• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಮ್ಡೆಸಿವಿರ್ ಔಷಧಿ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರದ ನಿರ್ಬಂಧ

|

ನವದೆಹಲಿ, ಏಪ್ರಿಲ್ 11: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕೆ ಬರುವವರೆಗೂ ರೆಮ್ಡೆಸಿವಿರ್ ಇಂಜೆಕ್ಷನ್ ಮತ್ತು ರೆಮ್ಡೆಸಿವಿರ್ ಆಕ್ಟಿವ್ ಫಾರ್ಮಾಸೆಟಿಕಲ್ ಸರಕುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ರೆಮ್ಡೆಸಿವಿರ್ ಎಲ್ಲಾ ದೇಶೀಯ ಉತ್ಪಾದಕರು ತಮ್ಮ ವೆಬ್‌ಸೈಟ್‌ನಲ್ಲಿ ಔಷಧಿಯ ಲಭ್ಯತೆ, ಸಂಗ್ರಹ ಮತ್ತು ವಿತರಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಲಾಗಿದೆ.

Corona Alert: ಯಾವ ರಾಜ್ಯಗಳು ಅತಿಹೆಚ್ಚು ಅಪಾಯ ಎದುರಿಸುತ್ತಿವೆ?

ಔಷಧಿಗಳ ಸಂಗ್ರಹ ಮತ್ತು ಲಭ್ಯತೆ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅದರ ಮೇಲ್ವಿಚಾರಣೆ ಮತ್ತು ವಿತರಣೆ ಬಗ್ಗೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಲಿದ್ದಾರೆ. ಆ ಮೂಲಕ ಕಳ್ಳ ದಾರಿಯಲ್ಲಿ ಔಷಧಿ ಮಾರಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

10 ಪಟ್ಟು ಹೆಚ್ಚು ಬೆಲೆಗೆ ಔಷಧಿ ಮಾರಾಟ:

ಕೊರೊನಾವೈರಸ್ ಸೋಂಕಿನ ಏರಿಕೆ ಮಧ್ಯೆ ರೆಮ್ಡೆಸಿವಿರ್ ಔಷಧಿಗೆ ಬೇಡಿಕೆ ಹೆಚ್ಚಾಗಿದ್ದು, ಕಪ್ಪು ಮಾರುಕಟ್ಟೆಯಲ್ಲಿ 10 ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ದೂರು ಸಲ್ಲಿಕೆಯಾಗಿತ್ತು.

ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾವೈರಸ್:

ದೇಶದಲ್ಲಿ ಒಂದೇ ದಿನ 1,52,879 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಹೊಸ ದಾಖಲೆಯಾಗಿದೆ. ಕಳೆದ 24 ಗಂಟೆಗಳಲ್ಲಿ 839 ಜನರು ಮಹಾಮಾರಿಗೆ ಬಲಿಯಾಗಿದ್ದರೆ, 90,584 ಸೋಂಕಿತರು ಗುಣಮುಖರಾಗಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,33,58,805ಕ್ಕೆ ಏರಿಕೆಯಾಗಿದೆ. ಈವರೆಗೂ 1,20,81,443 ಸೋಂಕಿತರು ಗುಣಮುಖರಾಗಿದ್ದು, 1,69,275 ಮಂದಿ ಪ್ರಾಣ ಬಿಟ್ಟಿದ್ದಾರೆ. 11,08,087 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

English summary
Centre Govt Prohibits Export Of Remdesivir Till Coronavirus Situation Improves In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X