ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮೂರನೇ ಲಸಿಕೆಗೆ ಸಿಕ್ಕಿತು ಅನುಮೋದನೆ

|
Google Oneindia Kannada News

ನವದೆಹಲಿ, ಏಪ್ರಿಲ್ 12: ದೇಶದಲ್ಲಿ ಮೂರು ವಾರಗಳಿಂದ ಕೊರೊನಾ ದಿನನಿತ್ಯದ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೇಂದ್ರ್ ಸರ್ಕಾರ ಸ್ಫುಟ್ನಿಕ್ ವಿ ಲಸಿಕೆಗೆ ಸೋಮವಾರ ಅನುಮೋದನೆ ನೀಡಿದೆ.

ರಷ್ಯಾ ಅಭಿವೃದ್ಧಿಪಡಿಸಿದ ಸ್ಫುಟ್ನಿಕ್ ವಿ ಲಸಿಕೆಗೆ ಸೋಮವಾರ ಕೇಂದ್ರ ಅನುಮೋದನೆ ನೀಡಿದ್ದು, ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ನಂತರ ಭಾರತದಲ್ಲಿ ಅನುಮೋದನೆ ಪಡೆಯುತ್ತಿರುವ ಮೂರನೇ ಲಸಿಕೆ ಇದಾಗಿದೆ. ದೇಶೀಯ ಔಷಧ ತಯಾರಿಕಾ ಕಂಪನಿ ಡಾ. ರೆಡ್ಡಿ ಲ್ಯಾಬೊರೇಟರೀಸ್ ಈ ಲಸಿಕೆಯನ್ನು ಉತ್ಪಾದಿಸಲಿದೆ.

ಲಸಿಕೆ ಕೊರತೆ; ಭಾರತದಲ್ಲಿ ಇನ್ನೂ ಐದು ಕೊರೊನಾ ಲಸಿಕೆಗಳಿಗೆ ಶೀಘ್ರವೇ ಅನುಮೋದನೆಲಸಿಕೆ ಕೊರತೆ; ಭಾರತದಲ್ಲಿ ಇನ್ನೂ ಐದು ಕೊರೊನಾ ಲಸಿಕೆಗಳಿಗೆ ಶೀಘ್ರವೇ ಅನುಮೋದನೆ

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನವು ಜನವರಿ 16ರಿಂದ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಮಾರ್ಚ್ 1ರಿಂದ ಎರಡನೇ ಹಂತದ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದ್ದು, ಏಪ್ರಿಲ್ 2ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

 Centre Approves Russias Covid 19 Sputnik V Vaccine

ಕೆಲವು ರಾಜ್ಯಗಳಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಕೊರೊನಾ ಲಸಿಕೆಯ ಅಭಾವ ಎದುರಾಗಿರುವುದಾಗಿ ರಾಜ್ಯಗಳು ಆರೋಪಿಸಿವೆ. ಈ ಎಲ್ಲಾ ಸಂಗತಿಗಳ ಬೆನ್ನಲ್ಲೇ ಸ್ಫುಟ್ನಿಕ್ ವಿ ಲಸಿಕೆಗೆ ಸೋಮವಾರ ಅನುಮೋದನೆ ದೊರೆತಿದೆ. ಸದ್ಯಕ್ಕೆ ಭಾರತದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ನಂತರ ಸ್ಫುಟ್ನಿಕ್ ವಿ ಲಸಿಕೆಯು ಲಭ್ಯವಾಗಲಿದೆ.

English summary
The central government on Monday approved Sputnik-V, the vaccine against the coronavirus disease developed by Russia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X