ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸಾಮಗ್ರಿ ಆಮದು, ಆರೋಗ್ಯ ಸೆಸ್‌ಗೆ ವಿನಾಯಿತಿ ಘೋಷಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಮೇ 03: ಕೊರೊನಾ ಸಂಬಂಧಿತ ಪರಿಹಾರ ಸಾಮಗ್ರಿಗಳ ಆಮದಿಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಆರೋಗ್ಯ ಸೆಸ್‌ಗೆ ಕೇಂದ್ರ ಸರ್ಕಾರ ತಾತ್ಕಾಲಿಕ ವಿನಾಯಿತಿ ನೀಡಿದೆ.

ಈ ವಿನಾಯಿತಿ ತಾತ್ಕಾಲಿಕ ಮತ್ತು ಜೂನ್ 30, 2021 ರವರೆಗೆ ಮಾಡಿದ ಎಲ್ಲಾ ನಿರ್ದಿಷ್ಟ ಆಮದುಗಳಿಗೆ ಅನ್ವಯಿಸುತ್ತದೆ. ಈ ವಿನಾಯಿತಿಯು ಈಗಾಗಲೇ ಆಮದು ಮಾಡಿಕೊಂಡ ಸರಕುಗಳನ್ನು ಒಳಗೊಳ್ಳುತ್ತದೆ ಆದರೆವಿನಾಯಿತಿ ನೀಡಲು ಪ್ರಾರಂಭವಾಗುವ ದಿನಾಂಕ ಯಾವುದೆಂದು ಸ್ಪಷ್ಟವಾಗಿಲ್ಲ.

Fact Check: ಮಾರ್ಚ್ 2021ರವರೆಗೆ ಕೊರೊನಾ ಲಸಿಕೆ ಖರೀದಿಸಿಯೇ ಇರಲಿಲ್ಲ ಭಾರತ? Fact Check: ಮಾರ್ಚ್ 2021ರವರೆಗೆ ಕೊರೊನಾ ಲಸಿಕೆ ಖರೀದಿಸಿಯೇ ಇರಲಿಲ್ಲ ಭಾರತ?

ಈ ಸಂಬಂಧ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ಸಂಬಂಧಿತ ಪರಿಹಾರ ಸಾಮಗ್ರಿಗಳ ಆಮದಿಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಆರೋಗ್ಯ ಸೆಸ್‌ಗೆ ತಾತ್ಕಾಲಿಕ ವಿನಾಯಿತಿ ನೀಡಿದೆ ಎಂದು ಹೇಳಿದೆ.

Centre Announces Ad Hoc IGST Exemption On Imports Of COVID-19 Relief Material

ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ 11 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗಾಗಿ 1732.50 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಏಪ್ರಿಲ್ 28ರಂದೇ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಟಿಡಿಎಸ್ ನಂತರ 1699.50 ಕೋಟಿ ರೂ.ಗಳಷ್ಟಿದ್ದ ಮೊತ್ತವನ್ನು ಏಪ್ರಿಲ್ 28 ರಂದು ಎಸ್‌ಐಐ ಸ್ವೀಕರಿಸಿದೆ ಎಂದು ಸಚಿವಾಲಯ ಹೇಳಿದೆ.

ದಿನಾಂಕದಂತೆ, 10 ಕೋಟಿ ಡೋಸ್‌ಗಳ ಪೈಕಿ ಮೇ 3 ರವರೆಗೆ 8.744 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೋವಿಡ್ ಲಸಿಕೆಗಾಗಿ ಕೇಂದ್ರವು ಯಾವುದೇ ಹೊಸ ಆರ್ಡರ್ ನೀಡಿಲ್ಲ ಎಂದು ಆರೋಪಿಸಿರುವ ಮಾಧ್ಯಮ ವರದಿಗಳು ತಪ್ಪು ಮತ್ತು ಸತ್ಯಕ್ಕೆ ದೂರವಾದವು ಎಂದು ಕೇಂದ್ರ ಹೇಳಿದೆ.

English summary
As the second wave of the coronavirus pandemic continues to trouble the country, the Central has exempted IGST or integrated GST on import of goods received free of cost for free distribution of COVID relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X