ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿಎಲ್ ಕುಟುಂಬಗಳಿಗೆ ಹೊಸ ವರ್ಷದ ಕೊಡುಗೆ

|
Google Oneindia Kannada News

ನವದೆಹಲಿ, ಡಿ, 31: ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಕೇಂದ್ರ ಸರ್ಕಾರ ಹೊಸ ವರ್ಷದ ಕೊಡುಗೆ ನೀಡಲು ಮುಂದಾಗಿದೆ. ಬಿಪಿಎಲ್ ಕಟುಂಬಗಳಿಗೆ ಕೇಂದ್ರ ಸಬ್ಸಿಡಿ ಆಧಾರದಲ್ಲಿ ಹೊಸ ಎಲ್ ಪಿಜಿ ಸಂಪರ್ಕ ನೀಡಲು ತೀರ್ಮಾನ ಮಾಡಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 25 ರಂದು ಯೋಜನೆ ಉದ್ಘಾಟನೆಗೊಳ್ಳಲಿದ್ದು, 1400 ರೂ. ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆರಂಭದಲ್ಲಿ ಯೋಜನೆಯನ್ನು ಒಡಿಸ್ಸಾ ಮತ್ತು ಬಿಹಾರದಲ್ಲಿ ಕೈಗೊಳ್ಳಲಾಗುತ್ತಿದ್ದು ನಂತರ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.[ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ]

gas

ಯೋಜನೆಯ ಪರಿಣಾಮ ಗ್ರಾಮೀಣ ಭಾಗದಲ್ಲಿಯೂ ಎಲ್ ಪಿಜಿ ಬಳಕೆದಾರರ ಪ್ರಮಾಣ ಹೆಚ್ಚಲಿದೆ. ಮೊದಲು ಬಿಹಾರದಲ್ಲಿ ಯೋಜನೆ ಜಾರಿ ಮಾಡಲಾಗುವುದು. ಯೋಜನೆ ಅನುಷ್ಠಾನಕ್ಕೆ 54 ಜಿಲ್ಲೆಗಳನ್ನು ಗುರುತಿಸಲಾಗಿದೆ. 14 ಕೆಜಿ ಸಿಲಿಂಡರ್ ಜತೆ 5 ಕೆಜಿ ಸಿಲಿಂಡರ್ ಸಂಪರ್ಕಕ್ಕೂ ಸಬ್ಸಿಡಿ ನೀಡಲಾಗುವುದು ಎಂದು ಪ್ರಧಾನ್ ತಿಳಿಸಿದರು.

ಪ್ರದೇಶಕ್ಕೆ ಅನುಗುಣವಾಗಿ ಸಬ್ಸಿಡಿ ದರದಲ್ಲಿಯೂ ಕೊಂಚ ವ್ಯತ್ಯಾಸ ಮಾಡಲಾಗಿದೆ. ಉದಾಹರಣೆಗೆ ಬಿಹಾರದ ಬಿಪಿಎಲ್ ಕುಟುಂಬವೊಂದು ಎಲ್ ಪಿಜಿ ಸಂಪರ್ಕಕ್ಕೆ 800 ರೂ. ಪಾವತಿ ಮಾಡಬೇಕಾಗುತ್ತದೆ. ಉಳಿದ 1600 ರೂ. ಹಣವನ್ನು ಸರ್ಕಾರ ಸಬ್ಸಿಡಿ ರೂಪದಲ್ಲಿ ಭರಿಸಲಿದೆ. ಆದರೆ ಇದರ ಶೇಕಡವಾರು ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಎಂದು ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.

English summary
Union minister of state for petroleum and natural gas, Dharmendra Pradhan, announced a New Year bonanza for BPL families seeking LPG connection. BPL LPG consumers in backward states like Bihar would now have to pay just Rs 800, a rebate of Rs 1600, instead of Rs 2400 charged from them so far, if they get themselves registered as customers till March-end, he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X