ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಗಳು ಮುಂದಿನ 3 ದಿನದಲ್ಲಿ 9 ಲಕ್ಷ ಕೊರೊನಾ ಲಸಿಕೆ ಪಡೆಯಲಿವೆ: ಕೇಂದ್ರ

|
Google Oneindia Kannada News

ನವದೆಹಲಿ, ಮೇ 10: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮುಂದಿನ 3 ದಿನಗಳಲ್ಲಿ 9 ಲಕ್ಷಕ್ಕೂ ಅಧಿಕ ಹೆಚ್ಚುವರಿ ಕೊರೊನಾ ಲಸಿಕೆಯ ಡೋಸ್‌ಗಳನ್ನು ಪಡೆಯಲಿವೆ.

1 ಕೋಟಿಗಿಂತಲೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳು(1,04,30,063) ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇವೆ. ಇದಲ್ಲದೆ, ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಯುಟಿಗಳು ಹೆಚ್ಚುವರಿಯಾಗಿ 9 ಲಕ್ಷ (9,24,910) ಲಸಿಕೆಗಳನ್ನು ರವಾನಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಕೊರೊನಾ ಸೋಂಕಿತರು ಮತ್ತು ಲಸಿಕೆ ಪಡೆದವರ ಲೆಕ್ಕ ಭಾರತದಲ್ಲಿ ಕೊರೊನಾ ಸೋಂಕಿತರು ಮತ್ತು ಲಸಿಕೆ ಪಡೆದವರ ಲೆಕ್ಕ

ಕೇಂದ್ರ ಸರ್ಕಾರವು ಈವರೆಗೆ ಸುಮಾರು 18 ಕೋಟಿ ಲಸಿಕೆ ಡೋಸ್ ಗಳನ್ನು(17,93,57,860) ರಾಜ್ಯಗಳು ಮತ್ತು ಯುಟಿಗಳಿಗೆ ಉಚಿತವಾಗಿ ನೀಡಿದೆ. ಇದರಲ್ಲಿ ವ್ಯರ್ಥವಾಗಿರುವುದು ಸೇರಿದಂತೆ ಒಟ್ಟು 16,89,27,797 ಡೋಸ್ ಗಳು ಎಂದು ಸಚಿವಾಲಯ ತಿಳಿಸಿದೆ.

Centre To Dispatch Nine Lakh More Vaccines In Next 72 Hours

ವ್ಯಾಕ್ಸಿನೇಷನ್ ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆ(ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೋವಿಡ್ ಸೂಕ್ತ ವರ್ತನೆ ಸೇರಿದಂತೆ) ಐದು ಅಂಶಗಳ ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ನಿನ್ನೆ 48,401 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ಕರ್ನಾಟಕದಲ್ಲಿ 47,930 ವರದಿಯಾಗಿದೆ. ಇನ್ನು ಕೇರಳದಲ್ಲಿ 35,801 ಹೊಸ ಪ್ರಕರಣಗಳು ದಾಖಲಾಗಿವೆ. ಭಾರತದ ಒಟ್ಟು ಕೋವಿಡ್ ಸಕ್ರಿಯ ಪ್ರಕರಣಗಳು ಸಂಖ್ಯೆ 37,45,237 ತಲುಪಿದೆ. ಈಗ ದೇಶದ ಒಟ್ಟು ಸೋಂಕುಗಳಲ್ಲಿ ಶೇಕಡಾ 16.53 ರಷ್ಟಿದೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ಗುಜರಾತ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಹರಿಯಾಣ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 82.89 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

73 ರಾಜ್ಯಗಳನ್ನು ಹೊಂದಿರುವ ಭಾರತದಲ್ಲಿ ಕೊರೊನಾ ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಹರಿಯಾಣ ಸೇರಿದೆ. ಇನ್ನು ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಹೊಸದಾಗಿ 3,66,161 ಕೊರೋನಾ ಪ್ರಕರಣಗಳೂ ಪತ್ತೆಯಾಗಿದ್ದು ಇದರಲ್ಲಿ ಈ ರಾಜ್ಯಗಳಲ್ಲೇ ಶೇ 91ರಷ್ಟು ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

Recommended Video

ಪುಕ್ಸಟ್ಟೆ ಸವಲತ್ತು ಬಿಟ್ಟು ಜನಕ್ಕೋಸ್ಕರ ಕೆಲಸ ಮಾಡೋದು ಯಾವಾಗ?? | Oneindia Kannada

English summary
Over one crore COVID-19 vaccine doses are still available with the states and UTs, which will receive over 9 lakh additional doses within the next three days, the Union Health Ministry said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X