ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2012ರಲ್ಲಿ ಮೋದಿ ಮಾಡಿದ್ದ ಟ್ವೀಟ್ ಈಗ ಉಲ್ಟಾ ಹೊಡೆಯಲಾರಂಭಿಸಿದಾಗ..

|
Google Oneindia Kannada News

ಬಹುಷಃ 2014ರಲ್ಲಿ ಎನ್ಡಿಎ ಮೈತ್ರಿಕೂಟದ ನೇತೃತ್ವವನ್ನು ವಹಿಸಿಕೊಂಡು ನರೇಂದ್ರ ಮೋದಿ ಪ್ರಧಾನಿಯಾದ ನಂತರದಿಂದ ಹಿಡಿದು ಇಂದಿನವರೆಗೆ ದಿನಂಪ್ರತಿ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿ, ಸದ್ದು ಮಾಡುತ್ತಿರುವ ವ್ಯಕ್ತಿ ಮೋದಿ ಬಿಟ್ಟರೆ ಇನ್ನೊಬ್ಬರು ಇರಲಿಕ್ಕಿಲ್ಲ.

ಅದೂ, ಎರಡನೇ ಅವಧಿಗೆ ಅವರು ಪ್ರಧಾನಿಯಾಗಿ ಮುಂದುವರಿದ ನಂತರವಂತೂ ಹೇಳತೀರದು. ಎರಡನೇ ಅವಧಿಯಲ್ಲಿ ಪೌರತ್ವ, ಕಾಶ್ಮೀರ, ತ್ರಿಬಲ್ ತಲಾಖ್ ಮುಂತಾದ ಪ್ರಬಲ ಮಸೂದೆಯನ್ನು ಜಾರಿಗೆ ತಂದ ನಂತರ, ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಲಿ ಅವರ ಹವಾ ಏರುತ್ತಲೇ ಇದೆ.

ರಾಮನ ಭಾರತದಲ್ಲಿ 93, ರಾವಣನ ಲಂಕಾದಲ್ಲಿ 51: ಪೆಟ್ರೋಲ್ ದರಕ್ಕೆ ಸ್ವಾಮಿ ಹೋಲಿಕೆ!ರಾಮನ ಭಾರತದಲ್ಲಿ 93, ರಾವಣನ ಲಂಕಾದಲ್ಲಿ 51: ಪೆಟ್ರೋಲ್ ದರಕ್ಕೆ ಸ್ವಾಮಿ ಹೋಲಿಕೆ!

ಕೃಷಿ ಮಸೂದೆಯ ವಿರುದ್ದ ರೈತರ ಹೋರಾಟದ ಕಾವು ಒಂದು ಕಡೆಯಾದರೆ, ತೈಲ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಪ್ರಧಾನಿ ಮೋದಿ ಸಾಮಾಜಿಕ ತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದ್ದಾರೆ.

 2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ! 2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ!

ಹಾಲೀ ಬಜೆಟ್ ನಲ್ಲಿ ಡೀಸೆಲ್ ಮೇಲೆ ನಾಲ್ಕು ರೂಪಾಯಿ, ಪೆಟ್ರೋಲ್ ಮೇಲೆ ಎರಡೂವರೆ ರೂಪಾಯಿ ಕೃಷಿಮೂಲ ಸೌಕರ್ಯ ಸೆಸ್ ವಿಧಿಸಲಾಗಿದೆ. ಇದರಿಂದ ತೈಲ ಉತ್ಪನ್ನಗಳ ಬೆಲೆ ಏರಿಕೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಿದ್ದರೂ, 2012ರಲ್ಲಿ ಮೋದಿ ಮಾಡಿದ್ದ ಟ್ವೀಟ್ ಮುಂದಿಟ್ಟುಕೊಂಡು ಟ್ವಿಟ್ಟರ್ ನಲ್ಲಿ ಮೋದಿ ವಿರುದ್ದ ಕಿಡಿಕಾರಲಾಗುತ್ತಿದೆ.

