ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲೆಗಡುಕ ಪೂಜಾರಿಯಾದ ಕೇಂದ್ರ ಸರ್ಕಾರ: ಕಾಂಗ್ರೆಸ್ ಟೀಕೆ

|
Google Oneindia Kannada News

ನವದೆಹಲಿ, ಜುಲೈ 8: ಮಾಂಸ ವ್ಯಾಪಾರಿಯೊಬ್ಬನ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಎಂಟು ಮಂದಿಗೆ ಹೂವಿನ ಹಾರ ಹಾಕಿ ಅಭಿನಂದಿಸಿದ್ದ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರನ್ನು ಟೀಕಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರವು ಕೊಲೆಗಡುಕರನ್ನು ಆರಾಧಿಸುವ ಪೂಜಾರಿಯಾಗಿ ಬದಲಾಗಿದೆ ಎಂದು ಹೇಳಿದೆ.

ಎಂಟು ಆರೋಪಿಗಳಿಗೆ ಜಾಮೀನು ಸಿಕ್ಕಾಗ ಅವರನ್ನು ಜಯಂತ್ ಸಿನ್ಹಾ ಅವರು ಹೂವಿನ ಹಾರ ಹಾಕಿ ಅಭಿನಂದಿಸಿದ್ದರು. ನೀವು ತಪ್ಪಾಗಿ ತಿಳಿದಿದ್ದೀರಿ ಮೋದಿಜಿ. ನಿಮ್ಮ ಸರ್ಕಾರ ಕೊಲೆಗಡುಕ-ಪೂಜಾರಿಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.

ಲೋಕಸಭೆ, ವಿಧಾನಸಭೆ ಏಕಕಾಲದ ಚುನಾವಣೆಗೆ ಎಸ್‌ಪಿ, ಟಿಆರ್‌ಎಸ್‌ ಬೆಂಬಲಲೋಕಸಭೆ, ವಿಧಾನಸಭೆ ಏಕಕಾಲದ ಚುನಾವಣೆಗೆ ಎಸ್‌ಪಿ, ಟಿಆರ್‌ಎಸ್‌ ಬೆಂಬಲ

ಕಾಂಗ್ರೆಸ್‌ನ ಅನೇಕ ಪ್ರಮುಖ ಮುಖಂಡರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಶನಿವಾರ ಭಾಷಣವೊಂದರಲ್ಲಿ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಒಂದು 'ಬೇಲ್ ಗಾಡಿ' ಎಂದು ಲೇವಡಿ ಮಾಡಿದ್ದರು.

ಅದಕ್ಕೆ ಪ್ರತಿಯಾಗಿ ಕಪಿಲ್ ಸಿಬಲ್ ಅವರು ಈ ಟ್ವೀಟ್ ಮಾಡಿದ್ದಾರೆ.

ಜಾರ್ಖಂಡ್‌ನಲ್ಲಿ ಕಳೆದ ವರ್ಷ ನಡೆದ ಮಾಂಸ ವ್ಯಾಪಾರಿಯೊಬ್ಬನ ಹತ್ಯೆ ಪ್ರಕರಣದಲ್ಲಿ ರಾಮಗಡದ ನ್ಯಾಯಾಲಯವೊಂದು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಮೀಸೆ ಇಲ್ಲದೆ ಗಡ್ಡ ಬಿಟ್ಟ ಮುಸ್ಲಿಮರು ಮೂಲಭೂತವಾದಿಗಳು: ರಿಜ್ವಿಮೀಸೆ ಇಲ್ಲದೆ ಗಡ್ಡ ಬಿಟ್ಟ ಮುಸ್ಲಿಮರು ಮೂಲಭೂತವಾದಿಗಳು: ರಿಜ್ವಿ

ಅದರಲ್ಲಿ ಜಾಮೀನು ಪಡೆದಿದ್ದ ಎಂಟು ಮಂದಿಗೆ ಜಯಂತ್ ಸಿನ್ಹಾ ಅವರು ಅಭಿನಂದಿಸಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Centre has become lynch-pujari: kapil sibal

ಮಗನ ಈ ನಡವಳಿಕೆಗೆ ಜಯಂತ್ ಅವರ ತಂದೆ ಯಶ್ವಂತ್ ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿಂದೆ ನಾನು 'ಲಾಯಕ್ ಮಗ'ನ 'ನಾಲಾಯಕ್ ಅಪ್ಪ'ನಾಗಿದ್ದೆ. ಆದರೆ ಈಗ ಪಾತ್ರಗಳು ಬದಲಾಗಿವೆ. ನನ್ನ ಮಗನ ನಡವಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದರು.

English summary
Congress senior leader Kapil Sibal criticised that the Centre has become Lynch Pujari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X