ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಉದ್ವಿಗ್ನತೆಗೆ ತುಪ್ಪ ಸುರಿದ ಪತ್ರಕರ್ತರು, ನ್ಯಾಯಾಧೀಶರು!

ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದ 20 ಜನರ ಪಟ್ಟಿ ತಯಾರು. ಕೇಂದ್ರ ಸರ್ಕಾರದ ಗೃಹ ಸಚಿವಾಲಯದಿಂದ ಈ ಪಟ್ಟಿ ತಯಾರು. ಪಟ್ಟಿಯಲ್ಲಿ ಪತ್ರಕರ್ತರು, ಹೈಕೋರ್ಟ್ ಗಳ ನಿವೃತ್ತ ನ್ಯಾಯಾಧೀಶರು ಹಾಗೂ ಕೆಲವಾರ

|
Google Oneindia Kannada News

ನವದೆಹಲಿ,ಜುಲೈ 3: ಕಾಶ್ಮೀರದಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಗಳಿಗೆ ಅಲ್ಲಿನ ಯುವಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದ 20 ಜನರ ಪಟ್ಟಿಯೊಂದನ್ನು ಕೇಂದ್ರ ಗೃಹ ಸಚಿವಾಲಯ ತಯಾರಿಸಿದೆ. ಈ ವ್ಯಕ್ತಿಗಳು, ಹವಾಲಾ ಹಣದಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ತುಪ್ಪ ಸುರಿಯುತ್ತಿದ್ದರೆಂದು ಹೇಳಲಾಗಿದೆ.

ಗುಪ್ತಚರ ಇಲಾಖೆಯಿಂದ ಬಂದಿರುವ ಮಾಹಿತಿಯ ಪ್ರಕಾರ, ಈ ಪಟ್ಟಿಯು ಸಿದ್ಧಗೊಂಡಿದ್ದು, ಇವರಲ್ಲಿ ಪತ್ರಕರ್ತರು, ಹೈಕೋರ್ಟ್ ಗಳ ನಿವೃತ್ತ ನ್ಯಾಯಾಧೀಶರು, ಬರಹಗಾರರು, ಬುದ್ಧಿಜೀವಿಗಳು ಹಾಗೂ ಕೆಲ ಸರ್ಕಾರಿ ಅಧಿಕಾರಿಗಳೂ ಸೇರಿರುವುದು ಆಘಾತಕಾರಿ ವಿಚಾರ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ, ಕೇಂದ್ರ ಗೃಹ ಸಚಿವಾಲಯವು ಕಾಶ್ಮೀರದಲ್ಲಿನ ಪ್ರತಿಭಟನೆಗಳನ್ನು ಹತ್ತಿಕ್ಕಲು ಆಪರೇಷನ್ ಕ್ಲೀನ್ ಅಪ್ ಎಂಬ ಕಾರ್ಯತಂತ್ರ ರೂಪಿಸಿತ್ತು. ಈ ಕಾರ್ಯತಂತ್ರದ ಅನ್ವಯ ತೀವ್ರ ತನಿಖೆಯನ್ನು ನಡೆಸಲಾಗಿತ್ತು. ಕಾಶ್ಮೀರ ಹೊತ್ತಿ ಉರಿಯಲು ತೆರೆ ಮರೆಯಲ್ಲಿದ್ದುಕೊಂಡು ತುಪ್ಪ ಸುರಿಯುತ್ತಿದ್ದವರ ಪತ್ತೆಗೆ ಈ ಕಾರ್ಯಾಚರಣೆಯಲ್ಲಿ ಪ್ರಾಮುಖ್ಯತೆ ನೀಡಲಾಗಿತ್ತು ಎಂದು ಹೇಳಲಾಗಿದೆ.

(ದುರ್ಬುದ್ಧಿ) ಬುದ್ಧಿಜೀವಿಗಳ ಸಂಘಟನೆಯಿದು!

(ದುರ್ಬುದ್ಧಿ) ಬುದ್ಧಿಜೀವಿಗಳ ಸಂಘಟನೆಯಿದು!

ಕಾಶ್ಮೀರದಲ್ಲಿ ನಡೆಯುತ್ತಿರುವ ಈ ತೆರೆಮರೆಯ ಪ್ರೇರೇಪಣೆಯು ಅಮೆರಿಕದಲ್ಲಿ ಇಂಥದ್ದೇ ಕೃತ್ಯಗಳನ್ನು ನಡೆಸುತ್ತಿದ್ದ ಸಯ್ಯದ್ ಗುಲಾಮ್ ನಬಿ ಫಾಯ್ ಎಂಬಾತನನ್ನು ನೆನಪಿಸುತ್ತದೆ. ಆತ, ಅಮೆರಿಕದಲ್ಲಿ ಕಾಶ್ಮೀರಿ ಸೆಂಟರ್ ಎಂಬ ಸಂಸ್ಥೆ ನಡೆಸುತ್ತಿದ್ದ. ಪತ್ರಕರ್ತರನ್ನು, ಬುದ್ಧಿಜೀವಿಗಳನ್ನು ಸಮ್ಮೇಳನದ ಹೆಸರುಗಳಲ್ಲಿ ಕರೆಯಿಸಿಕೊಂಡು ಅವರಿಗೆ ಬೇಕಾದ ಸವಲತ್ತುಗಳನ್ನು ನೀಡಿ, ಕಾಶ್ಮೀರದಲ್ಲಿ ಬುಡಮೇಲು ಕೃತ್ಯಗಳಿಗಾಗಿ ಅಲ್ಲಿನ ಜನರನ್ನು ಪ್ರೇರೇಪಿಸಬೇಕೆಂದು ಆಗ್ರಹಿಸುತ್ತಿದ್ದ.

