ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಕೊರೊನಾ ಹೆಚ್ಚಳ; ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ

|
Google Oneindia Kannada News

ನವದೆಹಲಿ, ಫೆಬ್ರವರಿ 20: ದೇಶದಲ್ಲಿ ಕೊರೊನಾ ಸೋಂಕು ತಗ್ಗಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಕೆಲವು ರಾಜ್ಯಗಳಲ್ಲಿ ಇದ್ದಕ್ಕಿದ್ದಂತೆ ಸೋಂಕಿನ ಪ್ರಮಾಣ ಅಧಿಕವಾಗಿದೆ. ಕಳೆದ ಏಳು ದಿನಗಳಿಂದ ದಿನನಿತ್ಯ ದಾಖಲಾಗುತ್ತಿರುವ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.

ಕೊರೊನಾ ಸೋಂಕಿಗೆ ವಿರುದ್ಧವಾಗಿ ದೇಶಾದ್ಯಂತ ಲಸಿಕೆ ನೀಡಲಾಗುತ್ತಿದ್ದು, ಈಚೆಗೆ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿತ್ತು. ಮರಣ ಪ್ರಮಾಣ ಕಡಿಮೆಯಾಗುತ್ತಿತ್ತು. ಸಕ್ರಿಯ ಪ್ರಕರಣಗಳು ತಗ್ಗಿದ್ದು, ಹೊಸ ಪ್ರಕರಣಗಳು ಇಳಿಕೆಯಾಗುತ್ತಿದ್ದವು. ಆದರೆ ಐದು ರಾಜ್ಯಗಳಲ್ಲಿ ಮಾತ್ರ ದಿಢೀರನೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಪಾಲಿಸುವಂತೆ ಐದು ರಾಜ್ಯಗಳಿಗೆ ಸೂಚನೆ ನೀಡಿದೆ. ಮುಂದೆ ಓದಿ...

ಕೊರೊನಾ ವೈರಸ್: ದೇಶದಲ್ಲಿ 23 ದಿನಗಳಲ್ಲಿಯೇ ಅತ್ಯಧಿಕ ಪ್ರಕರಣ ದಾಖಲುಕೊರೊನಾ ವೈರಸ್: ದೇಶದಲ್ಲಿ 23 ದಿನಗಳಲ್ಲಿಯೇ ಅತ್ಯಧಿಕ ಪ್ರಕರಣ ದಾಖಲು

 ಕೊರೊನಾ ಪ್ರಕರಣ ಏರುತ್ತಿರುವ 5 ರಾಜ್ಯಗಳಾವುವು?

ಕೊರೊನಾ ಪ್ರಕರಣ ಏರುತ್ತಿರುವ 5 ರಾಜ್ಯಗಳಾವುವು?

ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ ಗಡ ಹಾಗೂ ಮಧ್ಯ ಪ್ರದೇಶದಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ದೇಶದಲ್ಲಿಯೇ ಈ ಐದು ರಾಜ್ಯಗಳಲ್ಲಿ ಪ್ರತಿದಿನ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹೀಗಾಗಿ ಐದು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

 ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್‌ಗೆ ಚಿಂತನೆ

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್‌ಗೆ ಚಿಂತನೆ

ಮಹಾರಾಷ್ಟ್ರದಲ್ಲಿ ಕಳೆದ ವಾರದಿಂದೀಚೆಗೆ ದಿನನಿತ್ಯದ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಮೂರು ಮುಖ್ಯ ನಗರಗಳಲ್ಲಿ ಮತ್ತೆ ಲಾಕ್‌ಡೌನ್ ವಿಧಿಸುವ ಕುರಿತು ಚಿಂತಿಸಲಾಗುತ್ತಿದೆ. ಶನಿವಾರ ಮಹಾರಾಷ್ಟ್ರದಲ್ಲಿ 6,112 ಹೊಸ ಪ್ರಕರಣಗಳು ದಾಖಲಾಗಿವೆ. ಸ್ಥಳೀಯ ರೈಲು ಓಡಾಟ ಆರಂಭಿಸಿದ ನಂತರ ಸೋಂಕಿನ ಪ್ರಕರಣ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಹೀಗಾಗಿ ಕೆಲವು ದಿನಗಳ ಪರಿಶೀಲನೆ ನಂತರ ಲಾಕ್ ಡೌನ್ ಕುರಿತು ಚಿಂತಿಸಲಾಗುತ್ತದೆ ಎಂದು ತಿಳಿಸಿದೆ.
ಮುಂಬೈನ ಅಮರಾವತಿ ಹಾಗೂ ಯವತ್ಮಾಲ್‌ ನಗರಗಳಲ್ಲಿ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್, ಮದುವೆ, ಸಾರ್ವಜನಿಕ ಸಭೆ ಸೇರದಂತೆ ಸೂಚಿಸಿದ್ದಾರೆ. ಇದರೊಂದಿಗೆ 300 ಮಾರ್ಷಲ್ ಗಳನ್ನು ನಿಯೋಜಿಸಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲೆಕ್ಕಾಚಾರ: 35 ದಿನಗಳ ಮಾಹಿತಿಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲೆಕ್ಕಾಚಾರ: 35 ದಿನಗಳ ಮಾಹಿತಿ

