ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್ ಟಾಕ್ ಬ್ಯಾನ್?: ಆಪ್‌ ತೆಗೆದು ಹಾಕಲು ಗೂಗಲ್‌, ಆಪಲ್‌ಗೆ ಸೂಚನೆ

|
Google Oneindia Kannada News

ನವದೆಹಲಿ, ಏಪ್ರಿಲ್ 16: ಟಿಕ್ ಟಾಕ್ ಆಪ್‌ಅನ್ನು ಆಪ್‌ ಸ್ಟೋರ್‌ಗಳಿಂದ ತೆಗೆದುಹಾಕುವಂತೆ ಗೂಗಲ್ ಮತ್ತು ಆಪಲ್ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಅಲ್ಪಕಾಲದ ವಿಡಿಯೋಗಳನ್ನು ಮಾಡುವ ಈ ಜನಪ್ರಿಯ ಆಪ್‌ಅನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದ ಬೆನ್ನಲ್ಲೇ ಕೇಂದ್ರ ಈ ನಿರ್ಧಾರ ಕೈಗೊಂಡಿದೆ.

ಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ಮಂಗಳವಾರ ಈ ಆದೇಶ ಹೊರಡಿಸಿದೆ. ಟಿಕ್ ಟಾಕ್‌ಅನ್ನು ನಿಷೇಧಿಸುವ ಮದ್ರಾಸ್ ಹೈಕೋರ್ಟ್‌ನ ಆದೇಶದ ಬಗ್ಗೆ ಸುಪ್ರೀಂಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಇನ್ನು ಮುಂದೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗಳಿಂದ ಟಿಕ್ ಟಾಕ್ ಡೌನ್‌ಲೋಡ್ ಮಾಡದಂತೆ ತಡೆಯಲು ಕಂಪೆನಿಗಳಿಗೆ ಸೂಚಿಸಲಾಗಿದೆ. ಆದರೆ, ಈಗಾಗಲೇ ಆಪ್‌ಅನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಸುತ್ತಿರುವವರಿಗೆ ಈ ಆದೇಶದಿಂದ ಸದ್ಯಕ್ಕೆ ಯಾವುದೇ ತೊಡಕಾಗುವುದಿಲ್ಲ.

centre asked Google Apple to remove TikTok from App stores

ಈ ನಡೆಯು ಭವಿಷ್ಯದಲ್ಲಿ ಟಿಕ್‌ಟಾಕ್‌ಅನ್ನು ಸಂಪೂರ್ಣವಾಗಿ ನಿಷೇಧಿಸುವ ಸೂಚನೆ ನೀಡದೆ.

ಒಂದೇ ದಿನ ಎರಡು ಜೀವ ತೆಗೆದ ಟಿಕ್‌ಟೋಕ್ ವಿಡಿಯೋ ಹುಚ್ಚು!ಒಂದೇ ದಿನ ಎರಡು ಜೀವ ತೆಗೆದ ಟಿಕ್‌ಟೋಕ್ ವಿಡಿಯೋ ಹುಚ್ಚು!

'ಟಿಕ್ ಟಾಕ್ ಆಪ್ಲಿಕೇಷನ್‌ಅನ್ನು ಡೌನ್‌ಲೋಡ್ ಮಾಡುವುದನ್ನು ತಡೆಯುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಈ ಆಪ್‌ಅನ್ನು ಆಪ್ ಸ್ಟೋರ್‌ಗಳಿಂದ ತೆಗೆದುಹಾಕುವಂತೆ 'ಮೈಟಿ' ಗೂಗಲ್ ಮತ್ತು ಆಪಲ್‌ಗೆ ನಿರ್ದೇಶಿಸಿದೆ. ಈಗ ಆದೇಶವನ್ನು ಪಾಲಿಸುವುದು ಅಥವಾ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಕಂಪೆನಿಗಳಿಗೆ ಬಿಟ್ಟಿರುವ ವಿಚಾರ' ಎಂದು ಮೂಲಗಳು ತಿಳಿಸಿವೆ.

ತಮಿಳುನಾಡಿನಲ್ಲಿ ಟಿಕ್‌ಟಾಕ್ ಮೊಬೈಲ್ ಆ್ಯಪ್ ನಿಷೇಧ, ಕಾರಣಗಳೇನು?ತಮಿಳುನಾಡಿನಲ್ಲಿ ಟಿಕ್‌ಟಾಕ್ ಮೊಬೈಲ್ ಆ್ಯಪ್ ನಿಷೇಧ, ಕಾರಣಗಳೇನು?

ಚೀನಾ ಮೂಲದ ವಿಡಿಯೋ ಆಪ್ 'ಟಿಕ್ ಟಾಕ್' ಅಶ್ಲೀಲ ಚಿತ್ರಗಳಿಗೆ ಉತ್ತೇಜನ ನೀಡುತ್ತಿದ್ದು, ಅದನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅಲ್ಲದೆ, ಈ ಆಪ್ ಬಳಸಿ ತಯಾರಿಸಿದ ವಿಡಿಯೋಗಳನ್ನು ಪ್ರಸಾರ ಮಾಡದಂತೆಯೂ ಹೈಕೋರ್ಟ್ ಮಾಧ್ಯಮಗಳಿಗೆ ನಿರ್ದೇಶಿಸಿತ್ತು.

English summary
Ministry of Electronics and Information Technology (Meity) aked Google and Apple to remove popular short video app TikTok from app stores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X