ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ಇಳಿಸಲು ಕೇಂದ್ರ ಪ್ರಯತ್ನ ನಡೆಸುತ್ತಿದೆ: ರಾಜನಾಥ್ ಸಿಂಗ್

|
Google Oneindia Kannada News

ಭೋಪಾಲ್, ಮೇ 31: ಪ್ರತಿದಿನವೂ ತೈಲ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗುತ್ತಿದ್ದಾರೆ. ಆದರೆ, ಜನರು ಗಾಬರಿ ಪಡುವುದು ಬೇಡ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಲ್ಲಿ ಹೆಚ್ಚಳವಾಗುತ್ತಿದೆ. ಆದರೆ, ಜಾಗತಿಕ ತೈಲ ಬೆಲೆ ಏರಿಕೆಯು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿಲ್ಲ ಎಂದಿದ್ದಾರೆ.

ಭವಿಷ್ಯದ ಅತಿ ದೊಡ್ಡ ಗೆಲುವು ಸಾಧಿಸುತ್ತೇವೆ: ರಾಜನಾಥ್ ಸಿಂಗ್ ಭವಿಷ್ಯದ ಅತಿ ದೊಡ್ಡ ಗೆಲುವು ಸಾಧಿಸುತ್ತೇವೆ: ರಾಜನಾಥ್ ಸಿಂಗ್

ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವ ಅಂಶಗಳನ್ನು ಸರಿಪಡಿಸಿ, ಜನಸಾಮಾನ್ಯರಿಗೆ ಆಗಿರುವ ಹೊರೆಯನ್ನು ತಗ್ಗಿಸಲು ಪ್ರಯತ್ನ ನಡೆಸಿದೆ. ಹೀಗಾಗಿ ಜನರು ಕಂಗೆಡುವ ಅಗತ್ಯವಿಲ್ಲ ಎಂದರು.

centre is trying to resolve fuel price hike rajnath singh

ನವದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 78.35 ರೂ. ಇದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 69.25ಕ್ಕೆ ತಲುಪಿದೆ.

16 ದಿನಗಳ ಸತತ ಬೆಲೆ ಏರಿಕೆ ಬಳಿಕ ಬುಧವಾರ ಪೆಟ್ರೋಲ್ ದರದಲ್ಲಿ ಕೇವಲ ಒಂದು ಪೈಸೆ ಇಳಿಕೆಯಾಗಿತ್ತು. ಇದು ರಾಷ್ಟ್ರಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

English summary
Home Minister Rajnath Singh said that the government is trying to solve the fuel price hike. So that the public doesn't suffer he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X