ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಭಾರತೀಯ ರೂಪಾಂತರ" ಪದದ ಉಲ್ಲೇಖ ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣಗಳಿಗೆ ಸೂಚನೆ

|
Google Oneindia Kannada News

ನವದೆಹಲಿ, ಮೇ 22: ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ "ಭಾರತೀಯ ರೂಪಾಂತರ" ಪದದ ಉಲ್ಲೇಖವಿರುವ ವರದಿ, ವಿಷಯಗಳನ್ನು ತೆಗೆದುಹಾಕುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಶುಕ್ರವಾರ ಪತ್ರ ಬರೆದಿದೆ.

ಭಾರತದಲ್ಲಿ ಕಳೆದ ವರ್ಷ ಪತ್ತೆಯಾಗಿರುವ B.1.617 ರೂಪಾಂತರವನ್ನು ಜಾಗತಿಕ ಕಾಳಜಿಯ ರೂಪಾಂತರ ಎಂದು ವರ್ಗೀಕರಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮೇ 11ರಂದು ತಿಳಿಸಿತ್ತು. ಅದರ ಮಾರನೇ ದಿನವೇ, ಯಾವುದೇ ಆಧಾರವಿಲ್ಲದೇ "ಭಾರತೀಯ ರೂಪಾಂತರ" ಎಂಬ ಪದವನ್ನು ಮಾಧ್ಯಮ ವರದಿಗಳಲ್ಲಿ ಬಳಸಲಾಗುತ್ತಿದೆ. ಇದು ಕೇವಲ ಒಂದು ರೂಪಾಂತರ ಎಂದು ವಿಶ್ವ ಸಂಸ್ಥೆ ಹೇಳಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿತ್ತು.

Centre Asks Social Media Companies To Remove Content Which Refers Indian Variant

ಶುಕ್ರವಾರ ಮತ್ತೆ ಈ ಕುರಿತು ಸಾಮಾಜಿಕ ಜಾಲತಾಣಗಳಿಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಪತ್ರ ಬರೆದಿದ್ದು, ಕೊರೊನಾ ಭಾರತೀಯ ರೂಪಾಂತರ ಎಂಬ ಪದವನ್ನು ಹೊಂದಿರುವ ಎಲ್ಲಾ ವರದಿಗಳನ್ನು ತೆಗೆದುಹಾಕುವಂತೆ ಸೂಚಿಸಿದೆ.

"ಇದು ಶುದ್ಧ ಸುಳ್ಳು. ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ನಿರ್ದಿಷ್ಟ ರೂಪಾಂತರವನ್ನು ವೈಜ್ಞಾನಿಕವಾಗಿ ಹೆಸರಿಸಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ತನ್ನ ಯಾವುದೇ ವರದಿಯಲ್ಲಿ B.1.617 ರೂಪಾಂತರದೊಂದಿಗೆ ಭಾರತೀಯ ರೂಪಾಂತರ ಎಂಬ ಪದವನ್ನು ಸಂಯೋಜಿಸಿಲ್ಲ" ಎಂದು ಪತ್ರದಲ್ಲಿ ತಿಳಿಸಿದೆ. ಭಾರತೀಯ ರೂಪಾಂತರ ಎಂಬ ಪದದ ಉಲ್ಲೇಖ ತಪ್ಪು ಮಾಹಿತಿಯನ್ನು ಹರಡುತ್ತದೆ ಹಾಗೂ ದೇಶದ ಚಿತ್ರಣಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂಬುದರ ಸ್ಪಷ್ಟ ಸಂದೇಶ ನೀಡಲು ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ಬಿಕ್ಕಟ್ಟು: ಟ್ವಿಟ್ಟರ್ ಸಂಸ್ಥೆಯಿಂದ ಭಾರತಕ್ಕೆ 110 ಕೋಟಿ ರೂ. ನೆರವುಕೊರೊನಾ ಬಿಕ್ಕಟ್ಟು: ಟ್ವಿಟ್ಟರ್ ಸಂಸ್ಥೆಯಿಂದ ಭಾರತಕ್ಕೆ 110 ಕೋಟಿ ರೂ. ನೆರವು

ವಿಶ್ವದಾದ್ಯಂತ, ಕೊರೊನಾ ರೂಪಾಂತರಗಳನ್ನು ವೈದ್ಯರು ಹಾಗೂ ಆರೋಗ್ಯ ತಜ್ಞರು ಗುರುತಿಸುತ್ತಾರೆ ಹಾಗೂ ಆ ಕುರಿತು ಉಲ್ಲೇಖಿಸುತ್ತಾರೆ. ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ ರೂಪಾಂತರಗಳನ್ನು ತಜ್ಞರು ಗುರುತಿಸಿದ್ದಾರೆ.

ಭಾರತೀಯ ರೂಪಾಂತರ ಎಂಬ ಪದ ಹೊಂದಿರುವ ಎಲ್ಲಾ ವರದಿಗಳನ್ನು ತೆಗೆದುಹಾಕುವುದು ಕಷ್ಟ. ಅಂತಹ ನೂರಾರು ಪೋಸ್ಟ್‌ಗಳು ಇರುತ್ತವೆ ಎಂದು ಸಾಮಾಜಿಕ ಜಾಲತಾಣದ ನಿರ್ವಾಹಕರೊಬ್ಬರು ತಿಳಿಸಿದ್ದಾರೆ.

English summary
Information technology ministry has written to all social media companies to take down any content that refers to an indian variant of coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X