ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ಯೆ ಮತ್ತೆ ಹೆಚ್ಚಳ

By Prasad
|
Google Oneindia Kannada News

ನವದೆಹಲಿ, ಫೆ. 2 : ಐವತ್ತು ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಮೂವತ್ತು ಲಕ್ಷ ಪಿಂಚಣಿದಾರರು ಶ್ಯಾವಿಗೆ ಪಾಯಸ ಮೆಲ್ಲುವಂಥ ಸುದ್ದಿಯನ್ನು ಕೇಂದ್ರ ಸರಕಾರ ಸದ್ಯದಲ್ಲೇ ನೀಡಲಿದೆ. ಸದ್ಯದಲ್ಲೇ ತುಟ್ಟಿ ಭತ್ಯೆಯನ್ನು ಶೇ.10ರಷ್ಟು ಹೆಚ್ಚಿಸಿ, ಶೇ.100ರಷ್ಟು ತುಟ್ಟಿ ಭತ್ಯೆಯನ್ನು ಕೇಂದ್ರ ಸರಕಾರ ನೌಕರರಿಗೆ ನೀಡಲಿದೆ.

ಒಂದು ವರ್ಷದಲ್ಲಿ ಎರಡನೇ ಬಾರಿ ತುಟ್ಟಿ ಭತ್ಯೆಯನ್ನು ಶೇ.10ರಷ್ಟು ಹೆಚ್ಚಿಸಲಾಗುತ್ತಿದೆ. 2013ರ ಸೆಪ್ಟೆಂಬರ್ ತಿಂಗಳಲ್ಲಿ ಜುಲೈ 1ರಿಂದಲೇ ಅನ್ವಯವಾಗುವಂತೆ ಶೇ.10ರಷ್ಟು ತುಟ್ಟಿ ಭತ್ಯೆಯನ್ನು ಕೇಂದ್ರ ಸರಕಾರ ಹೆಚ್ಚಿಸಿತ್ತು. ಜನವರಿ 1ರಿಂದ ಅನ್ವಯವಾಗುವಂತೆ ಶೇ.10ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗುವುದು ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

Centre to hike dearness allowance by 10 percent

ಔದ್ಯೋಗಿಕ ಕೆಲಸಗಾರರ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ(ಸಿಪಿಐ-ಐಡಬ್ಯೂ)ವನ್ನು ಪರಿಷ್ಕರಿಸಿದ ನಂತರ ಫೆಬ್ರವರಿ 28ರಂದು ಪ್ರಕಟಿಸಲಾಗುವುದು. ನಂತರ ನಿಖರವಾಗಿ ಎಷ್ಟು ತುಟ್ಟಿ ಭತ್ಯೆಯನ್ನು ಏರಿಸಲಾಗುವುದು ಎಂದು ತಿಳಿಸಲಾಗುತ್ತದೆ. ಶೇ.10ಕ್ಕಿಂತ ತುಟ್ಟಿ ಭತ್ಯೆ ಕಡಿಮೆ ಇರುವುದಿಲ್ಲ ಎಂದು ತಿಳಿದುಬಂದಿದೆ. ಸರಕಾರ ಜ.31ರಂದು ಬಿಡುಗಡೆ ಮಾಡಲಾಗಿರುವ ತಾತ್ಕಾಲಿಕ ದತ್ತಾಂಶದ ಪ್ರಕಾರ, ಡಿಸೆಂಬರ್ ತಿಂಗಳಲ್ಲಿ ಫ್ಯಾಕ್ಟರಿ ಕೆಲಸಗಾರರ ರಿಟೇಲ್ ಹಣದುಬ್ಬರ 9.13ರಷ್ಟಿದೆ.

ತುಟ್ಟಿ ಭತ್ಯೆಯನ್ನು ಏರಿಸಲು ಎಲ್ಲ ಹನ್ನೆರಡು ತಿಂಗಳ ಸಿಪಿಐ-ಐಡಬ್ಯೂ ದತ್ತಾಂಶವನ್ನು ಪರಿಗಣಿಸಿ ನಿಗದಿಪಡಿಸಲಾಗುವುದು. ಇದನ್ನು ಮಾರ್ಚ್ ತಿಂಗಳಲ್ಲಿ ಎಷ್ಟು ಪ್ರಮಾಣದಲ್ಲಿ ತಟ್ಟಿ ಭತ್ಯೆ ಏರಿಸಲಾಗುವುದು ಎಂಬುದು ತಿಳಿದುಬರಲಿದೆ ಎಂದು ಕೇಂದ್ರ ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಕೆಕೆಎನ್ ಕುಟ್ಟಿ ಅವರು ಹೇಳಿದ್ದಾರೆ. ಡಿಎ ಜೊತೆಗೆ ಮೂಲ ಸಂಬಳವನ್ನೂ ಏರಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ. ಒಟ್ಟಿನಲ್ಲಿ ಯುಗಾದಿಗೆ ಮೊದಲು ಕೇಂದ್ರ ಸರಕಾರಿ ನೌಕರರಿಗೆ ಸಂತಸದ ಸುದ್ದಿ ಹೊರಬೀಳದಿದೆ.

English summary
Centre is likely to announce hike in dearness allowance to central government workers by 10% in March. More than 50 lakh employees and 30 lalh pensioners will be benefited by this hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X