ಅಮೆರಿಕದಲ್ಲಿ ಸಮ್ಮೇಳನ ನಡೆಸುತ್ತಿದ್ದ

ಅಮೆರಿಕದಲ್ಲಿ ಸಮ್ಮೇಳನ ನಡೆಸುತ್ತಿದ್ದ

ಮೂಲತಃ ಕಾಶ್ಮೀರದವನಾದ ಗುಲಾಂ ನಬಿಯು, ಅಮೆರಿಕದಲ್ಲಿ ಕೆಲವಾರು ಬುದ್ಧಿಜೀವಿಗಳ, ಬರಹಗಾರರ, ಪತ್ರಕರ್ತರ ಸಮ್ಮೇಳನಗಳನ್ನು ಆಯೋಜಿಸುತ್ತಿದ್ದ. ಅದರಲ್ಲಿ ಪಾಲ್ಗೊಳ್ಳುವ ಸೋಗಿನಲ್ಲಿ ನಬಿಗೆ ಬೇಕಾದ ಬಹುತೇಕ ಪತ್ರಕರ್ತರು, ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು ಹಾಗೂ ಇತರ ಗಣ್ಯ ವ್ಯಕ್ತಿಗಳು ಬರುತ್ತಿದ್ದರು. ಅವರಿಗೆ ಹಣ, ಅಮೆರಿಕ ಪ್ರವಾಸ, ಐಶಾರಾಮಿ ಹೋಟೆಲ್ ಗಳ ವಾಸ್ತವ್ಯ ಸೇರಿದಂತೆ ಪುಕ್ಕಟೆ ಸವಲತ್ತುಗಳನ್ನು ನೀಡಲಾಗುತ್ತಿತ್ತು.

ಸೌಕರ್ಯಗಳನ್ನು ನೀಡುತ್ತಿದ್ದ

ಸೌಕರ್ಯಗಳನ್ನು ನೀಡುತ್ತಿದ್ದ

ಹಾಗೆ, ನಬಿಯ ಔದಾರ್ಯವನ್ನು ಸವಿಯುತ್ತಿದ್ದವರಿಗೆ ನಬಿ, ಹಣದ ಕಂತೆಗಳನ್ನು ಹಂಚುತ್ತಿದ್ದ. ಕಾಶ್ಮೀರದಲ್ಲಿ ಬುಡಮೇಲು ಕೃತ್ಯಗಳಿಗೆ ಜನರನ್ನು ತಮ್ಮ ಗುಪ್ತ ಬರಹ, ಭಾಷಣಗಳ ಮೂಲಕ ಪ್ರೇರೇಪಿಸಬೇಕೆಂದು ಹೇಳುತ್ತಿದ್ದ. ಒಟ್ಟಾರೆಯಾಗಿ ಈತ ಪಾಕಿಸ್ತಾನದ ಅನಧಿಕೃತ ಉಗ್ರನಂತೆ ವರ್ತಿಸುತ್ತಿದ್ದ. ಕೊನೆಗೊಂದು ದಿನ, ಈತನ ಬಣ್ಣ ಅಮೆರಿಕ ಸರ್ಕಾರಕ್ಕೆ ತಿಳಿದು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ಈಗ ನೂರಾರು ನಬಿಗಳು!

ಈಗ ನೂರಾರು ನಬಿಗಳು!

ನಬಿ ಅಮೆರಿಕದಲ್ಲಿ ಅರೆಸ್ಟ್ ಆದರೂ, ಈಗ ಕಾಶ್ಮೀರದಲ್ಲಿ ನೂರಾರು ನಬಿಗಳು ಹುಟ್ಟಿಕೊಂಡಿದ್ದಾರೆಂದು ಗೃಹ ಸಚಿವಾಲಯ ಹೇಳಿದೆ. ಇವರೆಲ್ಲರನ್ನೂ ಬಂಧಿಸುವ ಸನ್ನಾಹದಲ್ಲಿರುವ ಗೃಹ ಇಲಾಖೆಯು ಮುಂದಿನ ಕ್ರಮಗಳತ್ತ ಆಲೋಚನೆ ನಡೆಸಿದೆ.

English summary
The Centre based on inputs prepared a detailed list of 20 persons including journalists, a retired High Court judge, writers, intellectuals and government officials who have been receiving money through hawala channels to fuel the unrest in Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X