• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಬ್ಬಗಳ ಸೀಸನ್; ರಾಜ್ಯಗಳಿಗೆ ವಿಶೇಷ ಸೂಚನೆ ಕೊಟ್ಟ ಕೇಂದ್ರ

|
Google Oneindia Kannada News

ನವದೆಹಲಿ, ಆಗಸ್ಟ್‌ 05: ಕೊರೊನಾ ಮೂರನೇ ಅಲೆ ಆತಂಕದ ನಡುನಡುವೆಯೇ ಹಬ್ಬಗಳ ಸೀಸನ್ ಕಾಲಿಡುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದಲ್ಲಿನ ಕೊರೊನಾ ಸೋಂಕಿನ ಪುನರುತ್ಪತ್ತಿ ದರ ಎಚ್ಚರಿಕೆ ಗಂಟೆ ಬಾರಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ಸೂಚನೆ ನೀಡಿದೆ. ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ, ಕೊರೊನಾ ಹರಡುವಿಕೆ ತಡೆಗೆ ಸ್ಥಳೀಯ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರುವಂತೆ ಹಾಗೂ ಹೆಚ್ಚು ಜನಸಂದಣಿ ಸೇರುವುದನ್ನು ನಿಷೇಧಿಸುವಂತೆ ಹೇಳಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ.

ಅಕ್ಟೋಬರ್ ಅಪಾಯ: ಭಾರತದಲ್ಲಿ ಪ್ರತಿನಿತ್ಯ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೊನಾವೈರಸ್!ಅಕ್ಟೋಬರ್ ಅಪಾಯ: ಭಾರತದಲ್ಲಿ ಪ್ರತಿನಿತ್ಯ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೊನಾವೈರಸ್!

ಆಗಸ್ಟ್‌ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆರಂಭಗೊಳ್ಳುತ್ತವೆ. ಮೊಹರಂ, ಓಣಂ, ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾಪೂಜಾ ಹಬ್ಬಗಳು ನಡೆಯುತ್ತವೆ. ಈ ಹಬ್ಬಗಳಿಗಾಗಿ ಖರೀದಿಗೆ ಹಾಗೂ ಆಚರಣೆಗೆ ಹೆಚ್ಚಿನ ಜನರು ಒಂದೆಡೆ ಸೇರುವ ಸಾಧ್ಯತೆಯಿರುವುದರಿಂದ ರಾಜ್ಯಗಳು ಸ್ಥಳೀಯ ಮಟ್ಟದಲ್ಲಿ ನಿರ್ಬಂಧ ಹೇರುವುದು ಅವಶ್ಯಕ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಂದೆ ಓದಿ...

 ಹಬ್ಬಗಳೇ ಕೊರೊನಾ ಸೂಪರ್ ಸ್ಪ್ರೆಡರ್‌ಗಳಾಗಬಹುದು

ಹಬ್ಬಗಳೇ ಕೊರೊನಾ ಸೂಪರ್ ಸ್ಪ್ರೆಡರ್‌ಗಳಾಗಬಹುದು

ಈ ತಿಂಗಳಿನಿಂದ ಹೆಚ್ಚಿನ ಹಬ್ಬಗಳು ಆರಂಭವಾಗುವುದರಿಂದ ಅಧಿಕ ಜನರು ಒಂದೆಡೆ ಸೇರುವ ಸಾಧ್ಯತೆಯಿದೆ. ಹಬ್ಬಗಳೇ ಕೊರೊನಾದ ಸೂಪರ್ ಸ್ಪ್ರೆಡರ್‌ಗಳಾಗಬಹುದಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ ಕಳವಳ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಸೋಂಕು ಹರಡುವ ಸಾಧ್ಯತೆ ಹೇರಳವಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.

2021: ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುಜ ಮಾಸದ ಹಬ್ಬಹರಿದಿನ, ರಜಾದಿನಗಳ ಪಟ್ಟಿ2021: ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುಜ ಮಾಸದ ಹಬ್ಬಹರಿದಿನ, ರಜಾದಿನಗಳ ಪಟ್ಟಿ

"ಇದುವರೆಗಿನ ಶ್ರಮ ವ್ಯರ್ಥವಾಗಬಹುದು ಹುಷಾರ್"

ಈ ಕುರಿತು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಪತ್ರ ಬರೆದು ಎಚ್ಚರಿಸಿದೆ. "ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆ ಟೆಸ್ಟ್‌-ಟ್ರ್ಯಾಕ್-ಟ್ರಿಟ್- ವ್ಯಾಕ್ಸಿನೇಟ್-ಕೊರೊನಾ ನಿರ್ವಹಣೆ ಸೂಕ್ತ ನಡವಳಿಕೆ- ಈ ಐದು ತಂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಸರ್ಕಾರಗಳು ಖಾತ್ರಿಪಡಿಸಿಕೊಳ್ಳಬೇಕು. ಇದರಲ್ಲಿ ಸಡಿಲತೆಯಾದರೆ ಸಾಂಕ್ರಾಮಿಕ ನಿರ್ವಹಣೆಯಲ್ಲಿ ನಮ್ಮ ದೇಶ ಇದುವರೆಗೆ ಕಾಯ್ದುಕೊಂಡಿದ್ದ ಜಾಗ್ರತೆಯನ್ನು ಕಳೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಜ್ಯಗಳಿಂದ ಪೂರ್ವಭಾವಿ ಕ್ರಮಗಳನ್ನು ಕೇಂದ್ರ ಎದುರು ನೋಡುತ್ತಿದೆ" ಎಂದು ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 ಎಂಟು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಏರಿಕೆ

ಎಂಟು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಏರಿಕೆ

ದೇಶದಲ್ಲಿ ಸೋಂಕು ಹರಡುವ ವೇಗವನ್ನು ಸೂಚಿಸುವ ಪುನರುತ್ಪತ್ತಿ ದರ (Reproduction rate) 1ಕ್ಕಿಂತ ಹೆಚ್ಚಾಗಿದೆ. ಎಂಟು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಳು ಕೂಡ ಏರಿಕೆಯಾಗುತ್ತಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿತ್ತು. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ತಮಿಳುನಾಡು, ಮಿಜೋರಾಂ, ಕರ್ನಾಟಕ, ಪುದುಚೇರಿ ಹಾಗೂ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿತ್ತು. ಜನರು ಸೋಂಕು ಹರಡುವಿಕೆಯ ಗಂಭೀರತೆ ಕುರಿತು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿತ್ತು.

 ಭಾರತದಲ್ಲಿ ಪ್ರಸ್ತುತ ಕೊರೊನಾ ಸ್ಥಿತಿಗತಿ

ಭಾರತದಲ್ಲಿ ಪ್ರಸ್ತುತ ಕೊರೊನಾ ಸ್ಥಿತಿಗತಿ

ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಮೊದಲಿನಂತೆ ಮತ್ತೆ 40,000 ಗಡಿ ದಾಟಿದೆ. ದೇಶದಲ್ಲಿ ಒಂದೇ ದಿನ 42,982 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 41,726 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 533 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,26,290ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,18,12,114ಕ್ಕೆ ಏರಿಕೆಯಾಗಿದೆ. ಈವರೆಗೂ 3,09,74,748 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,11,076 ಸಕ್ರಿಯ ಪ್ರಕರಣಗಳಿವೆ.

English summary
Centre asks states to consider local restrictions ahead of upcoming festivals,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X