ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಶೀಲ್ಡ್ ಲಸಿಕೆ ಪೂರೈಕೆಗೆ ಕೇಂದ್ರದಿಂದ 1732 ಕೋಟಿ ರೂ ಬಿಡುಗಡೆ

|
Google Oneindia Kannada News

ನವದೆಹಲಿ, ಮೇ 3: ಮೇ, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹನ್ನೊಂದು ಕೋಟಿ ಕೋವಿಶೀಲ್ಡ್ ಕೊರೊನಾ ಲಸಿಕೆ ಡೋಸ್‌ಗಳ ಪೂರೈಕೆಗೆ ಕೇಂದ್ರ ಸರ್ಕಾರ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ 1732.50 ಕೋಟಿ ರೂ ಮುಂಗಡ ಹಣ ಬಿಡುಗಡೆ ಮಾಡಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ತೆರಿಗೆ ಹೊರತುಪಡಿಸಿ ಸಂಸ್ಥೆಗೆ ಒಟ್ಟು 1699.50 ಕೋಟಿ ರೂ ನೀಡಿರುವುದಾಗಿ ಕೇಂದ್ರ ಸ್ಪಷ್ಟಪಡಿಸಿದೆ.

ರಾಜ್ಯಗಳಿಗೆ 3 ದಿನದಲ್ಲಿ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಲಸಿಕೆ ಪೂರೈಕೆ ರಾಜ್ಯಗಳಿಗೆ 3 ದಿನದಲ್ಲಿ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಲಸಿಕೆ ಪೂರೈಕೆ

ಕೇಂದ್ರವು ಲಸಿಕೆಗಳ ಪೂರೈಕೆಗೆ 1732.50 ಕೋಟಿ ರೂಪಾಯಿ ನೀಡಿದೆ. ಕಳೆದ ಒಂದು ವರ್ಷದಿಂದಲೂ ಸರ್ಕಾರದ ಸಹಯೋಗದೊಂದಿಗೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಸರ್ಕಾರದ ಬೆಂಬಲಕ್ಕೆ ಧನ್ಯವಾದ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಕೊರೊನಾ ಲಸಿಕೆ ಉತ್ಪಾದನೆಯನ್ನು ಇನ್ನಷ್ಟು ವೇಗಗತಿಯಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದು ಸೆರಂ ಇನ್‌ಸ್ಟಿಟ್ಯೂಟ್ ತಿಳಿಸಿದೆ.

Centre Release 1732 Crore Rs For 11 Crore Doses Of Covishield Vaccine

ಕೇಂದ್ರ ಸರ್ಕಾರ ಕೊರೊನಾ ಲಸಿಕೆ ಸಂಬಂಧ ಹೊಸ ಆದೇಶ ಹೊರಡಿಸಿಲ್ಲ ಎಂಬ ವರದಿ ಸುಳ್ಳು ಎಂದು ಸಚಿವಾಲಯ ತಿಳಿಸಿದ್ದು, ಸರ್ಕಾರದ ಕೊನೆಯ ಆದೇಶದಲ್ಲಿ 10 ಕೋಟಿ ಕೋವಿಶೀಲ್ಡ್‌ ಲಸಿಕೆ ಪೂರೈಕೆಗೆ ತಿಳಿಸಲಾಗಿತ್ತು. ಮೇ 3ರಂದು 8.744 ಡೋಸ್‌ಗಳಷ್ಟು ಲಸಿಕೆ ಸರಬರಾಜು ಆಗಿದೆ ಎಂದು ಹೇಳಿದೆ.

ಇನ್ನು ಐದು ಕೋಟಿ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಗೆ ಏಪ್ರಿಲ್ 28ರಂದು ಭಾರತ್ ಬಯೋಟೆಕ್ ಕಂಪನಿಗೆ 787.50 ಕೋಟಿ ರೂ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಇದರೊಂದಿಗೆ, ಕೇಂದ್ರ ಸರ್ಕಾರ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಲಸಿಕೆಯನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ.

English summary
Serum Institute of India (SII) on Monday endorsed the government statement that advance of Rs 1,732.50 crore has been released to the company for 11 crore doses of the Covishield vaccine,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X