• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ವಶಪಡಿಸಿಕೊಂಡಿರುವ ಭೂಮಿಯನ್ನು ಮರಳಿ ಪಡೆಯುವುದು ಯಾವಾಗ?: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಆಗಸ್ಟ್ 02: ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಒಂದಲ್ಲಾ ಒಂದು ಕಾರಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯುತ್ತಲೇ ಇದ್ದಾರೆ. ಇದೀಗ ಚೀನಾ-ಭಾರತ ಗಡಿಗೆ ಸಂಬಂಧಿಸಿದಂತೆ ನಮೋ ವಿರುದ್ಧ ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬೆಂಬಲಿಗರು ಭಾರತದ ಸಾವಿರಾರು ಕಿಲೋಮೀಟರ್​ ಭೂ ಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಿದ್ದಾರೆ. ನಾವು ಅದನ್ನು ಯಾವಾಗ ಮರಳಿ ಪಡೆಯುತ್ತೇವೆ? ಎಂದು ಪ್ರಶ್ನಿಸಿದ್ದಾರೆ.

ಪೆಗಾಗಸ್ ಹಗರಣ: ಅಣಕು ಸಂಸತ್ತನ್ನು ನಡೆಸಲು ವಿಪಕ್ಷಗಳಿಂದ ಚಿಂತನೆ, ನಾಳೆ ಸಭೆಪೆಗಾಗಸ್ ಹಗರಣ: ಅಣಕು ಸಂಸತ್ತನ್ನು ನಡೆಸಲು ವಿಪಕ್ಷಗಳಿಂದ ಚಿಂತನೆ, ನಾಳೆ ಸಭೆ

ಅಗತ್ಯವಸ್ತುಗಳ ದರ ಏರಿಕೆ, ಕೋವಿಡ್ ನಿರ್ವಹಣೆ, ಲಸಿಕೆ ಕೊರತೆ ವಿಚಾರ ಸೇರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಚರ್ಚೆಯ ಫಲಿತಾಂಶದ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಉಭಯ ರಾಷ್ಟ್ರಗಳ ನಡುವೆ ನಡೆದ ನಿರಂತರ ಮಾತುಕತೆಯಿಂದಾಗಿ ಪಾಂಗಾಂಗ್ ಸರೋವರದಿಂದ ಸೇನೆಗಳು ಹಿಂದೆ ಸರಿದಿವೆ.

ಕೆಲವು ದಿನಗಳ ಹಿಂದಷ್ಟೇ ಈ ಕುರಿತು ಮತ್ತೊಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಚೀನಾದ ಕ್ರಮಗಳನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎಂದು ಹೇಳಿದ್ದರು.

ಚೀನಾವನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವುಗಳು ಇಲ್ಲ, ಸರ್ಕಾರದ ದಿಟ್ಟತನದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದಿದ್ದರು. ಭಾರತ ಮತ್ತು ಚೀನಾ ನಡುವಿನ ಕಾರ್ಪ್ಸ್​ ಕಮಾಂಡರ್ ಮಟ್ಟದ ಸಭೆ ಶನಿವಾರ ಸಂಜೆ ಗಡಿ ನಿಯಂತ್ರಣ ರೇಖೆಯ ಮೊಲ್ಡೊ ಪ್ರದೇಶದಲ್ಲಿ ನಡೆಯಿತು.

