ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲತಾಣಗಳಿಗೆ ಆದಷ್ಟು ಶೀಘ್ರ ಮಾಹಿತಿ ಹಂಚಿಕೊಳ್ಳಲು ಸರ್ಕಾರದ ಸೂಚನೆ

|
Google Oneindia Kannada News

ನವದೆಹಲಿ, ಮೇ 26: ಹೊಸ ಮಾರ್ಗಸೂಚಿಗಳಿಗೆ ಸಂಬಂಧಪಟ್ಟ ದಾಖಲೆ ಹಾಗೂ ಮಾಹಿತಿಗಳನ್ನು ಆದಷ್ಟು ಶೀಘ್ರವಾಗಿ ಸರ್ಕಾರದೊಂದಿಗೆ ಹಂಚಿಕೊಳ್ಳುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಸೂಚನೆಯನ್ನು ನೀಡಿದೆ. ಈ ವಿಚಾರವಾಗಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪತ್ರವನ್ನು ಬರೆದಿದೆ.

ಕೇಂದ್ರದ ಹೊಸ ಐಟಿ ನಿಯಮಗಳು ಇಂದಿನಿಂದ ಜಾರಿಗೆ ಬರುತ್ತಿದೆ. ಹೀಗಾಗಿ ಸರ್ಕಾರ ಬುಧವಾರ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗೆ ತಮ್ಮ ಪ್ರತಿಕ್ರಿಯೆಯನ್ನು ಕೇಳಿದ್ದು ಆದಷ್ಟು ಶೀಘ್ರವಾಗಿ ಕಳುಹಿಸಬೇಕೆಂದು ತಿಳಿಸಿದೆ.

ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಬರೆದ ಪತ್ರದಲ್ಲಿ, ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಅಡಿಯಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ನೇಮಕಗೊಂಡಿರುವ ಚೀಫ್ ಕಾಂಪ್ಲಿಯೆನ್ಸ್ ಆಫಿಸರ್, ರೆಸಿಡೆಂಟ್ ಗ್ರಿಯೇವೆನ್ಸ್ ಆಫಿಸರ್ ಮತ್ತು ನೋಡಲ್ ಕಾಂಟಾಕ್ಟ್ ಪರ್ಸನ್ ಇವರುಗಳ ವಿವರಗಳನ್ನು ಮತ್ತು ಸಂಪರ್ಕ ಮಾಹಿತಿಯನ್ನು ಐಟಿ ಸಚಿವಾಲಯ ಕೋರಿದೆ.

Centre asks social media platforms Share response ASAP

ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲ ಸಂಸ್ಥೆ ಅಥವಾ ಅದಕ್ಕೆ ಸಂಬಂಧಿಸಿದ ಇತರ ಅಂಗಸಂಸ್ಥೆಗಳ ಬಗ್ಗೆ ಅವುಗಳು ಭಾರತದಲ್ಲಿ ನೀಡುತ್ತಿರುವ ಸೇವೆಗಳ ಬಗ್ಗೆಯೂ ಮಾಹಿತಿಯನ್ನು ಕೋರಲಾಗಿದೆ. ನಿಯಮಗಳ ಪಾಲನೆಯನ್ನು ಪತ್ತೆಹಚ್ಚುವ ದೃಷ್ಟಿಯಿಂದ ಈ ಮಾಹಿತಿಯನ್ನು ಒದಗಿಸುವಂತೆ ಈ ಪತ್ರದಲ್ಲಿ ವಿನಂತಿಸಿಕೊಂಡಿದೆ.

ಈ ವ್ಯಾಪ್ತಿಯಲ್ಲಿ ಬರುವ ಅಪ್ಲಿಕೇಶನ್‌ನ ಹೆಸರು, ವೆಬ್‌ಸೈಟ್ ಮತ್ತು ಸೇವೆಯಂಥ ವಿವರಗಳ ಜೊತೆಗೆ ಸಚಿವಾಲಯವು ಮೂವರು ಪ್ರಮುಖ ಸಿಬ್ಬಂದಿಗಳ ವಿವರಗಳನ್ನು ಕೇಳಿದೆ. ಭಾರತದಲ್ಲಿ ಈ ಸಾಮಾಜಿಕ ಜಾಣತಾಣಗಳ ಹೊಂದಿರುವ ಸಂಪರ್ಕ ವಿಳಾಸವನ್ನು ಕೂಡ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಿದೆ.

English summary
Centre asks social media platforms Share response ASAP report status on digital rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X