ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಯೋಟೆಕ್‌ಗೆ 65 ಕೋಟಿ ರೂ ನೆರವು ಪ್ರಕಟಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಏಪ್ರಿಲ್ 16: ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿನ ಏರಿಕೆ ನಡುವೆ ಕೋವಿಡ್-19 ಲಸಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಬೇಡಿಕೆಯನ್ನು ತಲುಪಲು ಲಸಿಕೆ ಉತ್ಪಾದನೆಯ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆಗೆ ಉತ್ತೇಜನ ನೀಡುವ ಸಲುವಾಗಿ ಭಾರತ್ ಬಯೋಟೆಕ್‌ಗೆ 65 ಕೋಟಿ ರೂಪಾಯಿ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಸಹಾಯವನ್ನು ಬೆಂಗಳೂರಿನಲ್ಲಿರುವ ಭಾರತ್ ಬಯೋಟೆಕ್‌ನ ಘಟಕಕ್ಕೆ ನೀಡಲಾಗುತ್ತಿದೆ.

ಭಾರತದಲ್ಲಿಯೇ ತಯಾರಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ದೇಶಾದ್ಯಂತ ಬಳಸಲಾಗುತ್ತಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿ ಉತ್ಪಾದಿಸುತ್ತಿದೆ. ಕೇಂದ್ರ ಸರ್ಕಾರವು ತನ್ನ ಆತ್ಮನಿರ್ಭರ ಭಾರತ 3.0 ಮಿಷನ್ ಕೋವಿಡ್ ಸುರಕ್ಷಾದ ಭಾಗವಾಗಿ ಭಾರತ್ ಬಯೋಟೆಕ್‌ಗೆ ಈ ಆರ್ಥಿಕ ನೆರವು ನೀಡುತ್ತಿದೆ.

ಕೋವಿಡ್ ಲಸಿಕೆಯ ಕಚ್ಚಾ ಸಾಮಗ್ರಿ ನಿರ್ಬಂಧ ತೆರವುಗೊಳಿಸಿ: ಅಮೆರಿಕಕ್ಕೆ ಮನವಿಕೋವಿಡ್ ಲಸಿಕೆಯ ಕಚ್ಚಾ ಸಾಮಗ್ರಿ ನಿರ್ಬಂಧ ತೆರವುಗೊಳಿಸಿ: ಅಮೆರಿಕಕ್ಕೆ ಮನವಿ

ಕೋವ್ಯಾಕ್ಸಿನ್ ಲಸಿಕೆಯ ಈಗಿನ ಉತ್ಪಾದನಾ ಸಾಮರ್ಥ್ಯವನ್ನು ಮೇ-ಜೂನ್ ವೇಳೆಗೆ ದುಪ್ಪಟ್ಟು ಮಾಡಲಾಗುತ್ತದೆ. ಜುಲೈ-ಆಗಸ್ಟ್ ವೇಳೆಗೆ ಅದನ್ನು 6-7 ಪಟ್ಟು ಹೆಚ್ಚಿಸಲಾಗುವುದು. ಅಂದರೆ ಏಪ್ರಿಲ್‌ನಲ್ಲಿ 1 ಕೊಟಿಯಷ್ಟಿರುವ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಜುಲೈ-ಆಗಸ್ಟ್ ವೇಳೆಗೆ 6-7 ಕೋಟಿ ಡೋಸ್‌ಗಳಿಗೆ ಹೆಚ್ಚಿಸುವ ಗುರಿ ಹೊಂದಿದೆ. ಈ ಉತ್ಪಾದನಾ ಸಾಮರ್ಥ್ಯವನ್ನು ಸೆಪ್ಟೆಂಬರ್ ವೇಳೆಗೆ ಪ್ರತಿ ತಿಂಗಳಿಗೆ 10 ಕೋಟಿ ಡೋಸ್‌ಗೆ ತಲುಪಿಸಬಹುದು ಎಂದು ಸರ್ಕಾರ ನಿರೀಕ್ಷಿಸಿದೆ.

Centre Announces Rs 65 Crore Financial Aide To Bharat Biotech To Boost Covaxin Production

'ಭಾರತ್ ಬಯೋಟೆಕ್‌ನ ಬೆಂಗಳೂರಿನ ನೂತನ ಘಟಕಕ್ಕೆ ಸುಮಾರು 65 ಕೋಟಿ ಆರ್ಥಿಕ ನೆರವನ್ನು ಸರ್ಕಾರ ಒದಗಿಸುತ್ತಿದೆ. ಇದು ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶ ಹೊಂದಿದೆ' ಎಂದು ಸರ್ಕಾರ ತಿಳಿಸಿದೆ.

ಭಾರತ್ ಬಯೋಟೆಕ್ ಅಲ್ಲದೆ ಕೇಂದ್ರ ಸರ್ಕಾರವು ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರ ಸ್ವಾಮ್ಯದ ಹಾಫ್ಕಿನ್ ಬಯೋಫಾರ್ಮಸಿಟಿಕಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಕೂಡ ಅಂದಾಜು 65 ಕೋಟಿ ನೆರವು ಪ್ರಕಟಿಸಿದೆ.

English summary
Centre announced Rs 65 crore financial aide to Bharat Biotech to boost Covaxin production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X