ಸತತ 9 ಗಂಟೆಗಳ ಸುದೀರ್ಘ ಮಾತುಕತೆಯ ಸಮಯದಲ್ಲಿ ಪೂರ್ವ ಲಡಾಖ್​​ನ ಹಾಟ್ ಸ್ಪ್ರಿಂಗ್ಸ್, ಗೋಗ್ರಾ ಸೇರಿ ಇತರೆ ಪ್ರದೇಶಗಳಲ್ಲಿರುವ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಭಾರತವು ಚೀನಾಗೆ ಒತ್ತಾಯಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‌ನ ಡೆಮ್‌ಚೊಕ್‌ನಲ್ಲಿ ಇನ್ನೂ ಚೀನಾದ ಟೆಂಟ್‌ಗಳಿವೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಉಲ್ಲೇಖಿಸಿದ್ದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಕೂಡ ಇದೇ ವಿಷಯದ ಬಗ್ಗೆ ಸರ್ಕಾರದ ಧೋರಣೆಯನ್ನು ಟೀಕಿಸಿದ್ದರು.
ನಮ್ಮ ಭೂಮಿಯಿಂದ ಚೀನಾ ತೆಗೆದು ಹಾಕಿ ಎನ್ನುವ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದ ಅವರು, ಸಾಹೇಬ್ ನಿಮ್ಮ ದಿಟ್ಟತನ ಪ್ರದರ್ಶಿಸಿ ಎಂದು ಹೇಳಿದ್ದರು.

ಭಾರತ ಹಾಗೂ ಚೀನಾ ನಡುವಿನ ಸಂಬಂಧದಲ್ಲಿ ಗಲ್ವಾನ್‌ ಹಿಂಸಾತ್ಮಕ ಸಂಘರ್ಷ ಗೇಮ್‌ ಚೇಂಜರ್‌ ಆಗಿ ಪರಿಣಮಿಸಿತ್ತು. 2020ರ ಜೂನ್ 15-16 ರಂದು ಗಾಲ್ವಾನ್‌ ಕಣಿವೆಯ ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್‌ಎಸಿ) ಬಳಿ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ನಡುವೆ ಕಾಳಗ ನಡೆದಿತ್ತು.

ಹಿಂಸಾತ್ಮಕ ರೂಪ ಪಡೆದಿದ್ದ ಈ ಸಂಘರ್ಷದಲ್ಲಿ ಊಭಯ ರಾಷ್ಟ್ರಗಳ ಸೈನಿಕರು ಗಾಯಗೊಂಡಿದ್ದರು. ಈ ಸಂಘರ್ಷ ನಡೆದ ಒಂದು ವರ್ಷದಲ್ಲಿ ಚೀನಾ ಹಾಗೂ ಭಾರತದ ನಡುವೆ ನಡೆದ ಚಟುವಟಿಕೆಗಳು ಕೇವಲ ಉಭಯ ರಾಷ್ಟ್ರಗಳ ನಡುವಿನ ಕಾರ್ಯಾಚರಣೆ ಮತ್ತು ಕಾರ್ಯತಂತ್ರದಲ್ಲಿ ವ್ಯತ್ಯಾಸವನ್ನುಂಟು ಮಾಡಿದ್ದು ಮಾತ್ರವಲ್ಲದೇ, ಆದರೆ ಇಡೀ ಪ್ರಪಂಚದ ಭೌಗೋಳಿಕ ರಾಜಕೀಯ ಪರಿಸರದ ಮೇಲೂ ಪರಿಣಾಮ ಬೀರಿತು.

ಉಭಯ ದೇಶಗಳ ಉನ್ನತ ನಾಯಕರ ನಡುವೆ ಸ್ನೇಹಯುತ ಮಾತು ನಡೆಯುತ್ತಿದ್ದ ನಡುಯುತ್ತಿತ್ತು. ಹೀಗಿದ್ದರೂ ಭಾರತ ಕೊರೋನಾ ಮೊದಲ ಅಲೆಯ ಹೊಡೆತಕ್ಕೆ ಸಿಲುಕಿಕೊಂಡಾಗಲೇ 2020ರ ಏಪ್ರಿಲ್‌ನಿಂದ ಮೇ ತಿಂಗಳ ನಡುವಿನ ಅಂತರದಲ್ಲಿ ಚೀನಾ ಆತಂಕ ಸೃಷ್ಟಿಸುವ ಯತ್ನ ನಡೆಸಿತು.

