂದಿಗೆ ಹಾರಿಬಿಡಲಾಗಿರುವ 8 ವಿವಿಧ ಉಪಕರಣಗಳು ರಿಮೋಟ್ ಸೆನ್ಸಿಂಗ್, ಇನ್‌ ಸೈಟ್ ಅಬ್ಸರ್ವೇಷನ್ ಸೇರಿ ಅನೇಕ ಕೆಲಸಗಳನ್ನು ಮಾಡುತ್ತಲೇ ಇದೆ.

ಕಳೆದ 2 ವರ್ಷದಲ್ಲಿ ನೌಕೆಯು 9 ಸಾವಿರಕ್ಕೂ ಹೆಚ್ಚು ಬಾರಿ ಚಂದ್ರನ ಸುತ್ತು ಹಾಕಿದೆ. ಉಪಗ್ರಹವು ಈಗಲೂ ಅತ್ಯುತ್ತಮ ಮಾಹಿತಿಗಳನ್ನು, ಅಪರೂಪವಾದ ಹಲವಾರು ಫೋಟೊಗಳನ್ನು ರವಾನಿಸಿದೆ ಎಂದು ಹೇಳಿದೆ.

Chandrayaan-2

ಜುಲೈ 22, 2019 ರಂದು ಚೆನ್ನೈ ಬಳಿಯ ಶ್ರೀಹರಿಕೋಟದಲ್ಲಿರುವ ರಾಕೆಟ್ ಉಡಾವಣೆ ಕೇಂದ್ರದಿಂದ 'ಬಾಹುಬಲಿ' ಹೆಸರಿನ ಜಿಎಸ್‌ಎಲ್‌ವಿ ರಾಕೆಟ್ ಚಂದ್ರನತ್ತ ನೆಗೆದಿತ್ತು.
ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಭೂಸ್ಪರ್ಶಕವನ್ನು ಇಳಿಸುವ ಮೊಟ್ಟ ಮೊದಲ ಯೋಜನೆ ಇದಾಗಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು 425 ಕೋಟಿ ರೂ.ಎಂದು ಅಂದಾಜಿಸಲಾಗಿದೆ.

ಇಸ್ರೋ ಪ್ರಕಾರ, ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆಮಾಡುವುದರ ಜೊತೆಗೆ 'ಹೊಸ' ಪ್ರಯೋಗಗಳನ್ನು ನಡೆಸುತ್ತದೆ. ಗಾಲಿಗಳಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ. ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-2 ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ.

ಚಂದ್ರಯಾನ-1 ಅಭಿಯಾನದ ಯಶಸ್ಸಿಗೆ ಕಾರಣರಾದ ಮೈಲ್ಸ್ವಾಮಿ ಅಣ್ಣಾದೊರೈ ನೇತೃತ್ವದ ತಂಡವು ಚಂದ್ರಯಾನ-2 ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಚಂದ್ರನ ಮೇಲ್ಮೈನ ಮೇಲೆ ಪರಿಣಾಮ ಬೀರಿದ ಚಂದ್ರಯಾನ-1ರ ಚಂದ್ರ ಶೋಧಕಕ್ಕಿಂತ ಭಿನ್ನವಾಗಿ, ಗಗನನೌಕೆಯು ಹಗುರವಾಗಿ ನಿಲುಗಡೆ ಮಾಡುತ್ತದೆ. ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ ಗಗನನೌಕೆಯನ್ನು ಒದಗಿಸುತ್ತದೆ. ಗಗನನೌಕೆ ಹಾಗು ರೋವರ್ ನ ಸರಾಸರಿ ತೂಕ 1250 ಕೆಜಿ. ರಷ್ಯನ್ ಸ್ಪೇಸ್ ಏಜೆನ್ಸಿ ರೋಸ್ಕೊಸ್ಮೊಸ್ ಗಗನನೌಕೆಯನ್ನು 2011ರಲ್ಲಿ ಪರೀಕ್ಷಿಸಲು ಉದ್ದೇಶಿಸಿದೆ.

ರೋವರ್ 30-100ಕೆಜಿ ತೂಕ ಹೊಂದಿದ್ದು ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ರೋವರ್ ಗಾಲಿಗಳ ಮೇಲೆ ಚಂದ್ರನ ಮೇಲ್ಮೈಯನ್ನು ತಲುಪಿ, ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸಿ, ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ.
ಹಾಗು ಮೇಲಿರುವ ಕಕ್ಷೆಗಾಮಿಗೆ ಶೋಧಿತ,ದೊರೆತ ದತ್ತಾಂಶವನ್ನು ಕಳುಹಿಸುತ್ತದೆ, ಇದು ಭೂಮಿಯ ಸ್ಟೇಶನ್‌ಗೆ ತನ್ನ ಪರಿಧಿ ಕೇಂದ್ರದ ಮುಖಾಂತರ ಮಾಹಿತಿ ಪ್ರಸಾರ ಮಾಡುತ್ತದೆ.

English summary
Two years after its lander, rover combination crash-landed on the far side of the moon, the Chandrayaan-2 mission is still delivering critical observations to India as it completes 9,000 orbits around the Moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X