 2012ರಲ್ಲಿ ಮೋದಿ ಮಾಡಿದ್ದ ಟ್ವೀಟ್ ಹೀಗಿತ್ತು

2012ರಲ್ಲಿ ಮೋದಿ ಮಾಡಿದ್ದ ಟ್ವೀಟ್ ಹೀಗಿತ್ತು

2012ರಲ್ಲಿ ಮೋದಿ ಮಾಡಿದ್ದ ಟ್ವೀಟ್ ಹೀಗಿತ್ತು, 'ಪೆಟ್ರೋಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವೈಫಲ್ಯತೆಯನ್ನು ತೋರಿಸುತ್ತದೆ. ಬೆಲೆ ಏರಿಕೆಯಿಂದಾಗಿ ಗುಜರಾತ್ ನಾಗರೀಕರಿಗೆ ಭಾರೀ ಹೊರೆಯಾಗಲಿದೆ'ಎಂದು ಮೋದಿ ಟ್ವೀಟ್ ಮಾಡಿದ್ದರು. ಆಗ ಅವರು ಗುಜರಾತ್ ಸಿಎಂ ಆಗಿದ್ದರು.

 #ModiHikesPetrolPrice ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡಿಂಗ್

#ModiHikesPetrolPrice ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡಿಂಗ್

ಈ ಟ್ವೀಟ್ ಇಟ್ಟುಕೊಂಡು ಟ್ವಿಟ್ಟಿಗರು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. #ModiHikesPetrolPrice ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡಿಂಗ್ ನಲ್ಲಿದೆ. 'ಭಾರತೀಯರ ಜೀವನವನ್ನೇ ಮೋದಿ ಸರಕಾರ ಹಾಳು ಮಾಡಿತು', 'ಕೆಲವೇ ದಿನಗಳಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿ ಆಗಲಿದೆ. ಬಿಜೆಪಿಯವರು ಇದನ್ನು ಸಂಭ್ರಮಿಸಲಿದ್ದಾರೆ' ಎನ್ನುವ ಟ್ವೀಟ್.

 ಮೋದಿ ಸರಕಾರ ಪೆಟ್ರೋಲ್ ಬೆಲೆಯನ್ನು ಜಾಸ್ತಿ ಮಾಡಿದೆ

ಮೋದಿ ಸರಕಾರ ಪೆಟ್ರೋಲ್ ಬೆಲೆಯನ್ನು ಜಾಸ್ತಿ ಮಾಡಿದೆ

'ಮೋದಿ ಸರಕಾರ ಪೆಟ್ರೋಲ್ ಬೆಲೆಯನ್ನು ಜಾಸ್ತಿ ಮಾಡಿದೆ. ಇದರ ಉದ್ದೇಶ ಜನರು ವಾಹನವನ್ನು ಬಳಸುವುದನ್ನು ಬಿಟ್ಟು ವಾಕಿಂಗ್ ಮಾಡಲಿ. ವಾಕಿಂಗ್ ನಿಂದ ಜನರು ಫಿಟ್ ಆಗಿರುತ್ತಾರೆ ಎನ್ನುವುದು ಸರಕಾರದ ಕಾನ್ಸೆಪ್ಟ್'. 'ತೈಲ ಉತ್ಪನ್ನಗಳ ಬೆಲೆಯಿಂದ ಇತರ ಪದಾರ್ಥಗಳ ಬೆಲೆಯೂ ಜಾಸ್ತಿಯಾಗಲಿದೆ. ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುತ್ತಾರೆ'ಎನ್ನುವ ಟ್ವೀಟ್.

 ಮುಂದಿನ ವರ್ಷಕ್ಕೂ ಮೊದಲೇ ಭಾರತೀಯರು ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ

ಮುಂದಿನ ವರ್ಷಕ್ಕೂ ಮೊದಲೇ ಭಾರತೀಯರು ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ

'ಮುಂದಿನ ವರ್ಷಕ್ಕೂ ಮೊದಲೇ ಭಾರತೀಯರು ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ'. 'ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರತೀ ಕುಟುಂಬವೂ ಕನಿಷ್ಠ ನಾಲ್ಕರಿಂದ ಐದು ಸಾವಿರ ರೂಪಾಯಿ ಹೆಚ್ಚುವರಿಯಾಗಿ ಬೆಲೆ ಏರಿಕೆಯಿಂದಾಗಿ ಪ್ರತ್ಯೇಕವಾಗಿ ತೆಗೆದಿಡಬೇಕಾಗಿದೆ' ಎನ್ನುವ ಮತ್ತೊಂದು ಟ್ವೀಟ್.

English summary
Cess On Petroleum Products In Union Budget - 2021: #ModiHikesPetrolPrice Hashtag Trending In Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X