ಇದಕ್ಕೆ ಸಂಪೂರ್ಣ ಯೋಜನೆ ರೂಪಿಸಿದ್ದ ಚೀನಾ ಮೊದಲು ಎಲ್ಎಸಿ ಬಳಿ ತರಬೇತಿ ಪಡೆದಿದ್ದ ಸೈನಿಕರನ್ನು ನಿಯೋಜಿಸಿತು, ನಂತರ ಭಾರತೀಯ ಸೈನ್ಯವನ್ನು ಬೆದರಿಸಲು ಕೆಲವು ಹುನ್ನಾರ ಹೂಡಿ ಭೂಭಾಗ ವಶಪಡಿಸಿಕೊಂಡಿತು.

ಯಾವುದೇ ಸಾಂಪ್ರದಾಯಿಕ ಪ್ರಚಾರ ಶೈಲಿಗೆ ಚೀನಾದ ಮಿಲಿಟರಿಯ ಮಟ್ಟವು ಅಸಮರ್ಪಕವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಚೀನಾವು ಎಲ್‌ಎಸಿ ಬಳಿ ಇಂತಹ ಗೊಂದಲಗಳನ್ನು ಸೃಷ್ಟಿಸಲಾರಂಭಿಸಿತು.

ಈ ಹಿಂಸಾತ್ಮಕ ಸಂಘರ್ಷದ ಬಳಿಕ ಉಭಯ ದೇಶಗಳು ಎಲ್‌ಎಸಿ ಬಳಿ ಭಾರೀ ಪ್ರಮಾಣದ ಸೇನಾ ತುಕಡಿ ನಿಯೋಜಿಸಿದವು. ಅಲ್ಲದೇ ಚೀನಾ ಹಾಗೂ ಭಾರತದ ನಡುವೆ ಬರೋಬ್ಬರಿ ಹನ್ನೊಂದು ಸುತ್ತಿನ ಮಾತುಕತೆಯೂ ನಡೆಯಿತು.

ಹೀಗಿರುವಾಗಲೇ 2020ರ ಆಗಸ್ಟ್ 29-30ರಂದು ಮತ್ತೊಮ್ಮೆ ಚೀನಾ ಸೇನೆ ದಾಲಿ ನಡೆಸುವ ಯತ್ನ ಮಾಡಿತು. ಆದರೆ ಈ ಸಂದರ್ಭದಲ್ಲಿ ಭಾರತೀಯ ಸೇನೆ, ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದ್ದಷ್ಟೇ ಅಲ್ಲದೇ ಕೆಲ ಪ್ರಮುಖ ಶಿಖರಗಳನ್ನು ವಶಪಡಿಸಸಿಕೊಂಡಿತು.

ಈ ಯಶಸ್ಸು ಭಾರತೀಯ ಸೇನೆಗೆ ಚೀನಾ ವಶಪಡಿಸಿಕೊಂಡಿದ್ದ ಫಿಂಗರ್ಸ್‌ ಖಾಲಿ ಮಾಡಿಸುವಂತೆ ಮಾತುಕತೆ ನಡೆಸುವ ಅವಕಾಶ ಕಲ್ಪಿಸಿತು. ಹೀಗಿದ್ದರೂ ಅಂದು ಅತ್ತ ಯುದ್ಧವೂ ಅಲ್ಲದ, ಶಾಂತಿಯೂ ಇಲ್ಲದ ಅಸಹಜ ವಾತಾವರಣ ನಿರ್ಮಾಣವಾಗಿತ್ತು. ದೇಶಕ್ಕೆ ದಾಲಿ ಇಟ್ಟ ಕೊರೋನಾ ಸೋಂಕು ಇಲ್ಲಿನ ಸ್ಥಿತಿಗತಿಯ ಮಾಹಿತಿ ಕಡಿಮೆಗೊಳಿಸಿತಾದರೂ ಇದು ಕೊನೆಯಾಗಿಲ್ಲ.

English summary
Congress leader Rahul Gandhi on Monday slammed the Centre and alleged that the government had ceded thousands of kilometres of India's territory to China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X