ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಹಂಚಿಕೆಗೆ ಚುನಾವಣಾ ಆಯೋಗದ ಬೂತ್ ಮಟ್ಟದ ಅಧಿಕಾರಿಗಳ ಬಳಕೆ ಸಾಧ್ಯತೆ

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಭಾರತದಲ್ಲಿ ಕೊರೊನಾ ವೈರಸ್ ಲಸಿಕೆಯ ಸಾಮೂಹಿಕ ಹಂಚಿಕೆಗೆ ಚುನಾವಣಾ ಆಯೋಗದ (ಇಸಿಐ) ಚುನಾವಣೆ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಕೇಂದ್ರ ಸರ್ಕಾರ ಬಳಸಿಕೊಳ್ಳುವ ಸಾಧ್ಯತೆ ಇದೆ.

ಪ್ರಧಾನಿ ಕಚೇರಿ, ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯಗಳ ಅಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದು, ಲಸಿಕೆ ಹಂಚಿಕೆಯ ಮಾರ್ಗಗಳ ಕುರಿತಾದ ಸಂಭಾವ್ಯ ಅವಕಾಶಗಳ ಬಗ್ಗೆ ಚರ್ಚಿಸಿದ್ದಾರೆ.

ಮುಂಬೈನಲ್ಲಿ ಲಸಿಕೆಯ ಪ್ರಯೋಗ; ಎರಡನೇ ಡೋಸ್ ಲಸಿಕೆ ಪಡೆಯಲು ಹಿಂದೇಟುಮುಂಬೈನಲ್ಲಿ ಲಸಿಕೆಯ ಪ್ರಯೋಗ; ಎರಡನೇ ಡೋಸ್ ಲಸಿಕೆ ಪಡೆಯಲು ಹಿಂದೇಟು

ಬೂತ್ ಮಟ್ಟದ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ವಿವರಗಳ ಅರಿವು ಇರುತ್ತದೆ. ಹೀಗಾಗಿ ಅವರಿಗೆ ಮನೆಯಿಂದ ಮನೆಗೆ ಲಸಿಕೆ ಹಂಚಿಕೆಯ ಜವಾಬ್ದಾರಿಯನ್ನು ನೀಡಬಹುದಾಗಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ವಿಸ್ತೃತ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ನೀತಿ ಆಯೋಗ ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

 Centre May Rope In Polling Booth Staff For Mass Distribution Of Corona Vaccine

ನೀತಿ ಆಯೋಗದ ಅಧಿಕಾರಿಗಳು ಕೂಡ ಬೂತ್ ಮಟ್ಟದ ಅಧಿಕಾರಿಗಳನ್ನು ಬಳಸಿಕೊಂಡರೆ ಲಸಿಕೆ ವಿತರಣೆ ಸುಲಭವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಎಲ್‌ಒಗಳಿಗೆ ಸ್ಥಳೀಯ ಜನರ ಹೆಸರು, ವಿಳಾಸ ಮತ್ತು ವಯೋಮಾನದ ಮಾಹಿತಿಗಳು ತಿಳಿದಿರುತ್ತವೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಲಸಿಕೆ: ಮಹತ್ವದ ಹೋರಾಟದಲ್ಲಿ ಭಾರತದ ಮುಂದಾಳತ್ವ, ಶ್ರೀಮಂತ ದೇಶಗಳ ವಿರೋಧಕೋವಿಡ್ ಲಸಿಕೆ: ಮಹತ್ವದ ಹೋರಾಟದಲ್ಲಿ ಭಾರತದ ಮುಂದಾಳತ್ವ, ಶ್ರೀಮಂತ ದೇಶಗಳ ವಿರೋಧ

ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸೇರಿದಂತೆ ವಿವಿಧ ಕಂಪೆನಿಗಳು ಲಸಿಕೆ ಉತ್ಪಾದನೆಯನ್ನು ತೀವ್ರಗೊಳಿಸಿವೆ. ಲಸಿಕೆಯ ಸಂಗ್ರಹ ಮತ್ತು ಹಂಚಿಕೆ ವ್ಯವಸ್ಥೆಗಳು ಹೇಗಿರಲಿವೆ ಎಂಬುದು ಕುತೂಹಲ ಮೂಡಿಸಿದೆ. ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಮತ್ತು ವಿಜ್ಞಾನಿಗಳು ಲಸಿಕೆ ಉತ್ಪಾದಕರಿಗೆ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ ಭಾರತವು ಮೊದಲು 30ಕೋಟಿ ಆಯ್ದ ಜನರ ಗುಂಪಿಗೆ ಲಸಿಕೆ ನೀಡುವುದನ್ನು ಆರಂಭಿಸಲಿದೆ.

Recommended Video

Corona ಸಮಯದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ದಾಖಲಾದ ಪ್ರಕರಣಗಳೆಷ್ಟು ಗೊತ್ತಾ? | Oneindia Kannada

English summary
Central government likely to rope in polling booth level officers of the election commission for mass distributed of Covid-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X