ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ರೈಲು, 50 ರೈಲು ನಿಲ್ದಾಣ ಖಾಸಗಿಯಿಂದ ಕಾರ್ಯಾಚರಣೆಗೆ ಯೋಜನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 10: 150 ರೈಲುಗಳು ಹಾಗೂ 50 ರೈಲು ನಿಲ್ದಾಣಗಳ ಕಾರ್ಯಾಚರಣೆಯನ್ನು ಖಾಸಗಿಯವರಿಗೆ ಒಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಲನಕ್ಷೆಯೊಂದನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ. ನಿಗದಿತ ಅವಧಿಯೊಳಗೆ ಈ ಪ್ರಕ್ರಿಯೆ ಮುಗಿಸುವ ಆಲೋಚನೆಯಲ್ಲಿ ಸರ್ಕಾರ ಇದೆ.

ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ರೈಲ್ವೆ ಮಂಡಳಿಯ ಅಧ್ಯಕ್ಷ ವಿ. ಕೆ. ಯಾದವ್ ಗೆ ಪತ್ರ ಬರೆದಿದ್ದು, ಈ ಪ್ರಕ್ರಿಯೆಗಾಗಿಯೇ ತಂಡವೊಂದನ್ನು ರೂಪಿಸುವುದಾಗಿ ಹೇಳಿದ್ದಾರೆ. ಯಾದವ್, ಕಾಂತ್ ಹೊರತುಪಡಿಸಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಗೃಹ ಹಾಗೂ ನಗರ ವ್ಯವಹಾರಗಳ ಕಾರ್ಯದರ್ಶಿ ಕೂಡ ಈ ತಂಡದ ಭಾಗವಾಗಿ ಇರುತ್ತಾರೆ.

IRCTC IPO: 645 ಕೋಟಿ ಹಣ ಸಂಗ್ರಹ ಗುರಿಗೆ 72,000 ಕೋಟಿ ಬಂತುIRCTC IPO: 645 ಕೋಟಿ ಹಣ ಸಂಗ್ರಹ ಗುರಿಗೆ 72,000 ಕೋಟಿ ಬಂತು

ನಾನೂರು ರೈಲು ನಿಲ್ದಾಣಗಳನ್ನು ವಿಶ್ವ ದರ್ಜೆಯ ನಿಲ್ದಾಣಗಳಾಗಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಿತ್ತು. ಈ ವರೆಗೆ ಕೆಲವನ್ನು ಮಾತ್ರ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.

Centre To Privatise 150 Trains, 50 Railway Stations

ನಾನು ರೈಲ್ವೆ ಸಚಿವರ ಜತೆ ಕೂಲಂಕಷ ಚರ್ಚೆ ನಡೆಸಿದ್ದೇನೆ. ಕನಿಷ್ಠ ಐವತ್ತು ರೈಲು ನಿಲ್ದಾಣಗಳನ್ನು ಆದ್ಯತೆ ಮೇರೆಗೆ ಮೇಲ್ದರ್ಜೆಗೆ ಏರಿಸುವ ಅಗತ್ಯ ಇದೆ ಎಂದು ನಿರ್ಧರಿಸಲಾಯಿತು. ಈಚೆಗೆ ಆರು ವಿಮಾನ ನಿಲ್ದಾಣಗಳನ್ನು ಹೇಗೆ ಖಾಸಗಿಯಾಗಿ ಮಾಡಲಾಯಿತು, ಅದೇ ರೀತಿ ಕಾರ್ಯದರ್ಶಿಗಳ ತಂಡ ಅಸ್ತಿತ್ವಕ್ಕೆ ತಂದು, ನಿಗದಿತ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಇನ್ನು ರೈಲ್ವೆ ಸಚಿವಾಲಯದಿಂದ ಖಾಸಗಿ ರೈಲು ಆಪರೇಟರ್ ಗಳನ್ನು ಪ್ರಯಾಣಿಕರ ರೈಲು ನಿರ್ವಹಣೆಗಾಗಿ ಕರೆತರಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ನೂರೈವತ್ತು ರೈಲುಗಳನ್ನು ಖಾಸಗಿಗೆ ಒಪ್ಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.

ಅಕ್ಟೋಬರ್ ನಾಲ್ಕನೇ ತಾರೀಕು ಲಖನೌ- ದೆಹಲಿ ಮಧ್ಯೆ ತೇಜಸ್ ಎಕ್ಸ್ ಪ್ರೆಸ್ ರೈಲು ಮೊದಲ ಬಾರಿಗೆ ರೈಲ್ವೆ ಹೊರತುಪಡಿಸಿ ಇತರ ಆಪರೇಟರ್ ನಿರ್ವಹಿಸಿದ್ದಾರೆ. ಅದು ರೈಲ್ವೆಯ ಅಂಗ ಸಂಸ್ಥೆಯೇ ಆದ ಐಆರ್ ಸಿಟಿಸಿ ನಿರ್ವಹಿಸಿತ್ತು.

English summary
Union government is in the process of forming a task force to draw a blueprint for handing over operations of 150 trains, 50 railway stations to private operators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X