ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ 43 ಚೀನೀ ಆಪ್‌ಗಳ ನಿಷೇಧ: ಯಾವ ಯಾವ ಆಪ್‌ ಮೇಲೆ ನಿರ್ಬಂಧ?

|
Google Oneindia Kannada News

ನವದೆಹಲಿ, ನವೆಂಬರ್ 24: ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾ ವಿರುದ್ಧದ ಆರ್ಥಿಕ ಸಮರದ ಭಾಗವಾಗಿ ಆಪ್‌ಗಳನ್ನು ನಿಷೇಧಿಸುವ ಕ್ರಮವನ್ನು ಭಾರತ ಮುಂದುವರಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿ 43 ಚೀನೀ ಆಪ್‌ಗಳನ್ನು ಭಾರತೀಯ ಬಳಕೆದಾರರು ಬಳಸದಂತೆ ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

'ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ದೇಶದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿ ಮಾಡುವಂತಹ ಚಟುವಟಿಕೆಗಳಲ್ಲಿ ಈ ಆಪ್‌ಗಳು ತೊಡಗಿಕೊಂಡಿದ್ದವು ಎಂಬ ಮಾಹಿತಿಗಳ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ಕೇಂದ್ರ ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

ಪೇಮೆಂಟ್ ಸೌಲಭ್ಯ ಆರಂಭಿಸಿದ ವಾಟ್ಸಾಪ್: ಬಳಸುವುದು ಹೇಗೆ?ಪೇಮೆಂಟ್ ಸೌಲಭ್ಯ ಆರಂಭಿಸಿದ ವಾಟ್ಸಾಪ್: ಬಳಸುವುದು ಹೇಗೆ?

ಭಾರತ ಮೂಲದ ಬಳಕೆದಾರರು ಈ ಆಪ್‌ಗಳನ್ನು ಬಳಕೆ ಮಾಡಲು ಸಾಧ್ಯವಾಗದಂತೆ ಬ್ಲಾಕ್ ಮಾಡಿ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯ ಆದೇಶ ಹೊರಡಿಸಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಹ ಸಮನ್ವಯ ಕೇಂದ್ರವು ನೀಡಿರುವ ವರದಿಗಳ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ.

Centre Bans 43 Chinese Mobile Apps For Being Prejudicial To Indias Sovereignty And Integrity

ಪಬ್ಜಿ ಸೇರಿದಂತೆ 118 ಚೀನಾ ಆ್ಯಪ್‌ಗಳು ನಿಷೇಧಪಬ್ಜಿ ಸೇರಿದಂತೆ 118 ಚೀನಾ ಆ್ಯಪ್‌ಗಳು ನಿಷೇಧ

ಯಾವ ಆಪ್‌ಗಳು ನಿಷೇಧ? ಸಂಪೂರ್ಣ ಪಟ್ಟಿ

* ಅಲಿಸಪ್ಲೈಯರ್ಸ್ ಮೊಬೈಲ್ ಆಪ್

* ಅಲಿಬಾಬಾ ವರ್ಕ್‌ಬೆಂಚ್

* ಅಲಿ ಎಕ್ಸ್‌ಪ್ರೆಸ್- ಸ್ಮಾರ್ಟರ್ ಶಾಪಿಂಗ್, ಬೆಟರ್ ಲಿವಿಂಗ್

* ಅಲಿಪೇ ಕ್ಯಾಶಿಯರ್

* ಲಾಲಾಮೋವ್ ಇಂಡಿಯಾ- ಡೆಲಿವರಿ ಆಪ್

* ಡ್ರೈವ್ ವಿತ್ ಲಾಲಾಮೋವ್ ಇಂಡಿಯಾ

* ಸ್ನ್ಯಾಕ್ ವಿಡಿಯೊ

* ಕ್ಯಾಮ್ ಕಾರ್ಡ್- ಬ್ಯುಸಿನೆಸ್ ಕಾರ್ಡ್ ರೀಡರ್

* ಕ್ಯಾಮ್ ಕಾರ್ಡ್- ಬಿಸಿಆರ್ (ವೆಸ್ಟರ್ನ್)

* ಸೌಲ್- ಫಾಲೋ ದಿ ಸೌಲ್ ಟು ಫೈಂಡ್ ಯು

* ಚೈನೀಸ್ ಸೋಷಿಯಲ್- ಫ್ರೀ ಆನ್‌ಲೈನ್ ಡೇಟಿಂಗ್ ವಿಡಿಯೋ ಆಪ್

* ಡೇಟ್ ಇನ್ ಏಷ್ಯಾ- ಡೇಟಿಂಗ್ & ಚಾಟ್

* ವಿಡೇಟ್- ಡೇಟಿಂಗ್ ಆಪ್

* ಫ್ರೀ ಡೇಟಿಂಗ್ ಆಪ್

* ಅಡೋರ್ ಆಪ್

* ಟ್ರೂಲಿ ಚೈನೀಸ್

* ಟ್ರೂಲಿ ಏಷ್ಯನ್

* ಚೀನಾ ಲವ್

* ಡೇಟ್ ಮೈ ಏಜ್

* ಏಷ್ಯನ್ ಡೇಟ್

* ಫ್ಲರ್ಟ್ ವಿಷ್

* ಗೈಸ್ ಓನ್ಲಿ ಡೇಟಿಂಗ್

* ಟ್ಯುಬಿಟ್

* ವಿ ವರ್ಕ್ ಚೀನಾ

* ಫಸ್ಟ್ ಲವ್ ಲೈವ್

* ರೇಲಾ

* ಕ್ಯಾಷಿಯರ್ ವ್ಯಾಲೆಟ್

* ಮ್ಯಾಂಗೋ ಟಿವಿ

* ಎಂಜಿಟಿವಿ- ಹುನಾನ್ ಟಿವಿ ಆಪ್

* ವಿಟಿವಿ- ಟಿವಿ ಆವೃತ್ತಿ

* ವಿಟಿವಿ- ಸಿ ಡ್ರಾಮಾ, ಕೆ ಡ್ರಾಮಾ

* ವಿಟಿವಿ ಲೈಟ್

* ಲಕ್ಕಿ ಲೈವ್

* ಟವೊಬವೊ ಲೈವ್

* ಡಿಂಗ್ ಟಾಕ್

* ಐಡೆಂಟಿಟಿ ವಿ

* ಐಸೋಲ್ಯಾಂಡ್ 2: ಆಷಸ್ ಆಫ್ ಥೀಮ್

* ಬಾಕ್ಸ್‌ಸ್ಟಾರ್

* ಹೀರೋಸ್ ಎವಾಲ್ವಡ್

* ಹ್ಯಾಪಿ ಫಿಷ್

* ಜೆಲ್ಲಿಪಾಪ್ ಮ್ಯಾಚ್

* ಮುಂಚ್ಕಿನ್ ಮ್ಯಾಚ್

* ಕಾಂಕ್ವಿಸ್ಟಾ ಆನ್‌ಲೈನ್ II

ಜೂನ್ 28ರಂದು ಕೇಂದ್ರ ಸರ್ಕಾರವು ಚೀನಾದ 59 ಮೊಬೈಲ್ ಆಪ್‌ಗಳನ್ನು ನಿಷೇಧಿಸಿತ್ತು. ಸೆಪ್ಟೆಂಬರ್ 2ರಂದು 118 ಆಪ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 A ಅಡಿ ನಿಷೇಧಿಸಲಾಗಿತ್ತು.

English summary
Centre bans 43 Chinese mobile apps for being prejudicial to India's sovereignty and integrity. Here is the detail in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X