ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕ ನೀತಿ ಬದಲು, ಇನ್ಮುಂದೆ ವಾರಕ್ಕೆ 4 ದಿನ ಮಾತ್ರ ಕಚೇರಿ ಕೆಲಸ!

|
Google Oneindia Kannada News

ನವದೆಹಲಿ, ಫೆಬ್ರವರಿ 9: ವಾರಕ್ಕೆ 48 ಗಂಟೆಗಳ ಕೆಲಸ ಅಥವಾ ವಾರದಲ್ಲಿ 4 ದಿನಗಳ ಕೆಲಸ ವಿಧಿಸುವ ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದಾರೆ. ದೇಶದಲ್ಲಿ ಉದ್ಯೋಗಿಗಳ ಕಾರ್ಯ ವಿಧಾನ ಹಾಗೂ ಪರಿಸರದಲ್ಲಿ ಭಾರಿ ಬದಲಾವಣೆಯಾಗಿದ್ದು, ಇದಕ್ಕೆ ತಕ್ಕಂತೆ ಸರ್ಕಾರ ಹೊಸ ನೀತಿಗಳನ್ನು ಜಾರಿಗೆ ತರಲಿದೆ ಎಂದು ಹೇಳಿದರು.

ದಿನಕ್ಕೆ 12 ಗಂಟೆ ಅವಧಿ ಕೆಲಸದಂತೆ ವಾರಕ್ಕೆ 4 ದಿನ, ದಿನಕ್ಕೆ 10 ಗಂಟೆ ಅವಧಿ ಕೆಲಸದಂತೆ ವಾರಕ್ಕೆ 5 ದಿನ ಅಥವಾ 8 ಗಂಟೆ ಪ್ರತಿದಿನದ ಕೆಲಸದಂತೆ ವಾರಕ್ಕೆ 6 ದಿನಗಳ ಕೆಲಸ ವಿಧಿಸಲು ಸಂಸ್ಥೆಗಳಿಗೆ ಅನುಮತಿ ಸಿಗಲಿದೆ ಎಂದು ಚಂದ್ರ ಹೇಳಿದರು. ಹೊಸ ಕಾರ್ಮಿಕ ನೀತಿ ಇನ್ನೂ ಅಂತಿಮಗೊಂಡಿಲ್ಲ, ಇನ್ನಷ್ಟು ಬದಲಾವಣೆಯನ್ನು ನಿರೀಕ್ಷಿಸಬಹುದು. ಕಾರ್ಮಿಕರ ಕೆಲಸದ ಅವಧಿ, ಸಂಬಳ, ಕೈಗಾರಿಕೆ ಸಂಬಂಧ, ಸುರಕ್ಷತೆ, ಆರೋಗ್ಯ ಹಾಗೂ ಉದ್ಯೋಗ ಸ್ಥಳದ ವಾತಾವರಣ, ಸಾಮಾಜಿಕ ಸುರಕ್ಷತೆ ನೀತಿ ನಿಬಂಧನೆಗಳನ್ನು ಅಂತಿಮಗೊಳಿಸಲಾಗುತ್ತಿದೆ.

ಕೊರೊನಾದಿಂದ 40 ಕೋಟಿ ಕಾರ್ಮಿಕರು ಮತ್ತಷ್ಟು ಬಡತನದ ಕೂಪಕ್ಕೆ!ಕೊರೊನಾದಿಂದ 40 ಕೋಟಿ ಕಾರ್ಮಿಕರು ಮತ್ತಷ್ಟು ಬಡತನದ ಕೂಪಕ್ಕೆ!

ಈ ನಡುವೆ ಅಸಂಘಟಿತ ಕಾರ್ಮಿಕರ ಬಗ್ಗೆ ಮೋದಿ ಸರ್ಕಾರ ಕಾಳಜಿ ವಹಿಸಿದ್ದು, ಜೂನ್ ತಿಂಗಳಲ್ಲಿ ಆನ್ ಲೈನ್ ಪೋರ್ಟಲ್ ಹೊರ ತರಲಾಗುತಿದ್ದು, ಈ ವಲಯದ ಕಾರ್ಮಿಕರು ಆನ್ ಲೈನ್ ನಲ್ಲಿ ನೋಂದಣಿಯಿಸಿಕೊಂಡು ಪ್ರಯೋಜನ ಪಡೆಯಬಹುದು. ಇದು ವಲಸೆ ಕಾರ್ಮಿಕರಿಗೆ ಮುಖ್ಯವಾಗಿ ನೆರವಿಗೆ ಬರಲಿದೆ ಎಂದರು.

Centre Govts new labour codes to allow 4-day work per week

ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ವರ್ಷದ ಅವಧಿಗೆ ಅಪಘಾತ, ಅಂಗವೈಕಲ್ಯ ತೊಂದರೆಗೆ ಪರಿಹಾರ ಕೂಡಾ ಲಭಿಸಲಿದೆ ಎಂದು ಹೇಳಿದರು.

English summary
The Centre govt under its new labour codes would soon provide an option for organisations to allow their employees to work for four days in a week. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X