ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರಿಗೆ ಅಮೆರಿಕ ವೀಸಾ ಪ್ರಕ್ರಿಯೆ ಇನ್ನು ಸರಳ

|
Google Oneindia Kannada News

ನವದೆಹಲಿ, ಆಗಸ್ಟ್ 29: ಭಾರತೀಯರ ವೀಸಾ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸಲು ಅಮೆರಿಕ ಮುಂದಾಗಿದ್ದು, ಸೆ. 1ರಿಂದ ಅದು ಜಾರಿಯಾಗಲಿದೆ. ನಿರ್ದಿಷ್ಟ ಅರ್ಜಿದಾರರು ಕಡ್ಡಾಯ ಸಂದರ್ಶನದಿಂದ ವಿನಾಯಿತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಟ್ರಾವೆಲ್ ಏಜೆಂಟ್ ಅಸೋಸಿಯೇಷನ್‌ಗೆ ಮಾಹಿತಿ ನೀಡಿರುವ ಅಮೆರಿಕದ ಕಾನ್ಸುಲೇಟ್, ಭಾರತದಾದ್ಯಂತ ವೀಸಾ ಅರ್ಜಿದಾರರ ವೀಸಾ ಪರಿಷ್ಕರಣೆಯ ಸಮಯವನ್ನು ಇಳಿಕೆ ಮಾಡಲು ಮತ್ತು ಗ್ರಾಹಕ ಸೇವೆಗಳ ಸುಧಾರಣೆಗೆ ಮುಂದಾಗಿರುವುದನ್ನು ತಿಳಿಸಿದೆ.

H-1B ಆಕಾಂಕ್ಷಿಗಳು ನಿರಾಳ, ವೀಸಾ ಕಡಿತದ ಸುದ್ದಿ ಸುಳ್ಳುH-1B ಆಕಾಂಕ್ಷಿಗಳು ನಿರಾಳ, ವೀಸಾ ಕಡಿತದ ಸುದ್ದಿ ಸುಳ್ಳು

14 ವರ್ಷಕ್ಕೆ ಕೆಳಗಿನ ಮಕ್ಕಳು ಮತ್ತು 79 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು (ಕೆಲವು ಷರತ್ತುಗಳ ಅನ್ವಯದೊಂದಿಗೆ) ಮುಂದಿನ ತಿಂಗಳಿನಿಂದ ಅಮೆರಿಕ ವೀಸಾದ ಪರಿಷ್ಕರಣೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಂದರ್ಶನದಿಂದ ವಿನಾಯಿತಿ ಪಡೆಯಲು ಅರ್ಹತೆ ಹೊಂದಬಹುದಾಗಿದೆ.

Certain US Visas Will Gets Waive From Mandatory Interview

ಸೆ.1ರಿಂದ ಈ ಯೋಜನೆ ಜಾರಿಗೆ ಬರಲಿದೆ. ಅರ್ಹ ಅರ್ಜಿದಾರರು ದೇಶದಲ್ಲಿನ ತನ್ನ 11 ಸ್ಥಳಗಳಲ್ಲಿ ಎಲ್ಲಿಯಾದರೂ ಪಾಸ್‌ಪೋರ್ಟ್ ಮತ್ತು ವೀಸಾ ಅರ್ಜಿಗಳ ದಾಖಲೆಗಳನ್ನು ಸಲ್ಲಿಸಿ ಭೇಟಿ ನಿಗದಿಯ ದಿನಾಂಕವನ್ನು ಪಡೆದುಕೊಳ್ಳಬೇಕಾಗುತ್ತದೆ. ವೀಸಾ ಅರ್ಜಿಯ ಕೇಂದ್ರದ ಉದ್ಯೋಗಿಯು ಆ ದಾಖಲೆಗಳನ್ನು ಮೊದಲು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಅಮೆರಿಕದ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ಗೆ ರವಾನಿಸಲು ಅಂಗೀಕರಿಸುತ್ತಾರೆ.

ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಹೊಸ ಮೊಬೈಲ್ ಅಪ್ಲಿಕೇಷನ್ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಹೊಸ ಮೊಬೈಲ್ ಅಪ್ಲಿಕೇಷನ್

ಅರ್ಜಿ ಸಲ್ಲಿಸಿದ ಏಳರಿಂದ ಹತ್ತು ವ್ಯವಹಾರದ ದಿನಗಳಲ್ಲಿ ಅರ್ಜಿದಾರರಿಗೆ ನಿರ್ಣಯದ ಮಾಹಿತಿ ದೊರಕುತ್ತದೆ. ಕೆಲವು ಪ್ರಕರಣಗಳಲ್ಲಿ ಅರ್ಜಿದಾರರು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.

ಅಮೆರಿಕ ವೀಸಾಗೆ ಇ ಮೇಲ್ ಐಡಿ, ಸೋಷಿಯಲ್ ಮೀಡಿಯಾ ಅಕೌಂಟ್, ಫೋನ್ ನಂಬರ್ ಎಲ್ಲ ನೀಡಬೇಕುಅಮೆರಿಕ ವೀಸಾಗೆ ಇ ಮೇಲ್ ಐಡಿ, ಸೋಷಿಯಲ್ ಮೀಡಿಯಾ ಅಕೌಂಟ್, ಫೋನ್ ನಂಬರ್ ಎಲ್ಲ ನೀಡಬೇಕು

ಒಂದು ವೇಳೆ ಸಂದರ್ಶನಕ್ಕೆ ಹಾಜರಾಗುವ ಅಗತ್ಯಬಿದ್ದರೆ ಅರ್ಜಿದಾರರು ಸಂದರ್ಶನ ವಿನಾಯಿತಿ ಪ್ರಕ್ರಿಯೆಗೆ ಆಯ್ಕೆಯಾದ ಸ್ಥಳಕ್ಕೇ ಪ್ರಯಾಣಿಸಬೇಕಾಗುತ್ತದೆ. ಒಮ್ಮೆ ದಾಖಲೆಗಳನ್ನು ಸಲ್ಲಿಸಿದ ಬಳಿಕ ಅದನ್ನು ಕೇಂದ್ರಗಳ ನಡುವೆ ವರ್ಗಾವಣೆ ಮಾಡಲು ಅವಕಾಶವಿಲ್ಲ. ಸಂದರ್ಶನಕ್ಕೆ ಹಾಜರಾಗಬೇಕಾದ ಅರ್ಜಿದಾರರಿಗೆ ಹೇಗೆ ಪ್ರಕ್ರಿಯೆ ನಡೆಸಬೇಕು ಎಂಬ ಸೂಚನೆ ನೀಡಲಾಗುತ್ತದೆ.

English summary
Indian nationals can apply for a waiver from mandatory interview while appliying for US Viasa. This new facility will be available for certian applicants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X