 ಪಂಜಾಬ್‌ನಲ್ಲೂ ಇದ್ದಕ್ಕಿದ್ದಂತೆ ಏರಿಕೆಯಾದ ಸೋಂಕು

ಪಂಜಾಬ್‌ನಲ್ಲೂ ಇದ್ದಕ್ಕಿದ್ದಂತೆ ಏರಿಕೆಯಾದ ಸೋಂಕು

ಮಹಾರಾಷ್ಟ್ರದಂತೆ ಪಂಜಾಬ್‌ನಲ್ಲಿಯೂ ದಿಢೀರನೆ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಕಳೆದ ಏಳು ದಿನಗಳಿಂದ ಪ್ರಕರಣಗಳು ಏರಿಕೆಯಾಗಿದೆ. ಶನಿವಾರ ಪಂಜಾಬ್‌ನಲ್ಲಿ 383 ಹೊಸ ಪ್ರಕರಣಗಳು ದಾಖಲಾಗಿವೆ. ಫೆ.13ರಿಂದ ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿಯೂ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಸರ್ಕಾರ ಹೇಳಿಕೆ ನೀಡಿದೆ.

 ಐದು ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

ಐದು ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

ಕೊರೊನಾ ಲಸಿಕೆಗಳನ್ನು ನೀಡುತ್ತಿರುವ ಈ ಹೊತ್ತಿನಲ್ಲಿ ಮತ್ತೆ ಪ್ರಕರಣಗಳ ಏರಿಕೆ ಕಂಡುಬರುತ್ತಿರುವುದು ಸರ್ಕಾರಕ್ಕೆ ತಲೆ ನೋವಾಗಿದೆ. ರೂಪಾಂತರ ಸೋಂಕಿನ ಪ್ರಕರಣಗಳೂ ಕಂಡುಬರುತ್ತಿರುವುದರಿಂದ ಇನ್ನಷ್ಟು ನಿಗಾ ವಹಿಸಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಿರುವ ಈ ಐದು ರಾಜ್ಯಗಳಿಗೆ ಕೊರೊನಾ ಮಾರ್ಗಸೂಚಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕೆಂದು ಕೇಂದ್ರ ಸೂಚಿಸಿದೆ.

 ದೇಶದಲ್ಲಿ 23 ದಿನಗಳಲ್ಲಿಯೇ ಅತ್ಯಧಿಕ ಪ್ರಕರಣ ದಾಖಲು

ದೇಶದಲ್ಲಿ 23 ದಿನಗಳಲ್ಲಿಯೇ ಅತ್ಯಧಿಕ ಪ್ರಕರಣ ದಾಖಲು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 13,993 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ 23 ದಿನಗಳಲ್ಲಿಯೇ, ಅಂದರೆ ಜನವರಿ 29ರ ನಂತರ ದಾಖಲಾದ ಅತಿ ಹೆಚ್ಚಿನ ಪ್ರಕರಣ ಇದಾಗಿದೆ. ಕಳೆದ ಮೂರು ದಿನಗಳಿಂದ ದೇಶದಲ್ಲಿ ದಾಖಲಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಸಕ್ರಿಯ ಪ್ರಕರಣಗಳಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಕೊರೊನಾ ವೈರಸ್ ನಿಯಂತ್ರಣದಲ್ಲಿ ಯಶಸ್ಸಿನ ಹಾದಿಯಲ್ಲಿದ್ದ ಭಾರತಕ್ಕೆ ಇದು ತೀವ್ರ ಹಿನ್ನಡೆಯಾಗಿದೆ.

English summary
Central government has instructed Five states over rising coronavirus daily cases,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X