ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಉದ್ದೇಶಪೂರ್ವಕ ಕೃತ್ಯ': ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ನೋಟಿಸ್

|
Google Oneindia Kannada News

ನವದೆಹಲಿ, ನವೆಂಬರ್ 11: ಲೇಹ್ ಪ್ರದೇಶವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಬದಲಾಗಿ ಜಮ್ಮು ಮತ್ತು ಕಾಶ್ಮೀರದ ಭಾಗ ಎಂದು ತೋರಿಸಿರುವ ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ವಿವರಣೆ ಕೇಳಿರುವ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯ, ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಅಗೌರವಿಸಿದ್ದಕ್ಕಾಗಿ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂದು ಪ್ರಶ್ನಿಸಿದೆ.

ಟ್ವಿಟ್ಟರ್‌ನ ಜಾಗತಿಕ ಉಪಾಧ್ಯಕ್ಷರಿಗೆ ಈ ನೋಟಿಸ್ ರವಾನಿಸಲಾಗಿದೆ. ಟ್ವಿಟ್ಟರ್‌ನ ಈ ಪ್ರಮಾದವು ಭಾರತೀಯ ಸಂಸತ್‌ನ ಸಾರ್ವಭೌಮತೆಯ ಸಂಕಲ್ಪವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಕೃತ್ಯ ಎಂದು ಅದರಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಲಡಾಖ್ಅನ್ನು ಚೀನಾದಲ್ಲಿ ತೋರಿಸಿದ ವಿವಾದಕ್ಕೆ ಅಸಮರ್ಪಕ ಉತ್ತರ ನೀಡಿದ ಟ್ವಿಟ್ಟರ್ಲಡಾಖ್ಅನ್ನು ಚೀನಾದಲ್ಲಿ ತೋರಿಸಿದ ವಿವಾದಕ್ಕೆ ಅಸಮರ್ಪಕ ಉತ್ತರ ನೀಡಿದ ಟ್ವಿಟ್ಟರ್

ಲಡಾಖ್ ಅನ್ನು ಭಾರತದ ಕೇಂದ್ರಾಡಳಿತ ಪ್ರದೇಶ ಎಂದು ವಿಭಜಿಸಿದ್ದ ಸರ್ಕಾರ ಲೇಹ್‌ಅನ್ನು ಅದರ ಕೇಂದ್ರ ಕಚೇರಿಯನ್ನಾಗಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್ ವಕ್ತಾರ, ಭಾರತ ಸರ್ಕಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಭಾಗಿತ್ವಕ್ಕೆ ಟ್ವಿಟ್ಟರ್ ಬದ್ಧವಾಗಿದೆ. ಈ ಸಮಸ್ಯೆಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Centre Issues Notice To Twitter For Showing Leh As Part Of Jammu & Kashmir

ಲೇಹ್ ಚೀನಾಕ್ಕೆ ಸೇರಿದೆ ಎಂದ ಟ್ವಿಟ್ಟರ್‌ಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರ ಲೇಹ್ ಚೀನಾಕ್ಕೆ ಸೇರಿದೆ ಎಂದ ಟ್ವಿಟ್ಟರ್‌ಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರ

ಭಾರತದ ಭೌಗೋಳಿಕ ಪ್ರದೇಶವನ್ನು ತೋರಿಸುವ ವಿಚಾರದಲ್ಲಿ ಟ್ವಿಟ್ಟರ್ ಪದೇ ಪದೇ ಯಡವಟ್ಟುಗಳನ್ನು ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಲೇಹ್ ಅನ್ನು ಚೀನಾದ ಭಾಗ ಎಂದು ತೋರಿಸುವ ಮೂಲಕ ಇತ್ತೀಚೆಗೆ ಪ್ರಮಾದ ಎಸಗಿತ್ತು. ತೀವ್ರ ಆಕ್ಷೇಪದ ಬಳಿಕ ಟ್ವಿಟ್ಟರ್ ಅದನ್ನು ಸರಿಪಡಿಸಿತ್ತು. ಆದರೆ ಲೇಹ್ ಅನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗ ಎಂದು ತೋರಿಸುವಂತೆ ಸರಿಪಡಿಸಿಲ್ಲ. ಬದಲಾಗಿ ಅದನ್ನು ಜಮ್ಮು ಮತ್ತು ಕಾಶ್ಮೀರದ ಭಾಗ ಎಂದು ತೋರಿಸುತ್ತಿದೆ.

English summary
Center has issued notice to Twitter for showing Leh as part of Jammu and Kashmir instead of Ladakh union territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X